ಹೊಡಘಟ್ಟ ಗ್ರಾಮದ ಕೆರೆಯ ನೀರಿಗೆ ಕೆಮಿಕಲ್ ಮಿಶ್ರಣ ಲಕ್ಷಾಂತರ ಮೀನು ಮರಿಗಳ ಸಾವು!

Spread the love

ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೊಬಳಿ ವ್ಯಾಪ್ತಿಯ ಹೊಡಘಟ್ಟ ಗ್ರಾಮದ ಕೆರೆಗೆ ಕೆಮಿಕಲ್ ಮಿಶ್ರಣ ಇನ್ನೆಲೆ ಕೆರೆಯಲ್ಲಿ ಲಕ್ಷಾಂತರ ಮೀನುಮರಿಗಳು ಸಾವನ್ನಪ್ಪಿರುವ ಘಟನೆ ಶನಿವಾರ ರಾತ್ರಿ ನಡೆದಿದೆ

ಹೊಡಘಟ್ಟ ಗ್ರಾಮದ ಚಂದನ್ ಎಂಬುವವರು ಜೋಡಿ ಹೊಸಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಕೆರೆಯನ್ನು ಮೀನು ಸಾಕಾಣಿಕೆ ಮಾಡಲು ಹಾರಾಜೀನ ಮೂಲಕ ಎರಡು ವರೆ ಲಕ್ಷಕ್ಕೆ ಕೆರೆಯನ್ನು ಗುತ್ತಿಗೆ ಪಡೆದುಕೊಂಡಿದ್ದು ಕಳೆದ ಎರಡು ತಿಂಗಳ ಹಿಂದೆ ಕೆರೆಗೆ ಐದುವರೆ ಲಕ್ಷ ಮೀನಿನ ಮರಿಗಳನ್ನು ಬಿಟ್ಟಿದ್ದರು

ಹೊಡಘಟ್ಟ ಗ್ರಾಮದ ಕೆರೆಯಲ್ಲಿ ತೇಲುತ್ತಿರುವ ಮೀನಿನ ಮರಿಗಳು

ಆದರೆ ಶನಿವಾರ ಕೆರೆಯಲ್ಲಿ ರಾಶಿ ರಾಶಿ ಮೀನಿನ ಮರಿಗಳು ಸಾವನ್ನಪ್ಪಿ ತೇಲುತ್ತಿರುವುದನ್ನು ಕಂಡು ಗ್ರಾಮಸ್ಥರು ಅತಂಕಕ್ಕೆ ಒಳಗಾಗಿದ್ದು ಈ ಸಂಬಂದ ಕೆರೆಯನ್ನು ಗುತ್ತಿಗೆ ಪಡೆದಿದ್ದ ಚಂದನ್ ಕುಣಿಗಲ್ ಪೋಲಿಸ್ ಠಾಣೆಗೆ ದೂರು ನೀಡಿದ ಹಿನ್ನೆಲೆ ಸ್ಥಳಕ್ಕೆ ಪೋಲಿಸರು ಬೇಟಿನೀಡಿ ಪರಿಶೀಲನೆ ನಡೆಸಿದ್ದು ತನಿಖೆ ಕೈಗೊಂಡಿದ್ದಾರೆ.

ಘಟನೆಗೆ ರಾಜಕೀಯ ಬಣ್ಣ ಬಳಿಯಲಾಗಿದ್ದು ಚಂದನ್ ಮಾತನಾಡಿ ರಾಜಕೀಯ ದುರುದ್ದೇಶದಿಂದ ಈ ರೀತಿ ಮಾಡಲಾಗಿದೆ ಇನ್ನೂ ಚಂದನ್ ಪತ್ನಿ ಜೋಡಿ ಹೊಸಹಳ್ಳಿ ಗ್ರಾಮ ಪಂಚಾಯಿತಿಯ ಸದಸ್ಯೆಯಾಗಿದ್ದು ಕೆರೆಯನ್ನು ಗುತ್ತಿಗೆ ಪಡೆದ ಕಾರಣಕ್ಕೆ ಈ ರೀತಿ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ,