ಹೊಸಕೆರೆ ಗ್ರಾಮದ ಸರ್ಕಾರಿ ಶಾಲೆಯನ್ನು ಸ್ಥಳಾಂತರಿಸಿ ಹೊಸ ಕಟ್ಟಡವನ್ನು ನಿರ್ಮಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಿದ ಕಲಾವತಿ ದಿನೇಶ್ ಗೌಡ್ರು.

Spread the love

ಹೊಸಕೆರೆ ಗ್ರಾಮದ ಸರ್ಕಾರಿ ಶಾಲೆಯನ್ನು ಸ್ಥಳಾಂತರ ಮಾಡಿ ಹೊಸ ಕಟ್ಟಡವನ್ನು ನಿರ್ಮಿಸುವಂತೆ ಶಾಸಕರಿಗೆ ಮನವಿ ಸಲ್ಲಿಸಿದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ

ಕುಣಿಗಲ್;-ತಾಲ್ಲೂಕಿನ ಅಮೃತೂರು ಹೋಬಳಿ ವ್ಯಾಪ್ತಿಯ ಹೊಸಕೆರೆ ಗ್ರಾಮದಲ್ಲಿ ಶಿಥಿಲ ಗೊಂಡಿರುವ ಸರ್ಕಾರಿ ಶಾಲೆಯನ್ನು ಬೇರೆ ಕಡೆಗೆ ಸ್ಥಳಾಂತರಿಸಿ ನೂತನ ಕಟ್ಟಡವನ್ನು ನಿರ್ಮಿಸಿ ಕೊಡುವಂತೆ ಶಾಸಕ ಡಾ, ರಂಗನಾಥ್ ಗೆ ಜಿನ್ನಾಗರ ಗ್ರಾಮ ಪಂಚಾಯಿತಿಯ ಉಪಾಧ್ಯಕ್ಷರಾದ ಶ್ರೀಮತಿ ಕಲಾವತಿ ದಿನೇಶ್ ಗೌಡ್ರು ಮನವಿ ಮಾಡಿದ್ದಾರೆ

ಇನ್ನೂ ಇತ್ತೀಚೆಗೆ ಶಾಸಕರನ್ನು ಬೆಂಗಳೂರಿನ ನಿವಾಸದಲ್ಲಿ ಭೇಟಿ ಮಾಡಿದ ಶ್ರೀಮತಿ ಕಲಾವತಿ ದಿನೇಶ್ ಗೌಡರವರು ಹೊಸಕೆರೆ ಗ್ರಾಮದಲ್ಲಿ 1956 ರಲ್ಲಿ ಶಾಲೆ ಪ್ರಾರಂಭವಾಗಿದ್ದು ಶೈಕ್ಷಣಿಕವಾಗಿ ಸಾಂಸ್ಕೃತಿಕವಾಗಿ ಹಾಗೂ ಕ್ರೀಡೆಯಲ್ಲಿ ಗ್ರಾಮದ ಹೆಸರನ್ನು ಶಾಲೆಯ ಮಕ್ಕಳು ರಾಜ್ಯಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದು ಇತ್ತೀಚೆಗೆ ಶಾಲೆ ಕಟ್ಟಡ ತುಂಬಾ ಶಿಥಿಲಗೊಂಡಿದ್ದು ಮಕ್ಕಳ ವಿದ್ಯಾಭ್ಯಾಸಕ್ಕೆ ಸಾಕಷ್ಟು ತೊಂದರೆಯಾಗುತ್ತಿದೆ ಸದರಿ ಶಾಲೆಯಲ್ಲಿ ಒಂದನೇ ತರಗತಿಯಿಂದ 7ನೇ ತರಗತಿವರೆಗೂ ಮಕ್ಕಳು ಕಲಿಯುತ್ತಿದ್ದು ಗ್ರಾಮದ ಮಧ್ಯ ಭಾಗದಲ್ಲಿರುವ ಶಾಲೆಗೆ ಸರಿಯಾದ ರೀತಿಯ ಮೂಲಸೌಕರ್ಯ ಇಲ್ಲದ ಕಾರಣ ಹಾಗೂ ಪ್ರಸ್ತುತ ಕಟ್ಟಡದಲ್ಲಿ ಮಕ್ಕಳಿಗೆ ಸರಿಯಾಗಿ ಗಾಳಿ ಬೆಳಕಿನ ವ್ಯವಸ್ಥೆ ಇರುವುದಿಲ್ಲ ಮಕ್ಕಳಿಗೆ ಆಟವಾಡಲು ಮೈದಾನವು ಇಲ್ಲ ಹಾಗಾಗಿ

ಗ್ರಾಮದಲ್ಲಿ ಶಾಲೆ ನಿರ್ಮಿಸುವುದಕ್ಕೆ ಸೂಕ್ತ ಸರ್ಕಾರಿ ಜಾಗವಿದ್ದು ಸದರಿ ಶಾಲೆಯನ್ನು ಲಭ್ಯವಿರುವ ಜಾಗಕ್ಕೆ ಸ್ಥಳಾಂತರಿಸಿ ನೂತನ ಕಟ್ಟಡವನ್ನು ನಿರ್ಮಿಸಿ ಮಕ್ಕಳಿಗೆ ವಿದ್ಯಾಭ್ಯಾಸ ಕಲಿಯಲು ಅನುವು ಮಾಡಿಕೊಡಬೇಕೆಂದು ಶಾಸಕರಿಗೆ ಮನವಿ ಮಾಡಲಾಗಿದೆ @publicnewskunigal