ರೈತರ ಜಾನುವಾರು ಕೊಟ್ಟಿಗೆಯ ಬೀಗ ಮುರಿದು ಮೇಕೆಗಳ ಕಳವು! ದೂರು ದಾಖಲು

Spread the love

ಮನೆಯ ಬೀಗ ಮುರಿದು ಮೇಕೆಗಳ ಕಳವು ಪ್ರಕರಣ ದಾಖಲು

ಕುಣಿಗಲ್ ತಾಲ್ಲೂಕಿನ ಕಿತ್ತಿನಾಮಂಗಲ ಗ್ರಾಮದಲ್ಲಿ ಬುಧವಾರ ತಡರಾತ್ರಿ ಗ್ರಾಮದ ಮುಷೀರ್ ಅಹಮದ್ ಎಂಬುವವರ ಮನೆಯ ಅಕ್ಕ ಪಕ್ಕದ ಮನೆಗಳಿಗೆ ಚಿಲಕ (ಲಾಕ್) ಮಾಡಿ ಮುಷೀರ್ ಅಹಮದ್ ರವರ ಕೋಟ್ಟಿಗೆಯ ಬೀಗ ಮುರಿದು ಮೂರು ಮೇಕೆಗಳನ್ನು ಕದ್ದೊಯ್ಯಲಾಗಿದೆ ಇದಾದ ಬಳಿಕ ತಿಪ್ಪನಾಯಕನಹಳ್ಳಿ ಗ್ರಾಮದ ಬೋರೆಗೌಡ ಎಂಬುವವರ ಕೋಟ್ಟಿಗೆಯ ಬೀಗ ಮುರಿದು ನಾಲ್ಕು ಮೇಕೆಗಳನ್ನು ಕಳವು ಮಾಡಲಾಗಿದೆ

ಒಂದೆ ರಾತ್ರಿಯಲ್ಲಿ ಎರಡು ಕಡೆಗಳಲ್ಲಿ ಸರಣಿ ಕಳ್ಳತನ ನಡೆಸಿ ರೈತರ ಮೇಕೆಗಳನ್ನು ಕಳವು ಮಾಡಲಾಗಿದೆ ಹಾಗೂ ಕಳೆದೊಂದು ವಾರದ ಹಿಂದೆ ತಾಲ್ಲೂಕಿನ ಕಸಬಾ ಹೋಬಳಿಯ ತರಿಕೆರೆ ಗ್ರಾಮದ ಮರಿಗೌಡ ಹಾಗೂ ಕೋಡಿ ಪುಟ್ಟಯ್ಯ ಎಂಬುವವರ ಮೂರು ಮೇಕೆಗಳನ್ನು ಕಳವು ಮಾಡಲಾಗಿತ್ತು ತಾಲ್ಲೂಕಿನಲ್ಲಿ ರೈತರ ಜಾನುವಾರುಗಳು ಪದೆ ಪದೆ ಕಳವಾಗುತ್ತಿದ್ದು ಪೊಲೀಸರು ಮಾತ್ರ ರೈತರ ಯಾವುದೆ ಪ್ರಕರಣಗಳನ್ನು ಭೇದಿಸುವ ಮನಸ್ಸು ಮಾಡಿಲ್ಲ ಗ್ರಾಮೀಣ ಭಾಗದಲ್ಲಿ ಬೀಟ್ ಪೊಲೀಸ್ ವ್ಯವಸ್ಥೆ (ರಾತ್ರಿ ಗಸ್ತು) ಹೆಚ್ಚಿಸುವುದರ ಜೋತೆಗೆ ಅನುಮಾನಸ್ಪದವಾಗಿ ರಾತ್ರಿ ವೇಳೆಯಲ್ಲಿ ಒಡಾಡುವ ವಾಹನಗಳು ಹಾಗೂ ವ್ಯಕ್ತಿಗಳ ಮೇಲೆ ನಿಗವಹಿಸಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ

ರೈತರ ಜಾನುವಾರು ಕೋಟ್ಟಿಗೆಯ ಬೀಗಗಳನ್ನು ಮುರಿದು ಕಳ್ಳತನ ಮಾಡುತ್ತಿವುದರಿಂದ ರಾತ್ರಿ ವೇಳೆಯಲ್ಲಿ ರೈತರಿಗೆ ತಮ್ಮ ಜಾನುವಾರುಗಳನ್ನು ಕಾಯುವುದೆ ಈಗ ದೊಡ್ಡ ಸವಾಲಾಗಿದೆ,ಇನ್ನೂ ಘಟನೆ ಸಂಬಂಧ ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ,