ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಕಾರಣದಿಂದ ಎಲೆಕಡಕಲು ಗ್ರಾಮದಲ್ಲಿ ಬಾರಿ ಅನಾಹುತ!

Spread the love


ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಕಾರಣದಿಂದ ಎಲೆಕಡಕಲು ಗ್ರಾಮದಲ್ಲಿ ಬಾರಿ ಅನಾಹುತ

ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಎಲೆಕಡಕಲು ಗ್ರಾಮದಲ್ಲಿ ಭಾನುವಾರ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಕಾರಣದಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ ಗ್ರಾಮದಲ್ಲಿ 11ಕೆ.ವಿ ವಿದ್ಯುತ್ ಮಾರ್ಗವನ್ನು ಬದಲಿಸುವಂತೆ ಹಲವುಭಾರಿ ಅಧಿಕಾರಿಗಳಿಗೆ ಮನವಿ ಮಾಡಿದರು ಕ್ರಮ ಕೈಗೊಳ್ಳದ ಇನ್ನೆಲೆಯಲ್ಲಿ ಗ್ರಾಮದಲ್ಲಿ 11ಕೆ.ವಿ ಮಾರ್ಗದ ವಿದ್ಯುತ್ ತಂತಿ ತುಂಡಾಗಿ ಗ್ರಾಮದ ಮನೆಗಳಿಗೆ ಸಂಪರ್ಕ ಹೊಂದಿದ್ದ ಎರಡನೆ ಹಂತದ ವಿದ್ಯುತ್ ತಂತಿಯ ಮೇಲೆ ಬಿದ್ದ ಪರಿಣಾಮ ಗ್ರಾಮದಲ್ಲಿ ಸುಮಾರು ನೂರಕ್ಕೂ ಹೆಚ್ಚು ಮನೆಗಳಲ್ಲಿ ಟಿವಿ,ರೆಫ್ರಿಜರೇಟರ್,ವಿದ್ಯುತ್ ಮೀಟರ್,ಚಾರ್ಜಗೆ ಇಟ್ಟಿದ್ದ ಮೋಬೈಲ್ ಪೋನ್ ಗಳು ಚಾರ್ಜರ್ಗಳು,ಮನೆಯಲ್ಲಿ ಅಳವಡಿಸಲಾಗಿದ್ದ ಎಲೆಕ್ಟ್ರಾನಿಕ್ ಉಪಕರಣಗಳು ಸಹಪೂರ್ಣವಾಗಿ ಸುಟ್ಟು ಕರಕಲಾಗಿವೆ

ಇದಲ್ಲದೆ ಗ್ರಾಮ ರೈತ ಮಹಿಳೆ ಚಿಕ್ಕತಾಯಮ್ಮ ರವರ ಎಮ್ಮೆಕರು ಸಾವನ್ನಪ್ಪಿದೆ ಇದೆ ಸಂದರ್ಭದಲ್ಲಿ ಚಿಕ್ಕತಾಯಮ್ಮ ವಿದ್ಯುತ್ ತಗುಲಿದ್ದ ಎಮ್ಮೆ ಕರು ಬಿಡಿಸಿಕೊಳ್ಳುವ ವೇಳೆ ಕೈಗೆ ವಿದ್ಯುತ್ ತಗುಲಿ ಗಾಯಗಳಾಗಿವೆ ಬೆಸ್ಕಾಂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ ಕಾರಣದಿಂದ ಇಡಿ ಗ್ರಾಮದಲ್ಲಿ ಭಯದ ವಾತವರಣ ನಿರ್ಮಾಣವಾಗಿದೆ

ಇನ್ನೂ ಸ್ಥಳಕ್ಕೆ ಬಂದ ಬೆಸ್ಕಾಂ ಇಲಾಖೆಯ ಅಧಿಕಾರಿಗಳನ್ನು ಗ್ರಾಮಸ್ಥರು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿದ್ದು ವಿದ್ಯುತ್ ಅವಗಡದಿಂದಾಗಿ ಗ್ರಾಮದಲ್ಲಿಗ ಕತ್ತಲು ಅವರಿಸಿದೆ ಸ್ಥಳಕ್ಕೆ ಹುಲಿಯೂರುದುರ್ಗ ಪಿಎಸ್ಐ ಸುನಿಲ್ ಕುಮಾರ್ ಬೇಟಿನೀಡಿ ಪರಿಶೀಲನೆ ನಡೆಸಿದ್ದು ಘಟನೆ ಸಂಬಂಧ ಎಲೆಕಡಕಲು ಗ್ರಾಮಸ್ಥರು ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ @publicnewskunigal