ಪಟ್ಟಣದ ಖಾಸಗಿ ಶಾಲೆಗಳ ಬಸ್ ಗಳನ್ನು ಜಂಟಿಯಾಗಿ ತಪಾಸಣೆ ನಡೆಸಿದ ಪೊಲೀಸರು ಮತ್ತು ಆರ್‌,ಟಿ,ಒ ಅಧಿಕಾರಿಗಳು!

Spread the love

ಕುಣಿಗಲ್‌ ಪಟ್ಟಣದ ಬಿ,ಜಿ,ಎಸ್‌ ಶಾಲೆಯ ಬಾಲಕನೊರ್ವ ಇತ್ತಿಚೆಗೆ ಶಾಲಾ ಬಸ್‌ ನಿಂದ ಕೆಳಗೆ ಬಿದ್ದು ಹಿನ್ನೆಲೆ ಬಸ್‌ ಯುವಕನ ಮೇಲೆ ಹರಿದು ಬಾಲಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್ಚೆತ್ತ ಪೊಲೀಸರು ಹಾಗೂ ಸಾರಿಗೆ ಇಲಾಖೆಯ ಅಧಿಕಾರಿಗಳು ಪಟ್ಟಣದ ಖಾಸಗಿ ಶಾಲೆಗಳಿಗೆ ಮಂಗಳವಾರ ಬೇಟಿನೀಡಿ ವಾಹನಗಳ ಜಂಟಿತಪಾಸಣೆ ನಡೆಸುವ ಮೂಲಕ ಶಾಲೆಯ ಆಡಳಿತ ಮಂಡಳಿಯವರಿಗೆ ಬಿಸಿ ಮುಟ್ಟಿಸಿದ್ದಾರೆ

ಇನ್ನೂ ಶಾಲೆಯ ಆಡಳಿತ ಮಂಡಳಿಯವರಿಗೆ ಹಾಗೂ ಬಸ್‌ ಚಾಲಕರಿಗೆ ಶಾಲಾ ಮಕ್ಕಳು ತೇರಳುವ ಬಸ್‌ ಗಳಲ್ಲಿ ಕಡ್ಡಾಯಾವಾಗಿ ಮಕ್ಕಳ ನಿರ್ವಹಣೆಗಾಗಿ ಒರ್ವ ಸಿಬ್ಬಂದಿ ಅಥವಾ ಆಯಗಳನ್ನು ನೇಮಿಸುವಂತೆ ಬಸ್‌ ಚಾಲನೆಯ ಸಂದರ್ಭದಲ್ಲಿ ಮೊಬೈಲ್‌ ಪೋನ್‌ ಬಳಸದಂತೆ ಹಾಗೂ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಬಸ್‌ ಚಾಲನೆ ಮಾಡುವಂತೆ ಚಾಲಕರಿಗೆ ಸೂಚಿಸಿದ್ದಾರೆ ಸುರಕ್ಷತಾ ಕ್ರಮಗಳನ್ನು ಅನುಸರಿಸದಿದ್ದಲ್ಲಿ ಮುಂದೆ ಇಂತಹ ಪ್ರಕರಣಗಳು ಮರುಕಳಿಸಿದರೆ ಶಾಲೆಯ ಆಡಳಿತ ಮಂಡಳಿಯವರೆ ಇದಕ್ಕೆ ನೇರ ಹೊಣೆಯಾಗಬೇಕಾಗುತ್ತದೆ ಎಂದು ಖಾಸಗಿ ಶಾಲೆಯ ಆಡಳಿತ ಮಂಡಳಿಯವರಿಗೆ ಹಾಗೂ ಬಸ್‌ ಚಾಲಕರಿಗೆ ಎಚ್ಚರಿಕೆ ನಿಡಿದ್ದಾರೆ,

ಶಿಕ್ಷಣ ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಿದೆ ಜೋತೆಗೆ ಪೊಷಕರು ಕೂಡ ತಮ್ಮ ಮಕ್ಕಳು ಸಂಚರಿಸುವ ಶಾಲಾ ವಾಹನಗಳ ಚಾಲಕರು ಮತ್ತು ಸಿಬ್ಬಂದಿಗಳ ನಿರ್ವಹಣೆ ಬಗ್ಗೆ ಶಾಲೆಯ ಆಡಳಿತ ಮಂಡಳಿಯವರಿಂದ ಮಾಹಿತಿ ಪಡೆದು ಕೊಳ್ಳಬೇಕು ಶಾಲಾ ವಾಹನಗಳಲ್ಲಿ ಎನಾದರು ಸಮಸ್ಯೆ ಕಂಡು ಬಂದಲ್ಲಿ ಶಾಲೆಯ ಆಡಳಿತ ಮಂಡಳಿ,ಶಿಕ್ಷಣ ಇಲಾಖೆ,ಅಥವಾ ಸ್ಥಳಿಯ ಪೊಲೀಸರ ಅಥವಾ ಆರ್‌,ಟಿ,ಒ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ತುಮಕೂರು ಪ್ರಾದೇಶಿಕ ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿ ಸದೃಲ್ಲಾ ಶರಿಫ್‌ ತಿಳಿಸಿದರು ಈ ವೇಳೆ ಪಟ್ಟಣದ ಪೊಲೀಸ್‌ ಠಾಣೆಯ ಅಧಿಕಾರಿಗಳು ವಾಹನ ತಪಾಸಣೆ ಸಂದರ್ಭದಲ್ಲಿ ಹಾಜರಿದ್ದರು,@publicnewskunigal