ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಇತಿಹಾಸ ಪ್ರಸಿದ್ದ ಶ್ರೀ ಹೇಮಗಿರಿ ವರದರಾಜ ಸ್ವಾಮಿ ಜಾತ್ರಮಹೊತ್ಸವ ಸೋಮವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಶ್ರೀಗಳು ಶ್ರೀ ಹೇಮಗಿರಿ ವರದರಾಜ ಸ್ವಾಮಿಗೆ ಪೂಜೆ ಸಲ್ಲಿಸಿ ಬಳಿಕ ರಥದ ಚಕ್ರಕ್ಕೆ ತೆಂಗಿನಕಾಯಿ ಹೊಡೆಯುವ ಮೂಲಕ ಬ್ರಹ್ಮರಥೋತ್ಸವಕ್ಕೆ ಚಾಲನೆ ನೀಡಿದರು ಜಾತ್ರಮಹೊತ್ಸವದಲ್ಲಿ ಹರಕೆ ಹೊತ್ತ ಭಕ್ತರು ರಥಕ್ಕೆ ಹೂ ಮತ್ತು ಬಾಳೆಹಣ್ಣು ಎಸೆಯುವ ಮೂಲಕ ತಮ್ಮ ಇಷ್ಟರ್ಥಗಳು ನೆರವೆರಲಿ ಎಂದು ಬೇಡಿಕೊಂಡು ರಥವನ್ನು ಎಳೆಯುವ ಮೂಲಕ ಭಕ್ತಿ ಸಮರ್ಪಿಸಿದರು ಇನ್ನೂ ಕೆಲ ಭಕ್ತರು ಕಜ್ಜಾಯ , ಬಾಳೆಹಣ್ಣು , ತೆಂಗಿನಕಾಯಿ, ಹಾಗೂ ಹಣ್ಣುಗಳಿಂದ ವಿಶಿಷ್ಟ ರೀತಿಯಲ್ಲಿ ಪ್ರಸಾದ ತಯಾರಿಸಿ ರಥೋತ್ಸವದ ಮುಂದೆ ಎಡೆ ಬಡಿಸಿ ಗೋವಿಂದ,ಗೋವಿಂದ,ಎಂದು ಕೂಗುವ ಮೂಲಕ ಭಕ್ತಿ ಸಮರ್ಪಿಸಿದರು, ಎರಡು ವರ್ಷಗಳ ಬಳಿಕ ಜಾತ್ರಮಹೋತ್ಸವ ನಡೆದ ಹಿನ್ನೆಲೆಯಲ್ಲಿ ಐವತ್ತು ಸಾವಿರಕ್ಕೂ ಅಧಿಕಮಂದಿ ಭಕ್ತರು
ಜಾತ್ರಮಹೊತ್ಸವದಲ್ಲಿ ಭಾಗಿಯಾಗಿದ್ದರು ಯಾವುದೆ ರೀತಿಯ ಅಹಿತಕರ ಘಟನೆ ಸಂಭವಿಸದಂತೆ ಬಿಗಿಯಾದ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಮಹಾಬಲೇಶ್ವರ,ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ ಹೆಚ್,ಬಿ,ಮಾಜಿ ಸಂಸದ ಎಸ್,ಪಿ ಮುದ್ದಹನುಮೇಗೌಡ,ಡಿವೈಎಸ್ಪಿ ಲಕ್ಷಿಕಾಂತ್,ಸಿಪಿಐ ಗುರುಪ್ರಸಾದ್,ಅರುಣ್ ಸಾಲುಂಕೆ,ವಲಯ ಅರಣ್ಯಾಧಿಕಾರಿ ಮೊಹಮದ್ ಮನ್ಸೂರ್ ಪಿಎಸ್ಐ ವೆಂಕಟೇಶ್ ಸೆರಿದಂತೆ ಹಲವು ಅಧಿಕಾರಿಗಳು ಭಾಗಿಯಾಗಿದ್ದರು