ರೈತರು ಬರ ಪರಿಹಾರಕ್ಕಾಗಿ ತುರ್ತಾಗಿ ಪ್ರೂಟ್ ತಂತ್ರಾಂಶ ದಲ್ಲಿ ಎಫ್,ಐ,ಡಿ ಸಂಖ್ಯೆಯನ್ನು ನೊಂದಾಯಿಸಿಕೊಳ್ಳಲು ಮನವಿ!
ಕುಣಿಗಲ್ ತಾಲ್ಲೂಕಿನ ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ಫ್ರೂಟ್ ತಂತ್ರಾಂಶದಲ್ಲಿ ಎಫ್,ಐ,ಡಿ ಮಾಡಿಸಿಕೊಳ್ಳಬೇಕು ಎಂದು ತಾಲ್ಲೂಕು ದಂಡಾಧಿಕಾರಿ ವಿಶ್ವನಾಥ್ ತಿಳಿಸಿದ್ದಾರೆ ಈಗಾಗಲೇ ಎಫ್,ಐ,ಡಿ ಸಂಖ್ಯೆ ಪಡೆದಿರುವ ರೈತರು ತಮ್ಮ ಎಲ್ಲಾ ಜಮೀನಿನ ಸರ್ವೆ ನಂಬರ್ ಗಳನ್ನು ಎಫ್,ಐ,ಡಿ ಯೊಂದಿಗೆ ಜೋಡಣೆ ಹಾಗಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು ಹಾಗೂ ಪ್ರೂಟ್ ತಂತ್ರಾಂಶದಲ್ಲಿ ಎಫ್,ಐ,ಡಿ ಸಂಖ್ಯೆಯನ್ನು ನೊಂದಾಯಿಸಿಕೊಳ್ಳದ ರೈತರು ತುರ್ತಾಗಿ ನವೆಂಬರ್ 30 ಒಳಗಾಗಿ ಕಡ್ಡಾಯವಾಗಿ ತಮ್ಮ ಜಮೀನಿನ ಅಗತ್ಯ ದಾಖಲೆಗಳೊಂದಿಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿಗೆ ಭೇಟಿ ನೀಡಿ ಫ್ರೂಟ್ ತಂತಾಂಶದಲ್ಲಿ ಎಫ್,ಐ,ಡಿ ಮಾಡಿಸಿಕೊಳ್ಳಲು ತಿಳಿಸಿದ್ದಾರೆ ಪ್ರೂಟ್ ತಂತ್ರಾಂಶದಲ್ಲಿ ಎಫ್,ಐ,ಡಿ ಸಂಖ್ಯೆ ನೋಂದಣಿ ಮಾಡದೆ ಇದ್ದಲ್ಲಿ ಅಂತಹ ರೈತರಿಗೆ ಸರ್ಕಾರದ ಯಾವುದೇ ಸೌಲಭ್ಯಗಳಾಗಲಿ ಅಥವಾ ಬೆಳೆ ನಷ್ಟ ಪರಿಹಾರ ಬರ ಪರಿಹಾರ ರೈತರ ಖಾತೆಗೆ ಜಮೆ ಆಗುವುದಿಲ್ಲ ಇದಕ್ಕೆ ರೈತರೆ ನೇರಹೊಣೆ ಆಗುತ್ತಾರೆ ಎಂದು ತಿಳಿಸಲಾಗಿದೆ ನವಂಬರ್ 30ರ ಒಳಗಾಗಿ ಎಲ್ಲಾ ರೈತರು ತಪ್ಪದೆ ತಮ್ಮ ಆಧಾರ್ ಕಾರ್ಡ್ ಪ್ರತಿ, ಪಹಣಿ ಪ್ರತಿ,ಬ್ಯಾಂಕ್ ಪಾಸ್ ಬುಕ್ ಪ್ರತಿ,ದೂರವಾಣಿ ಸಂಖ್ಯೆ ಹಾಗೂ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ರೈತರು ತಮ್ಮ ಜಾತಿ ಪ್ರಮಾಣ ಪತ್ರವನ್ನು ಅಗತ್ಯ ದಾಖಲೆಗಳೊಂದಿಗೆ ಲಗತ್ತಿಸಿ ಅತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಅಥವಾ ಗ್ರಾಮ ಆಡಳಿತ ಅಧಿಕಾರಿಗಳ ಕಚೇರಿಗೆ ಬೇಟಿ ನೀಡಿ ಎಫ್,ಐ,ಡಿ ಮಾಡಿಸಿಕೊಳ್ಳುವಂತೆ ಮನವಿ ಮಾಡಲಾಗಿದೆ ಹೆಚ್ಚಿನ ಮಾಹಿತಿಗೆ ಕೃಷಿ ಇಲಾಖೆ ಅಥವಾ ತಾಲ್ಲೂಕು ಕಚೇರಿಗೆ ಬೇಟಿ ನೀಡಲು ಕೋರಿದೆ,@publicnewskunigal