ಮುಂದಿನ ಪೀಳಿಗೆಗೆ ಪರಿಸರ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಡಿ.ಸಿ.ಎಫ್ ಹೆಚ್,ಅನುಪಮ

Spread the love

ಕುಣಿಗಲ್;- ಹುಲಿಯೂರುದುರ್ಗ ಪಟ್ಟಣದ ಹೊಸಪೇಟೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಅವರಣದಲ್ಲಿ ಮಂಗಳವಾರ ಕರ್ನಾಟರಾಜ್ಯ ಅರಣ್ಯ ಇಲಾಖೆ ಹಾಸನ ವೃತ್ತ ತುಮಕೂರು ವಿಭಾಗ ಪ್ರಾದೇಶಿಕ ವಲಯ ಅರಣ್ಯ ಕುಣಿಗಲ್ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಪರಿಸರದಿನವನ್ನು ಆಚರಿಸಲಾಯಿತು

ಗಿಡಕ್ಕೆ ನೀರನ್ನು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿಲಾಯಿತು ಬಳಿಕ ಮಾತನಾಡಿದ ತುಮಕೂರು ಉಪ ಅರಣ್ಯ ಸಂರಕ್ಷಧಿಕಾರಿ ಹೆಚ್,ಅನುಪಮ (IFS) ಮುಂದಿನ ಪೀಳಿಗೆಗೆ ಪರಿಸರ ಉಳಿಸುವ ನಿಟ್ಟಿನಲ್ಲಿ ಅರಣ್ಯ ಸಂರಕ್ಷಣೆ ಮಾಡುವ ಜವಾಬ್ದಾರಿ ನಮ್ಮನಿಮ್ಮೆಲ್ಲರ ಮೇಲಿದೆ ಈಗಿನ ಜನಸಂಖ್ಯೆ ಹಾಗೂ ಅಭಿವೃದ್ದಿಯ ಒತ್ತಡದಲ್ಲಿ ಕಾಡು ಒತ್ತುವರಿಯಾಗುತ್ತಿದೆ ನಾವು ಸರಿಯಾಗಿ ಕಾಡನ್ನು ರಕ್ಷಣೆ ಮಾಡದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾಡು ಇನ್ನೂ ಕಡಿಮೆಯಾಗುವ ಸಾಧ್ಯತೆಗಳಿವೆ

ಪರಿಸರವನ್ನು ಆರೋಗ್ಯಕರವಾಗಿ ಕಾಪಡುವ ನಿಟ್ಟಿನಲ್ಲಿ ಮಕ್ಕಳು ಪಾತ್ರ ಮಾಹತ್ವವಾದದ್ದು ಮನೆಯ ಅಂಗಳದಲ್ಲಿ ಗಿಡ ಮರ ಬೇಳೆಸುವ ನಿಟ್ಟಿನಲ್ಲಿ ಹಾಗೂ ನೀರನ್ನು ಮಿತವಾಗಿ ಬಳಸುವ ಜೋತೆಗೆ ನಾವುಗಳು ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡಬೇಕು ಜೋತೆಗೆ ಶಾಲೆಗಳಲ್ಲಿ ಮಕ್ಕಳಿಗೆ ವಾರದಲ್ಲಿ ಒಂದು ದಿನವಾದರು ಮಕ್ಕಳಿಗೆ ಒತ್ತು ನೀಡಿ ಪರಿಸರ ಅರಣ್ಯ ಪ್ರಾಣಿಗಳ ಬಗ್ಗೆ ಮಕ್ಕಳಿಗೆ ಶಿಕ್ಷಕರು ಜಾಗೃತಿ ಜೋತೆಗೆ ಅರಿಮೂಡಿಸುವ ಪ್ರಯತ್ನ ಪಡಬೇಕು

ರಾಜ್ಯದಲ್ಲಿ ತುಮಕೂರು ಜಿಲ್ಲೆಯ ನಾಗವಲ್ಲಿಯಲ್ಲಿ ಅತಿ ವಿಶೇಷವಾಗಿ ಕಾಡುಪಾಪಗಳ ಸಂತತಿಯಿದ್ದು ಈ ಪ್ರಾಣಿಯನ್ನು ಇತ್ತಿಚೇಗೆ ಜೀವಂತವಾಗಿ ಹಿಡಿದು ವಾಮಚಾರಕ್ಕೆ ಬಳಸುವಂತಹ ಅಮಾನವಿಯ ಘಟನೆಗಳು ರಾಜ್ಯದಲ್ಲಿ ವರದಿಯಾಗುತ್ತಿವೆ ಯಾರಿಗೂ ತೊಂದರೆ ನೀಡದ ಇಂತಹ ಪ್ರಾಣಿಗಳನ್ನು ಹಿಡಿದು ಹಿಂಸಿಸಲಾಗುತ್ತಿದೆ ಇಂತಹ ಮೂಡ ನಂಬಿಕೆಗಳ ಬಗ್ಗೆ ಜಾಗೃತಿ ಮೂಡಿಸುವ ಜೋತೆಗೆ ಮೂಖ ಪ್ರಾಣಿಗಳನ್ನು ಸಂರಕ್ಷಣೆ ಮಾಡಬೇಕು ಕಾಡು ಉಳಿಸಿದರಷ್ಟೆ ಮಾನವ ಸಂಕುಲ ಉಳಿವು ಎಂದರು ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಗೆ ಗಿಡಗಳ ವಿತರಣೆ ಮಾಡಲಾಯಿತು ಹಾಗೂ ಶಾಲೆಯ ಅವರಣದಲ್ಲಿ ಗಿಡಗಳನ್ನು ನೆಡಲಾಯಿತು ಕಾರ್ಯಕ್ರಮದಲ್ಲಿ ಅರಣ್ಯ ಸಂರಕ್ಷಧಿಕಾರಿ ಮಹೇಶ್ ವಿ ಮಾಲಗತ್ತಿ,ವಲಯ ಅರಣ್ಯಾಧಿಕಾರಿ ಮೋಹಮದ್ ಮನ್ಸೂರ್,ಮಧುಗಿರಿ ವಲಯ ಅರಣ್ಯಧಿಕಾರಿ ರವಿ,ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮಂಜುನಾಥ್,ಉಪಾಧ್ಯಕ್ಷ ಅಲ್ಲಾ ಭಕಾಷ್,ಅರಣ್ಯಧಿಕಾರಿ,ಮಹೇಶ್,ಮನು, ಶಿಕ್ಷಕ ನಿಡಸಾಲೆ ಪ್ರಸಾದ್,ನಟರಾಜು,ಶಿವಣ್ಣ, ಗ್ರಾಮ ಪಂಚಾಯ್ತಿ ಸದಸ್ಯ ನಾಗೇಶ್ ಸೆರಿದಂತೆ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು,