ಕುಣಿಗಲ್ ;-ತೋಟಗಾರಿಕೆ ಇಲಾಖೆ ವತಿಯಿಂದ 2023 – 24 ನೇ ಸಾಲಿನ ತೋಟಗಾರಿಕೆ ಪ್ರದೇಶ ವಿಸ್ತರಣೆ ಯೊಜನೆಯಡಿ ರೋಗ ಮತ್ತು ಕೀಟ ನಿರ್ವಹಣೆ,ಮಾವು ಮತ್ತು ತೆಂಗು ಪುನಶ್ಚೇತನ,ಜೆನುಸಾಕಣಿಕೆ ಹಾಗೂ ಯಾಂತ್ರಿಕರಣಾ ಯೋಜನೆಯಡಿ ತೋಟಗಾರಿಕೆ ರೈತರಿಗೆ ಹಾಗೂ ಉದ್ದಿಮೆದಾರರಿಗೆ ನೆರವು ನೀಡುವ ಸಲುವಾಗಿ ಅರ್ಹ ರೈತರಿಂದ ಅರ್ಜಿ ಅಹ್ವಾನಿಸಲಾಗಿದ್ದು ಗರಿಷ್ಟ 1.25 ಲಕ್ಷ ಯಂತ್ರೋಪಕರಣ ಖರೀದಿಸಲು
ನೀಡಲಾಗುವುದು ಪರಿಶಿಷ್ಠಜಾತಿ,ಪರಿಶಿಷ್ಠಪಂಗಡ ಸಣ್ಣ ಮತ್ತು ಅತೀ ಸಣ್ಣ ಹಾಗೂ ಮಹಿಳಾ ರೈತರಿಗೆ ಶೇ 50 ರಂತೆ ಮತ್ತು ಸಾಮಾನ್ಯ ಮತ್ತು ಇತರೆ ವರ್ಗದ ರೈತರಿಗೆ ಶೇ 40 ರಂತೆ ಸಹಾಯಧನ ನೀಡಲಾಗೂವುದು ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೆಶಕರು ತಿಳಿಸಿದ್ದು ಆಸಕ್ತ ರೈತರು ಅರ್ಜಿಯೊಂದಿಗೆ ಪಹಣಿ ಬೇಳೆ ಧೃಡಿಕರಣ,ಚೆಕ್‌ಬಂದಿ,ಆಧಾರ್ ಮತ್ತು ಬ್ಯಾಂಕ್‌ಪಾಸ್ಬುಕ್ ಪ್ರತಿ ಜಾತಿ ಪ್ರಮಾಣಪತ್ರ ಮತ್ತು ಅಗತ್ಯ ದಾಖಲೆಗಳೊಂದಿಗೆ
ತೋಟಗಾರಿಕ ಇಲಾಖೆಯ ಸಹಾಯಕ ನಿರ್ದೆಶಕರ ಕಛೇರಿ ಜಿಲ್ಲಾಪಂಚಾಯ್ತಿ ಕುಣಿಗಲ್ ಇವರನ್ನು ಸಂಪರ್ಕಿಸಲು ಕೋರಿದೆ ಮಾರ್ಗಸೂಚಿಅನುಸಾರ ಗುರಿಗೆ ಅನುಗುಣವಾಗಿ ಫಲನುಭವಿಯನ್ನು ಜೆಷ್ಠತೆ ಆಧಾರದ ಮೇಲೆ ಸಹಾಯಧನಕ್ಕೆ ಪರಿಗಣಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದು ಹೆಚ್ಚಿನ ಮಾಹಿತಿಗೆ ಕುಣಿಗಲ್ ಪಟ್ಟಣದ ತೋಟಗಾರಿಕೆ ಇಲಾಕೆಯ ಸಹಾಯಕ ನಿರ್ದೇಶಕರ ಕಚೆರಿಯನ್ನು ಸಂಪರ್ಕಿಸಲು ಕೊರಿದೆ, @publicnewskunigal