ಕುಣಿಗಲ್ ತಾಲೂಕಿನಲ್ಲಿ 2023ರ ಮೇ ಹತ್ತರಂದು ನಡೆಯಲಿರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮತದಾರರನ್ನು ಸ್ವಾಗತಿಸುವ ಸಲುವಾಗಿ ತಾಲ್ಲೂಕಿನ 36 ಗ್ರಾಮ ಪಂಚಾಯಿತಿಗಳಲ್ಲಿ ಒಟ್ಟು 36 ಮಾದರಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ ಇದರಲ್ಲಿ ವಿಶೇಷವಾಗಿ ಮಹಿಳೆಯರಿಗೆ 5 ಸಖಿ ಮತಗಟ್ಟೆಗಳು ಹಾಗೂ ಅಂಗವಿಕಲರಿಗಾಗಿ ಒಂದು ಮತಗಟ್ಟೆ ಯುವ ಜನತೆಗಾಗಿ ಎರಡು ಮತಗಟ್ಟೆಗಳನ್ನು ತಾಲೂಕಿನಲ್ಲಿ ಸ್ಥಾಪಿಸಲಾಗಿದ್ದು ಚುನಾವಣಾ ಆಯೋಗದಿಂದ ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ
ಸಂತೆಮಾವತ್ತೂರು,ತುವ್ವೇಕೆರೆ,ಯಲಿಯೂರು,ಪಡುವಗೆರೆ,ಕೆಂಚನಹಳ್ಳಿ ಗ್ರಾಮಗಳಲ್ಲಿನ ಈ ಐದು ಮತಗಟ್ಟೆಗಳನ್ನು ಮಹಿಳೆಯರಿಗಾಗಿ ಸಖಿ ಮತಗಟ್ಟೆಗಳನ್ನಾಗಿ ತೆರೆಯಲಾಗಿದೆ,ಚನ್ನಾಪುರ ಹಾಗೂ ಕಿಚ್ಚವಾಡಿ ಗ್ರಾಮಗಳಲ್ಲಿ ಯುವ ಜನತೆಗೆಂದು ಎರಡು ಮತಗಟ್ಟೆಗಳು ಇದಲ್ಲದೆ ತಾಲ್ಲೂಕಿನ 36 ಗ್ರಾಮ ಪಂಚಾಯ್ತಿಗಳಲ್ಲೂ ಮಾದರಿ ಮತಗಟ್ಟೆಗಳನ್ನು ತೆರೆಯಲಾಗಿದೆ ತಾಲ್ಲೂಕಿನ ಕೆಲವೊಂದು ಮತಗಟ್ಟೆಗಳು ಸೋರುತ್ತಿರುವ ಕಾರಣಕ್ಕೆ ಸ್ಥಳಿಯರು ಆಕ್ರೋಶ ಹೊರ ಹಾಕಿದ್ದಾರೆ ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಕೋಟ್ಯಂತರ ರೂಪಾಯಿ ಹಣವನ್ನು ಚುನಾವಣೆಗೆಂದು ವ್ಯಹಿಸುತ್ತಿದ್ದರು ಸಹ ಮತಗಟ್ಟೆಗಳು ಮಾತ್ರ ಸೋರುವುದು ತಪ್ಪಿಲ್ಲ.
ತಾಲ್ಲೂಕಿನ ಉಜ್ಜನಿ, ಅಕ್ಕಿಮರಿಪಾಳ್ಯ, ಉಂಗ್ರ, ಕೆಂಪನಹಳ್ಳಿ,ಹಾಲಗೆರೆ,ಹುತ್ರಿದುರ್ಗ,ಹಡೋನಹಳ್ಳಿ,ಕೊಪ್ಪ,ಕಾಚಿಹಳ್ಳಿ,ಕೊಪ್ಪ,ಬಾಗೇನಹಳ್ಳಿ,ಕಿತ್ತಿನಾಮಂಗಲ,ಮತಗಟ್ಟೆಗಳು ಮಾತ್ರ ಮಳೆಗೆ ಸೊರುತ್ತಿದ್ದು ಶಾಶ್ವತ ಪರಿಹಾರ ಮಾಡುವ ಬದಲು ಚುನಾವಣಾ ಆಯೋಗ ಟಾರ್ಪರ್,ಟಾರ್,ಬಳಸಿ ತೇಪೆ ಹಚ್ಚುವ ಕೆಲಸ ಮಾಡಿರುವುದು ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ ತಾಲ್ಲೂಕಿನಾದ್ಯಂತ ಒಟ್ಟು 264 ಬೂತ್ ಗಳಿದ್ದು ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತ ತಾಲ್ಲೂಕು ಆಡಳಿತದ ವತಿಯಿಂದ ಸಕಲ ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ,