ಕುಣಿಗಲ್ ತಾಲ್ಲೂಕಿನ ಹಂಗರಹಳ್ಳಿ ಗ್ರಾಮದ ಬಳಿ ಇರುವ ದೀಪಾಂಬುದ್ದೀಕೆರೆಯಲ್ಲಿ ಈಜಲು ಹೋಗಿದ್ದ ವ್ಯಕ್ತಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದ ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ವ್ಯಾಪ್ತಿಯ ಹನುಮಣ್ಣನ ಪಾಳ್ಯ ಗ್ರಾಮದ ಹಾಲಿ ಬೆಂಗಳೂರು ಸುಂಕದಕಟ್ಟೆ ವಾಸವಿರುವ (41) ವರ್ಷ ವಯಸ್ಸಿನ ಬಸವರಾಜು ಮೃತ ವ್ಯಕ್ತಿ
ಹುಲಿಯೂರುದುರ್ಗ ವ್ಯಾಪ್ತಿಯ ಕುಂಟಯ್ಯನಪಾಳ್ಯ ಗ್ರಾಮದ ಚಂದ್ರಶೇಖರ್ ಎಂಬುವವರ ಜಮೀನಿನಲ್ಲಿ ಕೆಲಸ ಮಾಡಲು ಸ್ನೇಹಿತರೊಂದಿಗೆ ಆಗಮಿಸಿದ್ದ ಬಸವರಾಜು ಮಧ್ಯಾಹ್ನದ ಬಿಸಿಲಿನಲ್ಲಿ ಪಕ್ಕದಲ್ಲೆ ಇದ್ದ ಕೆರೆಗೆ ಈಜಲು ತೆರಳಿದ್ದ
ದೀಪಾಂಬುದ್ದಿ ಕೆರೆಯ ನೀರಿನಲ್ಲಿ ಹೆಚ್ಚು ಸಮಯ ಕಳೆದು ಈಜುತ್ತಿದ್ದ ಬಸವರಾಜು ಕೊನೆಗೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವಂತಹ ಘಟನೆ ನಡೆದ ಘಟನೆ ಹುಲಿಯೂರುದುರ್ಗ ಪೋಲಿಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಬೇಟಿನೀಡಿ ಶವ ಹೊರತೆಗೆದಿದ್ದು ಘಟನೆ ಸಂಭಂದ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.