ಐದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ ಪತ್ರಿಕೆಯ ಸಂಪಾದಕನ ಬಂಧನ ಪ್ರಕರಣ ದಾಖಲು

Spread the love

ಕುಣಿಗಲ್ ತಾಲ್ಲೂಕಿನ ತಪೋಕ್ಷೇತ್ರ ಕಗ್ಗೆರೆಯ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರ್ಚಕರನ್ನು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯಕ್ಷ ವಾಣಿ ಪ್ರಾಕ್ಷಿಕ ಪತ್ರಿಕೆಯ ಸಂಪಾದಕ ಕುಶ ಹಾಗೂ ಇದಕ್ಕೆ ಸಹಕರಿಸಿದ ಮತ್ತೋರ್ವ ಆರೋಪಿ ಯಡಿಯೂರಿನ ರಘು ಎಂಬತನನ್ನು ಅಮೃತೂರು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ ಕಗ್ಗೆರೆಯ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ದೇವಾಲಯದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಿರುವ ಮಹೇಶ್ ಎಂಬುವರು ಮಹಿಳೆಯರೊಂದಿಗೆ ಮಾತನಾಡಿರುವ

ವಾಯ್ಸ್ ರೆಕಾರ್ಡ್ ಅನ್ನು ಮತ್ತೊಬ್ಬರಿಂದ ಪಡೆದುಕೊಂಡು ಅರ್ಚಕನಿಗೆ ಬೆದರಿಸಿ ಹಣ ಗಳಿಸುವ ಉದ್ದೇಶದಿಂದ ಪ್ರತ್ಯಕ್ಷವಾಣಿ ಪತ್ರಿಕೆಯ ಸಂಪಾದಕ ಕುಶ 5 ಲಕ್ಷ ಹಣಕ್ಕೆ ಬೇಡಿಕೆ ಇಟ್ಟು ಹಣ ನೀಡದಿದ್ದರೆ ನಿನ್ನ ವಿರುದ್ಧ ಪತ್ರಿಕೆ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರ ಮಾಡಿ ಮಾನಹಾನಿ ಮಾಡುವುದಾಗಿ ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪದ ಅಡಿಯಲ್ಲಿ ಅರ್ಚಕನ ಪತ್ನಿ ನೀಡಿದ ದೂರಿನ ಅನ್ವಯ ಅಮೃತೂರು ಪೊಲೀಸರು ಪ್ರಕರಣ

ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ನಡೆದಿದೆ ಹಲವು ದಿನಗಳಿಂದಲು ಅರ್ಚಕನ ಬೆನ್ನು ಬಿದ್ದಿದ್ದ ಇತ ಕೆಲವು ಮಧ್ಯವರ್ತಿಗಳನ್ನು ಬಿಟ್ಟು ಹಣಕ್ಕೆ ಬೆಡಿಕೆ ಇಟ್ಟಿದ್ದನು ಎಂದು ತಿಳಿದು ಬಂದಿದ್ದು ಇಂತಹ ಲಜ್ಜೆಗೆಟ್ಟ ಪತ್ರಕರ್ತರಿಂದ ಸಮಾಜದ ಏಳಿಗೆಗಾಗಿ ಎಲೆ ಮರೆಯ ಕಾಯಿಯಂತೆ ನ್ಯಾಯ ಯುತವಾಗಿ ದುಡಿಯುತ್ತಿರು ಪತ್ರಕರ್ತರಿಗೂ ಇಂತಹವರಿಂದ ಕೆಟ್ಟ ಹೆಸರುಗಳು ಬರುತ್ತಿವೆ ಇನ್ನಾದರು ಇಂತಹ ಪ್ರಕರಣಗಳು ಮರುಕಳಿಸದಿರಲಿ ಇಂತಹ ನಕಲಿ ಪತ್ರಕರ್ತರ ಬಗ್ಗೆ ನಾಗರೀಕರು ಎಚ್ಚರದಿಂದಿರಿ ಇಂತಹ ಪ್ರಕರಣಗಳು ಗಮನಕ್ಕೆ ಬಂದರೆ ಸ್ಥಳಿಯ ಪೊಲೀಸರಿಗೆ ಮಾಹಿತಿ ನೀಡಿ