ಮಡಕೆಹಳ್ಳಿ ಗ್ರಾಮ ಪಂಚಾಯ್ತಿ ಕಚೇರಿಯ ಬಳಿ ವೇತನಕ್ಕಾಗಿ ಆಗ್ರಹಿಸಿ ಮಹಿಳೆಯೊರ್ವಳು ಧರಣಿ ಕುಳಿತ ಘಟನೆ ನಡೆದಿದೆ
ಕುಣಿಗಲ್ ತಾಲ್ಲೂಕಿನ ಕೋತ್ತಗೆರೆ ಹೊಬಳಿ ವ್ಯಾಪ್ತಿಯ ಮಡಕೆಹಳ್ಳಿ ಗ್ರಾಮ ಪಂಚಾಯ್ತಿ ಕಚೇರಿಯಲ್ಲಿ ವೇತನ ನೀಡುವಂತೆ ಆಗ್ರಹಿಸಿ ತಾಯಿಯೊಂದಿಗೆ ಮಗಳು ಧರಣಿ ಕುಳಿತ ಘಟನೆ ಗುರುವಾರ ಮಡಕೆಹಳ್ಳಿ ಗ್ರಾಮದಲ್ಲಿ ನಡೆದಿದೆ
ಕಳೆದ ಹತ್ತು ತಿಂಗಳ ಹಿಂದೆ ಗ್ರಾಮ ಪಂಚಾಯ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳೆಯೊಬ್ಬರು ಹೆರಿಗೆ ರಜೆಗೆ ತೆರಳಿದ್ದ ವೇಳೆ ಕಚೇರಿಯಲ್ಲಿ ಕರ್ತವ್ಯ ನಿರ್ವಸುವ ಸಲುವಾಗಿ ತಾತ್ಕಲಿಕವಾಗಿ ಕಂಪ್ಯೂಟರ್ ಆಪರೇಟರ್ ಹಾಗಿ ಕರ್ತವ್ಯ ನಿರ್ವಹಿಸುವ ಸಲುವಾಗಿ ಗೌರಮ್ಮ ಎಂಬ ಮಹಿಳೆಯನ್ನು ನೇಮಕ ಮಾಡಿಕೊಳ್ಳಲಾಗಿತ್ತು
ಆದರೆ ಹತ್ತು ತಿಂಗಳ ಬಳಿಕ ಕೆಲಸದಿಂದ ತೆಗೆಯಲಾಗಿದ್ದು ನಾಲ್ಕು ತಿಂಗಳ ಸಂಬಳ ಪಾವತಿಸದ ಆರೋಪ ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಹಾಗೂ ಪಿಡಿಒ ವಿರುದ್ದ ಕೇಳಿ ಬಂದಿದೆ ಹಲವು ಭಾರಿ ಈ ಬಗ್ಗೆ ಸ್ಥಳಿಯ ಗ್ರಾಮ ಪಂಚಾಯ್ತಿ ಸದಸ್ಯರು ಆಗೂ ಪಿಡಿಒ ಅಧ್ಯಕ್ಷರ ಘಮನಕ್ಕೂ ತಂದರು ಯಾವುದೆ ಪ್ರಯೋಜನ ಇಲ್ಲವಾಗಿದೆ ಎಂದು ಗುರುವಾರ ಗ್ರಾಮ ಪಂಚಾಯಿತಿಯ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳೆ ಹಾಗೂ ಅವರ ತಾಯಿ ಧರಣಿ ಕುಳಿತ ಘಟನೆ ನಡೆದಿದ್ದು
ಸ್ಥಳಕ್ಕೆ ಯಾವ ಅಧಿಕಾರಿಗಳು ಬೇಟಿ ನೀಡಿ ಸಮಸ್ಯೆ ಹಾಲಿಸದಿರುವುದು ವಿಪರ್ಯಾಸವೆ ಸರಿ ಬೆಳಗ್ಗೆ ಯಿಂದ ರಾತ್ರಿ ಒಂಭತ್ತು ಗಂಟೆಯ ವರೆಗೆ ಧರಣಿ ಕುಳಿತಿರುವುದಾಗಿ ತಿಳಿದುಬಂದಿದೆ ಇನ್ನೂ ಸಂಸದ ಆದರ್ಶ ಗ್ರಾಮವೆಂದು ಬಿರುದು ಪಡೆದಿರುವ ಗ್ರಾಮ ದಲ್ಲಿ ಮಹಿಳೆಯೊಬ್ಬರು ನ್ಯಾಯಕ್ಕಾಗಿ ಆಗ್ರಹಿಸಿ ತಡ ರಾತ್ರಿಯ ವರೆಗೆ ಧರಣಿ ಕುಳಿತಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಇನ್ನಾದರು ಸಂಬಂದಪಟ್ಟ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಸಮಸ್ಯೆ ಬಗೆ ಹರಿಸುವಂತೆ ಸ್ಥಳಿಯರ ಆಗ್ರಹವಾಗಿದೆ
ಗ್ರಾಮ ಪಂಚಾಯಿತಿಯಲ್ಲಿ ಈ ಹಿಂದೆ 1.63 ಲಕ್ಷ ಹಣ ದುರುಪಯೋಗ ಮಾಡಿಕೊಂಡಿದ್ದರು ಸಹ ಅಧಿಕಾರಿಗಳು ಮಾತ್ರ ಸಂಬಂದ ಪಟ್ಟವರ ವಿರುದ್ದ ಇದುವರೆಗೂ ಯಾವುದೆ ಕ್ರಮ ಕೈಗೊಂಡಿಲ್ಲ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣ ಅಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣ ಅಧಿಕಾರಿಗಳಿಗೆ ಈ ಬಗ್ಗೆ ಗ್ರಾಮ ಪಂಚಾಯ್ತಿ ಸದಸ್ಯರೊಬ್ಬರು ದಾಖಲೆ ಸಹಿತ ದೂರು ನೀಡಿದರು ಅಧಿಕಾರಿಗಳು ಕ್ರಮ ಕೈಗೊಳ್ಳಲು ಮೀನಾ ಮೇಷ ಎಣಿಸುತ್ತಿದ್ದಾರೆ ಆದರೆ ಸಾರ್ವಜನಿಕರ ತೆರಿಗೆ ಹಣ ದುರುಪಯೋಗ ಮಾಡಿಕೊಂಡ ಬಿಲ್ ಕಲೆಕ್ಟರ್ ವಿರುದ್ದ ಕ್ರಮ ಕೈಗೊಳ್ಳದ ಅಧಿಕಾರಿಗಳ ನಡೆಯಂತೂ ಅನುಮಾನಕ್ಕೆ ಕಾರಣವಾಗಿದೆ ಎಂದು ಸ್ಥಳಿಯರು ಮಾತನಾಡುತ್ತಿದ್ದಾರೆ