ಕುಣಿಗಲ್ ನಲ್ಲಿ ಶಕ್ತಿ ಪ್ರದರ್ಶನಕ್ಕೆ ಹಾಲಿ ಆಗೂ ಮಾಜಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಬಿಜೆಪಿ ಸಜ್ಜು
ಕುಣಿಗಲ್ ಪಟ್ಟಣದ ಜಿಕೆಬಿಎಂಎಸ್ ಮೈದಾನದಲ್ಲಿ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಸುವ ಮೂಲಕ ತಾಲ್ಲೂಕಿನಲ್ಲಿ ಶಕ್ತಿ ಪ್ರದರ್ಶನಕ್ಕೆ ಬಿಜೆಪಿ ಮುಂದಾಗಿದೆ ಇನ್ನೂ ಮಾಜಿ ಸಂಸದ ಎಸ್,ಪಿ,ಮುದ್ದಹನುಮೇಗೌಡ ಬಿಜೆಪಿ ಸೇರ್ಪಡೆಯಾದ ಬಳಿಕ ತಾಲ್ಲೂಕಿನ ಬಿಜೆಪಿ ವಲಯಕ್ಕೆ ಆನೆ ಬಲ ಬಂದಂತಾಗಿದ್ದು ಈ ಭಾರಿ ಕುಣಿಗಲ್ ನಲ್ಲಿ ಕಮಲ ಅರಳಿಸಲು ನಾಯಕರು ಇನ್ನಿದ್ಲದ ಕಸರತ್ತು ನಡೆಸುತ್ತಿದ್ದಾರೆ
ಮೂರುಭಾರಿ ತಾಲ್ಲೂಕಿನಲ್ಲಿ ಬಿಜೆಪಿ ಸೊಲನ್ನು ಅನುಭವಿಸಿದ ಮೇಲೆ ಈ ಭಾರಿ ಶತಾಯಗತಾಯವಾಗಿ ತಾಲ್ಲೂಕಿನಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಹಿರಿಯ ನಾಯಕರ ನೇತೃತ್ವದಲ್ಲಿ ಇನ್ನಿದ್ಲದ ಕಸರತ್ತು ನಡೆಸುತ್ತಿದ್ದು ಬೃಹತ್ ಶಕ್ತಿ ಪ್ರದರ್ಶನಕ್ಕೆ ಈಗ ವೆದಿಕೆ ಸಿದ್ದವಾಗುತ್ತಿದೆ ಡಿಸೆಂಬರ್ 7ರಂದು ಪಟ್ಟಣದ ಜಿಕೆಬಿಎಂಎಸ್ ಮೈದಾನದಲ್ಲಿ ಇಪ್ಪತ್ತೈದು ಸಾವಿರಕ್ಕಿಂತ ಅಧಿಕ ಮಂದಿ ಕಾರ್ಯಕರ್ತರನ್ನು ಸೇರಿಸುವ ಮೂಲಕ ಬೃಹತ್ ಸಮಾವೇಶ ನಡೆಸಿ ಶಕ್ತಿ ಪ್ರದರ್ಶನಕ್ಕೆ ತಾಲ್ಲೂಕಿನ ಬಿಜೆಪಿ ಸಜ್ಜಗಿದ್ದು ಕಾರ್ಯಕ್ರಮಕ್ಕೆ ಬಿಜೆಪಿ ಹಿರಿಯ ಮುಖಂಡ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೆರಿದಂತೆ ಕೇಂದ್ರ ಸಚಿವರು ಕಾರ್ಯಕ್ರಮದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ
ಈಗಾಗಲೆ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ ನೆತೃತ್ವದಲ್ಲಿ ಶುಕ್ರವಾರ ಪಟ್ಟಣದ ಬಿಜೆಪಿ ಕಚೆರಿಯಲ್ಲಿ ಪೂರ್ವ ಭಾವಿ ಸಭೆ ನಡೆಸಿರುವ ಮುಖಂಡರು ಬೃಹತ್ ಸಮಾವೇಶದಲ್ಲಿ ಕುಣಿಗಲ್ ಅಭ್ಯರ್ಥಿ ಹೆಸರನ್ನು ಘೊಷಿಸುವ ಮೂಲಕ ಹಿರಿಯರು ನಾಯಕರು ತಾಲ್ಲೂಕಿನಲ್ಲಿ ಈಗಾಗಲೆ ಟಿಕೆಟ್ ವಿಚಾರದಲ್ಲಿ ಎದ್ದಿರುವ ಗೊಂದಲಗಳಿಗೆ ತೆರೆ ಎಳೆಯುವ ನಿರೀಕ್ಷೆ ಇದೆ
ಇನ್ನೂ ಟಿಕೆಟ್ ಖಾತರಿ ಪಡಿಸಿಕೊಂಡು ಪಕ್ಷ ಸೇರ್ಪಡೆಗೊಂಡಿರುವ ಮಾಜಿ ಸಂಸದ ಮುದ್ದಹನುಮೇಗೌಡ ರವರಿಗೆ ವಿಧಾನಸಭೆ ಅಥವಾ ಲೋಕಸಭೆ ಇವೆರಡರಲ್ಲಿ ಯಾವ ಟಿಕೆಟ್ ಎಂಬುದು ಬಹಿರಂಗವಾಗಬೇಕಿದ್ದು ಹಾಗೂ ಹಲವು ವರ್ಷಗಳಿಂದ ಬಿಜೆಪಿಯ ಸಂಘಟನೆಯಲ್ಲಿ ತೊಡಗಿರುವ ಹಾಲಿ ಮುಖಂಡ ಡಿ.ಕೃಷ್ಣಕುಮಾರ್,ಇಬ್ಬರಲ್ಲಿ ಯಾರಿಗೆ ಒಲಿಯಲಿದೆ ಅದೃಷ್ಟ!!
ತಾಲ್ಲೂಕಿನ ಬಿಜೆಪಿ ವಲಯದಲ್ಲಿ ಕುಣಿಗಲ್ ಟಿಕೆಟ್ ವಿಷಯಕ್ಕೆ ಎದ್ದಿರುವ ಕುತೂಹಲಕ್ಕೆ ಜನಸಂಕಲ್ಪ ಯಾತ್ರೆ (ಶಕ್ತಿ ಪ್ರದರ್ಶನ) ಕಾರ್ಯಕ್ರಮದಲ್ಲಿ ಬ್ರೇಕ್ ಬಿಳಲಿದೆಯ ಕಾದುನೊಡಬೇಕಿದೆ ಈಗಾಗಲೆ ಮೂರು ಭಾರಿ ಸೊಲನ್ನು ಅನುಭವಿಸಿರುವ ಡಿ,ಕೃಷ್ಣಕುಮಾರ್ ರವರಿಗೆ ಟಿಕೆಟ್ ಖಚಿತವಾದಲ್ಲಿ ಈ ಭಾರಿ ಕುಣಿಗಲ್ ವಿಧಾನಸಭೆ ಚುಣಾವಣೆ ಇನ್ನಷ್ಟು ರಂಗೆರಲಿದೆ ತಾಲ್ಲೂಕಿನ ಇತಿಹಾಸ ಪುಟ ಸೇರಲಿದೆ 2023 ರ ಚುಣಾವಣೆ ಕಣ
ಇನ್ನೂ ಸದ್ದಿಲ್ಲದೆ ತಾಲ್ಲೂಕಿನಲ್ಲಿ ಬಿಜೆಪಿ ಪಕ್ಷ ಸಂಘಟನೆಯಲ್ಲಿ ತೊಡಗಿರುವ ಹೆಚ್,ಡಿ ರಾಜೇಶ್ ಗೌಡರ ನಡೆ ಕುತೂಹಲವಾಗಿ ಉಳಿದಿದೆ
ಈ ಭಾರಿ ವಿಧಾನಸಭೆಯ ಚುಣಾವಣೆಯಲ್ಲಿ ಟಿಕೆಟ್ ನನ್ನದೆ ಎಂದು ಈಗಾಗಲೆ ತಾಲ್ಲೂಕಿನಾದ್ಯಂತ ಪಕ್ಷ ಸಂಘಟನೆಯಲ್ಲಿ ತೊಡಗಿ ಹಲವಾರು ಕಾರ್ಯಕ್ರಮಗಳನ್ನು ನಡೆಸುವ ಮೂಲಕ ತಾಲ್ಲೂಕು ಬಿಜೆಪಿ ವಲಯದಲ್ಲಿ ಗುರುತಿಸಿಕೊಂಡಿರುವ ಹೆಚ್,ಡಿ ರಾಜೇಶ್ ಗೌಡರ ನಡೆ ಕುತೂಹಲವಾಗಿ ಉಳಿದಿದೆ ಇನ್ನು ತಾಲ್ಲೂಕಿಗೆ ಮಾಜಿ ಮುಖ್ಯ ಮಂತ್ರಿ ಡಿ.ವಿ ಸದಾನಂದಗೌಡ ಆಗಮಿಸಿದ ಸಂದರ್ಭದಲ್ಲಿ ರಾಜೇಶ್ ಗೌಡರ ಸುಳಿವು ಇಲ್ಲದಿರುವುದು ಕುತೂಹಲಕ್ಕೆ ಕಾರಣವಾಗಿದ್ದು ಡಿಸೆಂಬರ್ ಏಳರಂದು ನಡೆಯಲಿರುವ ಜನಸ್ಪಂದನ ಕಾರ್ಯಕ್ರಮದಲ್ಲಿ ಎಲ್ಲದಕ್ಕೂ ತೆರೆ ಬಿಳುವ ಸಾಧ್ಯತೆ ಇದೆ,