ಕೆ,ಎಸ್,ಆರ್,ಟಿ,ಸಿ ಬಸ್ ಟೈಯರ್ ಸ್ಪೋಟಗೊಂಡು ಇಬ್ಬರು ವ್ಯಕ್ತಿಗಳಿಗೆ ಗಂಭೀರ ಗಾಯ ಘಟನೆಕುಣಿಗಲ್ ತಾಲ್ಲೂಕಿನ ಇಪ್ಪಾಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಿವಪುರ ಗ್ರಾಮದ ಬಳಿ ಬುಧವಾರ ನಡೆದಿದೆ,
ತಾವರೆಕೆರೆ ಯಿಂದ ಇಪ್ಪಾಡಿ ಮಾರ್ಗವಾಗಿ ಕುಣಿಗಲ್ ಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಕೆ,ಎಸ್,ಆರ್,ಟಿ,ಸಿ ಬಸ್ ನ ಹಿಂಬದಿಯ ಟೈಯರ್ ಇದ್ದಕ್ಕಿದ್ದಂತೆ ಶಿವಪುರ ಗ್ರಾಮದ ಬಳಿ ಸ್ಪೋಟಗೊಂಡಿದೆ ಸ್ಪೋಟದ ತಿವ್ರತೆಗೆ ಬಸ್ ನ ಒಳಗಡೆ ಹಿಂಬದಿ ಚಕ್ರದ ಮೆಲ್ಬಾಗದ ಸಿಟ್ ನಲ್ಲಿ ಕುಳಿತಿದ್ದ ಹುಲಿಕಟ್ಟೆ ಗ್ರಾಮದ ಮುನಿಯಪ್ಪ (50) ಖಾಯೀಮ್ ಬೇಗ್ (70) ಎಂಬುವವರಿಗೆ ಕಾಲು ಮುರಿದು ಗಂಭೀರವಾಗಿ ಗಾಯಗೊಂಡಿದ್ದನ್ನು ಗಮನಿಸಿದ ಸ್ಥಳಿಯರಾದ ಮಹೇಶ್ ಎಂಬುವವರು ಕೂಡಲೆ ನೆರವಿಗೆ ದಾವಿಸಿ ತಮ್ಮ ಕಾರ್ ನಲ್ಲಿ ಗಾಯಾಳುಗಳನ್ನು ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ
ಗಾಯಳುಗಳು ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಆದಿ ಚುಂಚನಗಿರಿ ಹಾಗೂ ಬೆಂಗಳೂರಿನ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಬಸ್ ನ ಟೈಯರ್ ಹಳೆಯದಾಗಿದ್ದು ಹಾಗೂ ಬಸ್ ನಲ್ಲಿ ಹೆಚ್ಚು ಪ್ರಯಾಣಿಕರನ್ನು ತುಂಬಿದ್ದ ಪರಿಣಾಮ ಅವಘಡ ಸಂಭವಿಸಿದೆ ಎಂದು ಮೆಲ್ನೊಟಕ್ಕೆ ಕಂಡುಬಂದಿದೆ
ತಪ್ಪಿದ ಭಾರಿ ಅನಾಹುತ;-ಬಸ್ ನಲ್ಲಿ ಶಾಲಾ,ಕಾಲೇಜಿಗೆ ತೆರಳುವ ಸಲುವಾಗಿ ನೂರಾರು ಮಂದಿ ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು ಸದ್ಯ ಇಬ್ಬರನ್ನು ಹೊರತು ಪಡಿಸಿ ಬೇರೆಯವರಿಗೆ ಯಾವುದೆ ತೊಂದರೆ ಸಂಭವಿಸಿಲ್ಲ ಒಂದು ವೇಳೆ ಮುಂದಿನ ಟೈರ್ ಸ್ಪೋಟಗೊಂಡಿದ್ದರೆ ಹೆಚ್ಚು ಅನಾಹುತ ಸಂಭವಿಸುತ್ತಿತ್ತು ಕುಣಿಗಲ್ ನಿಂದ ಇಪ್ಪಾಡಿ ಮಾರ್ಗವಾಗಿ ತಾವರೆಕೆರೆ ಗ್ರಾಮಕ್ಕೆ ತೆರಳುತ್ತಿದ್ದ ಬಸ್ ಗಳಲ್ಲಿ ವ್ಯತ್ಯಯ ಹಾಗೂ ಒಂದೆ ಬಸ್ ನಲ್ಲಿ ನಿಯಮ ಮೀರಿ ಪ್ರಯಾಣಿಕರ ಸಾಗಾಟ ಸಮಯಕ್ಕೆ ಸರಿಯಾದ ಬಸ್ ವ್ಯವಸ್ಥೆ ಇಲ್ಲದ ಕಾರಣ ಒಂದೆ ಬಸ್ ನಲ್ಲಿ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ನಿಂತುಕೊಂಡೆ ಪ್ರಯಾಣ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ
ಬಸ್ ಗಳ ವ್ಯತ್ಯಯ ಕಾರಣದಿಂದ ಹಾಗೂ ಇತ್ತಿಚೇಗೆ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕಲ್ಪಿಸಿರುವ ಕಾರಣ ಈ ಭಾಗದಲ್ಲಿ ಒಡಾಡುವ ಕೆಲವೆ ಬಸ್ ಗಳಲ್ಲಿ ನಿಯಮ ಮೀರಿ ಅತಿ ಹೆಚ್ಚು ಪ್ರಯಾಣಿಕರನ್ನು ತುಂಬಲಾಗುತ್ತಿದ್ದೆ ಕಳೆದೊಂದು ವರ್ಷದಿಂದ ಕುಣಿಗಲ್ ಇಪ್ಪಾಡಿ ತಾವರೆಕೆರೆ ಮಾರ್ಗಗಳ ಎರಡು ಬಸ್ ಗಳನ್ನು ಸ್ಥಗಿತಗೊಳಿಸಲಾಗಿದೆ ಇತ್ತಿಚೇಗೆ ಶಾಲಾ-ಕಾಲೇಜು ಪ್ರಾರಂಭವಾದ ಬಳಿಕ ಈ ರೂಟ್ ನಲ್ಲಿ ಹೆಚ್ಚಿನದಾಗಿ ವಿದ್ಯಾರ್ಥಿಗಳು ಸಂಚರಿಸುತ್ತಾರೆ ಆದ್ದರಿಂದ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕೆಂಬುದು ಈ ಭಾಗದ ವಿದ್ಯಾರ್ಥಿಗಳ ಹಾಗೂ ಸಾರ್ವಜನಿಕರ ಒತ್ತಾಯವಾಗಿದೆ,