ಕುಣಿಗಲ್ ;- ಪಟ್ಟಣದಲ್ಲಿ ಹಾಡಹಗಲೆ ಲಾಂಗು ಮಚ್ಚು ಜಳಪಿಸಿದ ಕೀಡಿಗೆಡಿಗಳ ಬಂಧಿಸುವಲ್ಲಿ ಪೊಲೀಸರು ಯಶಸ್ವಿ!
ಇತ್ತೀಚೆಗೆ ಕುಣಿಗಲ್ ಪಟ್ಟಣದಲ್ಲಿ ಹಾಡಹಗಲೆ ಲಾಂಗು ಮಚ್ಚು ಹಿಡಿದು ರಸ್ತೆಯಲ್ಲಿ ವ್ಯಕ್ತಿಯೋರ್ವನ ಮೇಲೆ ಹಲ್ಲೆ ನಡೆಸಿರುವ ಸಂಬಂಧ ನಾಗರಿಕರನ್ನು ಬೆಚ್ಚಿ ಬಿಳುವಂತೆ ಮಾಡಿತ್ತು ಜೋತೆಗೆ ಈ ಘಟನೆ ಕುಣಿಗಲ್ ಪೋಲಿಸರ ಕಾರ್ಯ ವೈಕರಿಯನ್ನು ಅಣಕಿಸುವಂತೆ ಮಾಡಿತ್ತು,
ಕೂಡಲೆ ಕಾರ್ಯ ಪ್ರವೃತ್ತರಾದ ಕುಣಿಗಲ್ ಪಟ್ಟಣದ ಪೊಲೀಸರು ಘಟನೆ ನಡೆದು ಐದು ದಿನಗಳಲ್ಲಿ ನಾಲ್ಕು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ
ಕೂತರಹಳ್ಳಿ ಗ್ರಾಮದ ಕೆ,ಡಿ,ಆಕಾಶ್, ಬಿಳಿದೇವಾಲಯ ಗ್ರಾಮದ ಸಾಗರ್, ಚಿಕ್ಕಕಲ್ಯಾ ಗ್ರಾಮದ ರಾಜಣ್ಣ, ಅಲಿಯಾಸ್ ಮಚ್ಚುರಾಜು, ಕುಣಿಗಲ್ ಪಟ್ಟಣದ ಆಶ್ರಯ ಕಾಲೋನಿಯ ಎಂ,ಎಸ್,ಪ್ರಸಾದ್ ಬಂಧಿತ ಆರೋಪಿಗಳಾಗಿದ್ದು,
ಕಳೆದ ಗುರುವಾರ ಕುಣಿಗಲ್ ಪಟ್ಟಣದ ಮಲ್ಲಾಘಟ್ಟ ಎಲ್,ಐ,ಸಿ ಕಚೇರಿಯ ಮುಂಭಾಗ ಟೀ ಅಂಗಡಿ ಬಳಿ ತಾಲ್ಲೂಕಿನ ಮೇಸ್ತ್ರಿಗೌಡನಪಾಳ್ಯ ಗ್ರಾಮದ ಜಗದೀಶ್ ಅಲಿಯಾಸ್ ಜಗ ಹಾಗೂ ಆತನ ಸ್ನೇಹಿತ ರೇಣುಕಾ ಅವರು
ಟೀ ಕುಡಿದು ಕುಣಿಗಲ್ ಪಟ್ಟಣದ ಕಡೆ ನಡೆದುಕೊಂಡು ಹೊಗುತ್ತಿರುವಾಗ ಹಳೆಯ ದ್ವೇಶ ಇಟ್ಟುಕೊಂಡಿದ್ದ
ಕೂತರಹಳ್ಳಿ ಗ್ರಾಮದ ಆರೋಪಿ ಆಕಾಶ್,ರಸ್ತೆ ಬದಿಯಲ್ಲಿ ನಡೆದುಕೊಂಡು ಹೊಗುತ್ತಿದ್ದ ಜಗದೀಶ್ ಅಲಿಯಾಸ್ ಜಗ ಎಂಬುವನಿಗೆ ಲಾಂಗ್ ನಿಂದ ಮಾರಣಾಂತಿಕ ಹಲ್ಲೆ ನಡೆಸಿ ಬಳಿಕ ಸಹಚರರೊಂದಿಗೆ ಪರಾರಿಯಾಗಿದ್ದ, ಘಟನೆಯಿಂದ ಪಟ್ಟಣದ ಸಾರ್ವಜನಿಕರು ಭಯಭೀತರಾಗಿದ್ದರು ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣ ಸೆರಿದಂತೆ ಎಲ್ಲೆಡೆ ವೈರಲ್ ಆಗಿತ್ತು,
ಪ್ರಕರಣ ದಾಖಲಿಸಿಕೊಂಡು ಕಾರ್ಯಚರಣೆ ಕೈಗೊಂಡ ಕುಣಿಗಲ್ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ರಾಹುಲ್ ಕುಮಾರ್, ಎ.ಎಸ್.ಪಿ ವಿ,ಮರಿಯಪ್ಪ,ಕುಣಿಗಲ್ ಉಪವಿಭಾಗದ ಡಿವೈಎಸ್ಪಿ ಲಕ್ಷ್ಮಿಕಾಂತ್, ಅವರ ಮಾರ್ಗದರ್ಶಿನದಲ್ಲಿ ಸಿಪಿಐ ನವೀನ್‌ಗೌಡ ಅವರ ನೇತೃತ್ವದ ಪೊಲೀಸರ ತಂಡ ಬೆಂಗಳೂರು ದಾಬಸ್‌ಪೇಟೆ, ಕುಣಿಗಲ್ ತಾಲೂಕು ಅಂಚೇಪಾಳ್ಯ, ಮಾವಿನಕಟ್ಟೆಪಾಳ್ಯ ಸೆರಿದಂತೆ ಹಲವು ಕಡೆಗಳಲ್ಲಿ ಕಾರ್ಯಚರಣೆ ನಡೆಸಿ ಆರೋಪಿಗಳಾದ ಆಕಾಶ್ ಹಾಗೂ ಹಲ್ಲೆಗೆ ಸಹಕರಿಸಿದ ಸಾಗರ್, ರಾಜು ಅಲಿಯಾಸ್ ಮಚ್ಚುರಾಜ, ಪ್ರಸಾದ್‌ನನ್ನು ಬಂಧಿಸಿ ಕೃತ್ಯಕ್ಕೆ ಬಳಸಿದ್ದ ಲಾಂಗು,ಕಾರು,ಬೈಕ್ ವಶಪಡಿಸಿಕೊಂಡು ಆರೋಪಿಗಳ ಎಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದು ಕಾರ್ಯಾಚರಣೆಯಲ್ಲಿ ಪಟ್ಟಣದ ಠಾಣೆಯ ಕಾನ್ಸ್ಟೇಬಲ್‌ಗಳಾದ ಮಲ್ಲಿಕಾರ್ಜುನ, ನಟರಾಜು, ಮಂಜು, ನವೀನ, ಯೋಗೀಶ್, ಷಡಾಕ್ಷರಿ, ಭಾಗವಹಿಸಿದರು @publicnewskunigal