ಗಿರಿಗೌಡನಪಾಳ್ಯ ಗ್ರಾಮದಿಂದ ಯಾಚಘಟ್ಟ ಗ್ರಾಮಕ್ಕೆ ಹೊಗುವ ರಸ್ತೆ ಪಕ್ಕದಲ್ಲಿರುವ ಸರ್ಕಾರಿ ಗೋಕಟ್ಟೆಯನ್ನು ಟ್ವಿಟರ್ ಲಾರಿ ಬಳಸಿ ಮುಚ್ಚುತ್ತಿರುವುದು!
ಕುಣಿಗಲ್ ತಾಲ್ಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ಗಿರಿ ಗೌಡನಪಾಳ್ಯ ಹಾಗೂ ಯಾಚಗಟ್ಟ ಗ್ರಾಮಗಳ ರಸ್ತೆಯ ಪಕ್ಕದಲ್ಲಿರುವ ಪುರಾತನ ಕಾಲದ ಸರ್ಕಾರಿ ಗೋಕಟ್ಟೆಯನ್ನು ಕಬಳಿಸಿ ಭೂಮಿಯನ್ನಾಗಿ ಪರಿವರ್ತಿಸುವ ಸಲುವಾಗಿ ಗ್ರಾಮದ ಪ್ರಭಾವಿಯೊಬ್ಬರು ಇದೀಗ ಗೋಕಟ್ಟೆಯನ್ನು ಮುಚ್ಚುತ್ತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ ಹಲವು ವರ್ಷಗಳಿಂದ ಈ ಭಾಗ ಸುತ್ತಮುತ್ತಲ ಗ್ರಾಮಗಳ ಜಾನುವಾರುಗಳು ಮತ್ತು ಪ್ರಾಣಿ ಪಕ್ಷಿಗಳಿಗೆ ದಾಹ ನೀಗಿಸುತ್ತಿದ್ದ ಗೋಕಟ್ಟೆ ಈಗ ಪ್ರಭಾವಿಗಳ ಕಣ್ಣಿಗೆ ಬಿದ್ದು ಮಾಯವಾಗಿದೆ ಈ ಭಾಗದಲ್ಲಿ ಭೂಮಿಗೆ ಚಿನ್ನಕ್ಕಿಂತಲು ದುಬಾರಿ ಬೆಲೆ ಬಂದಿದ್ದೆ ತಡ ಸರ್ಕಾರಿ ಗೋಮಾಳ ಹಾಗೂ ಗೋಕಟ್ಟೆ ಬೆಟ್ಟಗುಡ್ಡಗಳು ಕಣ್ಣಿಗೆ ಕಾಣದಂತಾಗಿವೆ ಪ್ರಭಾವಿಗಳು ಸರ್ಕಾರಿ ಭೂಮಿ ಕಬಳಿಸುತ್ತಿದ್ದರು ಕ್ರಮ ಕೈಗೊಳ್ಳಬೇಕಾದ ಕಂದಾಯ ಇಲಾಖೆಯ ಅಧಿಕಾರಿಗಳು ಮಾತ್ರ ಜಾಣ ನಿದ್ರೆಯಲ್ಲಿದ್ದಾರೆ
ಇನ್ನೂ ಸ್ಥಳೀಯ ಗ್ರಾಮ ಪಂಚಾಯಿತಿ ವತಿಯಿಂದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಅನುದಾನ ಬಳಸಿ ಗ್ರಾಮದ ಗೋಕಟ್ಟೆಯನ್ನು ಪುನಶ್ಚೇತನ ಗೊಳಿಸಲಾಗಿತ್ತು ಸುತ್ತಮುತ್ತಲ ಗ್ರಾಮಗಳ ಜಾನುವಾರುಗಳಿಗೆ ನೀರು ಕುಡಿಯಲು ಅನುಕೂಲವಾಗಿದ್ದ ಗೋಕಟ್ಟೆಯನ್ನು ಪಕ್ಕದ ಜಮೀನಿನ ಸುರೇಶ್ ಎಂಬುವರು ಭೂಮಿ ಸಮತಟ್ಟು ಮಾಡುವ ಉದ್ದೇಶದಿಂದ ಗೋಕಟ್ಟೆಯನ್ನು ಮುಚ್ಚುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದು ಸ್ಥಳೀಯ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದಾರೆ
ಇದಲ್ಲದೆ ಅಶ್ವಮೇಧ ಟ್ರಸ್ಟ್ ನ ಅಧ್ಯಕ್ಷ ಮಂಜುನಾಥ್ ಗೌಡ ಎಂಬುವವರು ಈ ಬಗ್ಗೆ ತಹಶೀಲ್ದಾರ್ ಮಹಾಬಲೇಶ್ವರ ಅವರಿಗೆ ದೂರು ನೀಡಿದ್ದು ಕೂಡಲೇ ಗಿರಿಗೌಡನಪಾಳ್ಯ ರಸ್ತೆಯಿಂದ ಯಾಚಘಟ್ಟ ಗ್ರಾಮಕ್ಕೆ ಹೊಗುವ ರಸ್ತೆ ಪಕ್ಕದಲ್ಲಿ ಒತ್ತುವರಿಯಾಗಿರುವ ಪುರಾತನಕಾಲದ ಗೋಕಟ್ಟೆಯನ್ನು ತೆರವು ಗೊಳಿಸಬೇಕೆಂದು ಒತ್ತಾಯಿಸಿದ್ದಾರೆ ಹಾಗೂ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಜಾನುವಾರುಗಳಿಗೆ ಕುಡಿಯುವ ನೀರೊದಗಿಸುತ್ತಿದ್ದ ಗೋಕಟ್ಟೆಯನ್ನು ಉಳಿಸಿಕೊಡಬೇಕು ಹಾಗೂ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಗ್ರಾಮದ ಪ್ರಕಾಶ್,ರಂಗಸ್ವಾಮಿ, ಧನಂಜಯ್,ಮುನಿಸ್ವಾಮಿ, ಹಾಗೂ ಚಿಕ್ಕಣ್ಣ, ಒತ್ತಾಯಿಸಿದ್ದಾರೆ