ಕುಣಿಗಲ್‌ ಪಟ್ಟಣದಲ್ಲಿ ಸುರಿದ ಮಳೆಯ ಕಾರಣದಿಂದ ಜಲವೃತಗೊಂಡ ಖಾಸಗಿ ಬಸ್‌ ನಿಲ್ದಾಣ! ವಾಹನ ಸವಾರರ ಪರದಾಟ,

Spread the love

ಕುಣಿಗಲ್‌;-ಮಂಗಳವಾರ ಸಂಜೆ ಸುರಿದ ಮಳೆಯ ಕಾರಣದಿಂದಾಗಿ ಕುಣಿಗಲ್‌ ಪಟ್ಟಣದ ಖಾಸಗಿ ಬಸ್‌ ನಿಲ್ದಾಣ ಕೆರೆಯಂತೆ ಕಾಣುತಿತ್ತು ಇನ್ನೂ ಕೆ.ಎಸ್.ಆರ್.ಟಿ.ಸಿ ಬಸ್‌ ನಿಲ್ದಾಣದ ಕಡೆಗೆ ಇದೆ ರಸ್ತೆಯಲ್ಲಿ ತೇರಳುವ ಸಾರ್ವಜನಿಕರು ಮತ್ತು ವಾಹನ ಸವಾರರು ರಸ್ತೆ ದಾಟಲು ಹರಸಾಹಸ ಪಟ್ಟರೆ ಇನ್ನೂ ಕೆಲ ವಾಹನ ಸಾವರರು ನಿರಿನಲ್ಲಿ ಸಿಲುಕಿ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು

ಹಲವು ವರ್ಷಗಳಿಂದ ಅಧಿಕಾರಿಗಳ ಹಾಗೂ ಜನ ಪ್ರತಿನಿದಿಗಳ ನಿರ್ಲಕ್ಷ ಕಾರಣದಿಂದಾಗಿ ಅಭಿವೃದ್ದಿ ಕಾಣದಂತಾದ ಕುಣಿಗಲ್‌ ಪಟ್ಟಣದ ಖಾಸಗಿ ಬಸ್‌ ನಿಲ್ದಾಣ!

ಪುರಸಭೆ ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳ ನಿರ್ಲಕ್ಷ ಒಳಗಾಗಿರುವ ಪಟ್ಟಣದ ಖಾಸಗಿ ಬಸ್‌ ನಿಲ್ದಾಣ ಯಾವುದೆ ಅಭಿವೃದ್ದಿ ಕಂಡಿಲ್ಲ ಇನ್ನೂ ಖಾಸಗಿ ಬಸ್‌ ನಿಲ್ದಾಣ ತಗ್ಗು ಪ್ರದೇಶ ವಾಗಿರುವುದರಿಂದ ಮಳೆ ಬಂದರೆ ಸಾಕು ನೀರು ಹೋರಗೆ ಸರಾಗವಾಗಿ ಹರಿಯಲು ಸಾಧ್ಯವಾಗದ ಕಾರಣ ಬಸ್‌ ನಿಲ್ದಾಣ ಕೆರೆಯಂತಾಗುತ್ತದೆ 10 ಕೋಟಿ ರೂಪಾಯಿ ವೆಚ್ಚದಲ್ಲಿ ಯೋಜನೆಯನ್ನು ಕೈಗೆತ್ತಿಕೋಳ್ಳಲಾಗಿದ್ದರು ಸಹ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ ಪುರಸಭೆಯಲ್ಲಿ ಈಗಾಗಲೆ 3,5 ಕೋಟಿ ರೂಪಾಯಿ ಅನುದಾನವನ್ನು ಖಾಸಗಿ ಬಸ್‌ ನಿಲ್ದಾಣದ ಅಭಿವೃದ್ದಿಗೆ ಮೀಸಲಿರಿಸಲಾಗಿದ್ದು 7,5 ಕೋಟಿ ಹೆಚ್ಚುವರಿ ಅನುದಾನಕ್ಕಾಗಿ ಸರ್ಕಾರದ ಮೋರೆ ಹೋಗಲಾಗಿಗೆ ಎಂದು ಪುರಸಭೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಹತ್ತಾರು ವರ್ಷಗಳಿಂದ ಖಾಸಗಿ ಬಸ್‌ ನಿಲ್ದಾಣದ ಅಭಿವೃದ್ದಿ ಪಡಿಸುವಂತೆ ಸಾರ್ವಜನಿಕರ ಕೂಗು ಕೇಳಿ ಬಂದಿದ್ದರು ಸಹ ಜನ ಪ್ರತಿನಿದಿಗಳು ಮಾತ್ರ ಅಭಿವೃದ್ದಿ ಮಾಡುವಲ್ಲಿ ಮೀನಾ ಮೇಷ ಎಣಿಸುತ್ತಿದ್ದಾರೆ

ಈ ಹಿಂದೆ ಪುರಸಭೆಯಲ್ಲಿ ನಡೆದ ಸಾಮನ್ಯ ಸಭೆಗಳಲ್ಲಿ ಖಾಸಗಿ ಬಸ್‌ ನಿಲ್ದಾಣ ಅಭಿವೃದ್ದಿಯ ವಿಷಯ ಹಲವು ಬಾರಿ ಚರ್ಚೆಗೆ ಬಂದರು ಸಹ ಅದು ಚರ್ಚೆಯಾಗಿ ಉಳಿದಿದೆ ಹೊರತು ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ ಇತ್ತ ಬಸ್ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಮೂಲ ಸೌಕರ್ಯವು ಇಲ್ಲ ಕುಳಿತುಕೊಳ್ಳಲು ಸರಿಯಾದ ಆಸನದ ವ್ಯವಸ್ಥೆಯಿಲ್ಲ ಇರುವ ತಂಗುದಾಣದ ಕಟ್ಟಡ ಶಿಥಿಲಗೊಂಡಿದ್ದು ಮುರಿದು ಬಿಳುವ ಸ್ಥಿತಿಯಲ್ಲಿದೆ ಒಟ್ಟಾರೆ ಪಟ್ಟಣದ ಬಸ್ ನಿಲ್ದಾಣದ ತಿಪ್ಪೆ ಗುಂಡಿಗಿಂತಲು ಕಡಿಮೆಯೇನಿಲ್ಲ ಎಂಬಂತಾಗಿದೆ ಇನ್ನಾದರು ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಎಚ್ಚೆತ್ತುಕೊಂಡು ಪಟ್ಟಣಕ್ಕೆ ಕಪ್ಪು ಚುಕ್ಕೆಯಂತಿರುವ ಖಾಸಗಿ ಬಸ್‌ ನಿಲ್ದಾಣಕ್ಕೆ ಅಭಿವೃದ್ದಿಯ ಟಚ್‌ ನೀಡುವರೆ ಕಾದು ನೊಡಬೇಕಿದೆ,@publicnewskunigal