ಕುಣಿಗಲ್ ರೈತರಿಂದ ಲಂಚ ಪಡೆದ ಆರೋಪ ಸರ್ವೆಯರ್ ಅಮಾನತ್ತು

Spread the love

ನಕ್ಷೆ ತಯಾರಿಸಲು ರೈತರಿಂದ ಲಂಚ ಪಡೆದ ಆರೋಪದ ಹಿನ್ನೆಲೆ ಸರ್ವೆಯರ್ ಅಮಾನತ್ತು

ಕುಣಿಗಲ್ ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಭೂಮಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಅಶ್ವಿನಿ ರವರನ್ನು ಲಂಚ ಪಡೆದ ಆರೋಪದಡಿಯಲ್ಲಿ ಅಮಾನತ್ತು ಗೋಳಿಸಿ ಜಿಲ್ಲಾ ಭೂ ದಾಖಲೆಗಳ ಉಪ ನಿರ್ದೇಶಕರು ಶನಿವಾರ ಆದೇಶಿಸಿದ್ದಾರೆ

ಕುಣಿಗಲ್ ತಾಲ್ಲೂಕು ರಾಮಬಾಣ ಹಂತದ ಸರ್ವೆ ನಂಬರ್ 292/3 ಬೋರಲಿಂಗನ ಪಾಳ್ಯ ಗ್ರಾಮದ ಸರ್ವೆ ನಂಬರ್ 2/3 ಗಳ ನಕ್ಷೆ ಪಡೆಯಲು ಅರ್ಜಿ ಸಲ್ಲಿಸಿದ್ದ ರೈತರಿಂದ ಕುಣಿಗಲ್ ಭೂದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಶ್ವಿನಿ ಹಣಕ್ಕೆ ಬೇಡಿಕೆ ಇಟ್ಟಿದ್ದು ದಿನಾಂಕ 4/3/2023 ಸದರಿ ರೈತರ ಅಳತೆ ಕೆಲಸ ನಿರ್ವಹಿಸಿ ಸರ್ವೇ ನಂಬರ್ ಗಳ ನಕ್ಷೆ ತಯಾರಿಸಲು

ಅರ್ಜಿದಾರರೊಂದಿಗೆ ಹಣ ಬೇಡಿಕೆ ಇಟ್ಟು ಬಳಿಕ ಅರ್ಜಿದಾರರಿಂದ ಹಣ ಪಡೆಯುತ್ತಿರುವ ದೃಶ್ಯವನ್ನು ವಿಡಿಯೋ ಚಿತ್ರೀಕರಿಸಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಹೋರಾಟಗಾರರ ವೇದಿಕೆ ವತಿಯಿಂದ ತುಮಕೂರು ಜಿಲ್ಲೆಯ ಭೂ ದಾಖಲೆಗಳ ಉಪ ನಿರ್ದೇಶಕರಿಗೆ ಸರ್ವೆಯರ್ ರೈತರಿಂದ ಅಕ್ರಮವಾಗಿ ಹಣ ಪಡೆಯುತ್ತಿರುವ ವಿಡಿಯೋ ಸಹಿತ ದೂರು ನೀಡಿದ ಹಿನ್ನೆಲೆಯಲ್ಲಿ

ತುಮಕೂರು ಜಿಲ್ಲೆಯ ಭೂ ದಾಖಲೆಗಳ ಉಪನಿರ್ದೇಶಕರಾದ ಶ್ರೀಯುತ ಸುಜಯ್ ಕುಮಾರ್ ರವರು ಕರ್ತವ್ಯ ಲೋಪ ಎಸಗಿದ ಅಧಿಕಾರಿಯು ವಿರುದ್ದ ಈ ಕೆಳಕಂಡಂತೆ ಆದೇಶಿಸಿದ್ದಾರೆ

ಶ್ರೀಮತಿ ಅಶ್ವಿನಿ ಯವರು ವಾಬ್ದಾರಿಯುತ ನೌಕರರಾಗಿ ಸರ್ಕಾರಿ ಕೆಲಸದಲ್ಲಿ ಬೇಜವಾಬ್ದಾರಿ ತೋರಿ ಸರ್ಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ವರ್ತಿಸಿ ಕರ್ತವ್ಯ ಲೋಪವೇಶಗಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಭೂಮಾಪಕರ ಕರ್ತವ್ಯ ಲೋಕದ ವಿಚಾರಣೆಯನ್ನು ಕಾಯ್ದಿರಿಸಿ ಕುಣಿಗಲ್ ತಾಲೂಕು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ

ಭೂಮಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ ಅಶ್ವಿನಿ ಯವರನ್ನು ಭೂಮಿಯ ನಕ್ಷೆ ತಯಾರಿಸಲು ಅರ್ಜಿ ಸಲ್ಲಿಸಿದ ರೈತರಿಂದ ಲಂಚ ಪಡೆದ ಆರೋಪದ ಅಡಿಯಲ್ಲಿ ಇಲಾಖೆಯ ವಿಚಾರಣೆ ಕಾಯ್ದಿರಿಸಿ ತಕ್ಷಣ ಜಾರಿಗೆ ಬರುವಂತೆ ಅಮಾನತ್ತುಗೊಳಿಸಿ ಆದೇಶಿಸಿದ್ದಾರೆ