ಕುಣಿಗಲ್ ತಾಲ್ಲೂಕಿನ ಕಿತ್ತಿನಾಮಂಗಲ ಕೆರೆಯ ಹಿನ್ನಿರಿನಲ್ಲಿ ಅನುಮಾನಸ್ಪದ ರೀತಿಯಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದ್ದು ಮೃತ ವ್ಯಕ್ತಿಯನ್ನು ತಾಲ್ಲೂಕಿನ ಸೀನಪ್ಪನಹಳ್ಳಿ ಗ್ರಾಮದ ಮಂಜುನಾಥ್ (26) ಎಂದು ತಿಳಿದು ಬಂದಿದೆ ಮೃತ ಮಂಜುನಾಥ್ ಶುಕ್ರವಾರ ಗ್ರಾಮದ ಸ್ನೇಹಿತರೊಂದಿಗೆ ಕುಣಿಗಲ್ ನ ಜಸ್ಟ್ ಬೇಕ್ ನಲ್ಲಿ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡು ಮನೆಗೆ ಬಂದಿದ್ದ
ಬಳಿಕ 11 ಗಂಟೆಯ ಸಂದರ್ಭದಲ್ಲಿ ಪೋನ್ ಕರೆ ಬಂದ ಕಾರಣ ಮನೆಯಿಂದ ಹೋರ ಹೋದವನು ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಜೋತೆಗೆ ಆತ ತೆಗೆದುಕೊಂಡ ಹೊಗಿದ್ದ ಬೈಕ್ ಕೂಡ ಕೆರೆಯಲ್ಲಿ ಪತ್ತೆಯಾಗಿದ್ದು ಮೃತ ದೇಹದ ಮೇಲೆ ಹಲ್ಲೆಯಾಗಿರು ಗಾಯದ ಗುರುತು ಪತ್ತೆಯಾಗಿದ್ದು ಹಲವು ಅನುಮಾನಗಳಿಗೆ ಕಾರಣವಾಗಿದೆ
ಮೃತ ಮಂಜುನಾಥ್ ವೃತ್ತಿಯಲ್ಲಿ ಅಡುಗೆ ಭಟ್ಟನಾಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ ಘಟನಾ ಸ್ಥಳಕ್ಕೆ ಕುಣಿಗಲ್ ಉಪ ವಿಭಾಗದ ಡಿವೈಎಸ್ಪಿ ಲಕ್ಷ್ಮಿಕಾಂತ್ ಆಗೂ ಸಿಪಿಐ ಗುರುಪ್ರಸಾದ್,ಆಪರಾದ ವಿಭಾಗದ ಪೋಲಿಸರು, ಆಗೂ ಶ್ವಾನಧಳ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಘಟನೆ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ತುಮಕೂರು ಜೀಲ್ಲಾ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ
ಇನ್ನೂ ಶ್ವಾನಧಳ ಮೃತ ದೇಹ ಪತ್ತೆಯಾದ ಸ್ಥಳದಿಂದ ಸುಮಾರು ಎರಡು ವರೆ ಕಿಲೋ ಮೀಟರ್ ದೂರದ ವರೆಗೆ ತೆರಳಿ ಪರಿಶೀಲನೆ ನಡೆಸಿದ್ದು ಸ್ಥಳದಲ್ಲಿ ಮಧ್ಯ ಸೇವಿಸಿರುವ ಆಗೂ ರಕ್ತದ ಗುರುತುಗಳು ಪತ್ತೆಯಾಗಿದ್ದು ದೂರು ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ