ಕರಡಿ ದಾಳಿ ಪ್ರಕರಣ ಅರಣ್ಯ ಇಲಾಖೆಯ ಕಚೆರಿಯ ಮುಂಭಾಗ ಮೃತ ರೈತನ ಶವವಿಟ್ಟು ಕುಟುಂಬಸ್ಥರಿಂದ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಎಲೆಕಡಕಲು ಗ್ರಾಮದಲ್ಲಿ ಕರಡಿ ದಾಳಿಯಿಂದ ಗ್ರಾಮದ ರೈತ ರಾಜು ಎಂಬಾತ ಮೃತಪಟ್ಟಿದ್ದು ಮೃತ ವ್ಯಕ್ತಿಯ ಶವ ತಂದು ಗುರುವಾರ ಅರಣ್ಯ ಇಲಾಖೆಯ ಕಚೆರಿಯ ಮಂಭಾಗ ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು
ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಎಸಿಎಫ್ ಮಹೇಶ್ ರವರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು ಕೂಡಲೆ ಮೃತ ವ್ಯಕ್ತಿಯ ಕುಟುಂಬದವರಿಗೆ ಪರಿಹಾರದ ಜೊತೆಗೆ ಸರ್ಕಾರಿ ಉದ್ಯೋಗ ನಿಡುವಂತೆ ಗ್ರಾಮಸ್ಥರು ಒತ್ತಾಯಿಸಿದರು ಮೃತ ರಾಜು ತಾಯಿ ಅಂಗವಿಕಲರಾಗಿದ್ದು ಮತ್ತೊಬ್ಬರ ಸಹಾಯದಲ್ಲಿ ಒಡಾಡುತ್ತಿದ್ದಾರೆ ಇದ್ದೊಬ್ಬ ಮಗ ಕರಡಿ ದಾಳಿಯಿಂದ ಸಾವನ್ನಪ್ಪಿದ್ದು ಈಗ ತಾಯಿಯನ್ನು ನೊಡಿಕೊಳ್ಳುವವರು ಯಾರು ಇಲ್ಲದಂತಾಗಿದೆ
ಅರಣ್ಯ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಕಾರಣದಿಂದ ಕುಟುಂಬದವರಿಗೆ ಆಸರೆ ಇಲ್ಲದಂತಾಗಿದೆ ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವ ವರೆಗೆ ಶವವನ್ನು ಮೇಲೆ ಎತ್ತುವುದಿಲ್ಲ ಎಂದು ಪಟ್ಟು ಹಿಡಿದ ಪ್ರಸಂಗ ಜರುಗಿತು ಸ್ಥಳಕ್ಕೆ ತಹಶೀಲ್ದಾರ್ ಮಹಾಬಲೇಶ್ವರ್ ಆಗೂ ಬಿಜೆಪಿ ಮುಖಂಡ ಡಿ,ಕೃಷ್ಣಕುಮಾರ್,ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಡಾ,ರವಿಬಾಬು,ಆಗೂ ವೈ,ಹೆಚ್ ಹುಚ್ಚಯ್ಯ ಬಂದು ಗ್ರಾಮಸ್ಥರ ಆಗೂ ಕುಟುಂಬದವರ ಮನವೊಲಿಸಿ
ಬಳಿಕ ಇನ್ನೆರಡು ದಿನದಲ್ಲಿ ಪರಿಹಾರದ ಚೆಕ್ ವಿತರಿಸುವುದಾಗಿ ತಿಳಿಸಿ ಸ್ಥಳದಲ್ಲಿ ಕುಟುಂಬದವರಿಗೆ ಪರಿಹಾರದ ಆದೇಶದ ಪ್ರತಿಯನ್ನು ನೀಡಿದರು ಮೃತ ರಾಜು ತಾಯಿಗೆ ಪ್ರತಿ ತಿಂಗಳು ಎರಡು ಸಾವಿರ ರೂನಂತೆ ಐದು ವರ್ಷದ ವರೆಗೆ ಪರಿಹಾರ ಆಗೂ ಎಳುವರೆ ಲಕ್ಷ ರೂಪಾಯಿ ಪರಿಹಾರ ನೀಡುವುದಾಗಿ ಸ್ಥಳದಲ್ಲಿ ಅಧಿಕಾರಿಗಳು ತಿಳಿಸಿದ ಬಳಿಕ ಕುಟುಂಬದವರು ಪ್ರತಿಭಟನೆ ಕೈ ಬಿಟ್ಟರು
ಮುಖಂಡ ಡಿ,ಕೃಷ್ಣಕುಮಾರ್ ಮಾತನಾಡಿ ಅಧಿಕಾರಿಗಳು ಮೃತ ವ್ಯಕ್ತಿಯ ಇನ್ನೆಲೆ ಬಗ್ಗೆ ಸರ್ಕಾರಕ್ಕೆ ವರದಿ ಸದ್ಲಿಸಿ ಕುಟುಂಬದವರಿಗೆ ಸರಿಕಾರಿ ಉದ್ಯೋಗ ನೀಡುವ ಬಗ್ಗೆ ವರದಿ ಸಲ್ಲಿಸಿ ಅವಕಾಶವಿದ್ದರೆ ಕುಟುಂಬದವರಿಗೆ ಸರ್ಕಾರಿ ಉದ್ಯೋಗ ಸಿಗುವಂತಾಗಲಿ ಎಂದರು
ಮಾಜಿ ಜಿ.ಪಂ ಅಧ್ಯಕ್ಷ ರವಿಬಾಬು ಮಾತನಾಡಿ ಹುಲಿಯೂರುದುರ್ಗ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯ ಕಾರಣದಿಂದ ಈ ಭಾಗದಲ್ಲಿ ಕಾಡು ಪ್ರಾಣಿಗಳು ಗ್ರಾಮಗಳತ್ತ ಬರುತ್ತಿದ್ದು ಇದಕ್ಕೆ ತಾಲ್ಲೂಕು ಆಡಳಿತ ಅರಣ್ಯ ಇಲಾಖೆ ಜಿಲ್ಲಾಡಳಿತ ಆಗೂ ತಾಲ್ಲೂಕಿನ ಶಾಸಕರು ನೆರ ಹೊಣೆ ಎಂದರು
ಕಂದಾಯ ಇಲಾಖೆ ಆಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮಖದಲ್ಲಿ ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರ ನೆರವೆರಿಸಲಾಗಿದೆ ಈ ವೇಳೆ ಗ್ರಾಮದ ನೂರಾರು ಮಂದಿ ರೈತರು ಅರಣ್ಯ ಇಲಾಖೆಯ ಕಚೆರಿಯ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು ಈ ವೇಳೆ ಸಿಪಿಐ ಗುರುಪ್ರಸಾದ್,ಪಿಎಸ್ಐ ಮಂಗಳಗೌರಮ್ಮ,ಆರ್.ಎಫ್.ಒ ಮೊಹಮ್ಮದ್ ಮನ್ಸೂರ್ ಉಪಸ್ಥತರಿದ್ದರು