ಕುಣಿಗಲ್ ತಾಲ್ಲೂಕಿನ ತಾವರೆಕೆರೆ ಗ್ರಾಮದಲ್ಲಿ ಗುರುವಾರ ಶಾಸಕರ ನಡೆ ಹಳ್ಳಿಯ ಕಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಡಾ,ರಂಗನಾಥ್ ಸರ್ಕಾರದ ಯೋಜನೆಗಳನ್ನು ಬಡಜನರ ಮನೆಯ ಬಾಗಿಲಿಗೆ ತಲುಪಿಸುವ ಜವಾಬ್ದಾರಿಯುತ ಕೆಲಸವನ್ನು ಆಯಾ ಇಲಾಖೆಯ ಅಧಿಕಾರಿಗಳು ಮಾಡಬೇಕಿದೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಿ ಅಧಿಕಾರಿಗಳು ಮನೆ ಮೆನೆಗೆ ತೇರಳಿ ನರೇಗಾ ಯೊಜನೆಯ ಬಗ್ಗೆ ಪ್ರಚಾರ ಪಡಿಸಿ ಜೋತೆಗೆ ಪ್ರತಿಯೊಬ್ಬರಿಗೂ ಇ ಖಾತಾ ಮಾಡುವಂತೆ ಸ್ಥಳದಲ್ಲಿ ಗ್ರಾಮ ಪಂಚಾಯ್ತಿ ಪಿಡಿಒ ಗೆ ಸೂಚಿಸಿದರು,ಗ್ರಾಮ ಪಂಚಾಯ್ತಿಯ ಬಿಲ್ ಕಲೆಕ್ಟರ್ ರಾಜೇಶ್ ವಿರುದ್ದ ಸಾರ್ವಜನಿಕರ ದೂರು ಹಿನ್ನೆಲೆ ಹಾಗೂ ಸರಿಯಾಗಿ ಮಾಹಿತಿ ನೀಡಲು ತಡಬಡಿಸಿದ ಕಾರಣ ಶಾಸಕರು ತರಾಟೆಗೆ ತೆಗೆದುಕೊಂಡರು ಕಂದಾಯ ವಸೂಲಿಯಲ್ಲಿ ಗ್ರಾಮ ಪಂಚಾಯಿತಿ ಹಿಂದೆ ಉಳಿದಿದೆ ಗ್ರಾಮ ಪಂಚಾಯ್ತಿಯಲ್ಲಿ ಕುಳಿತು ರಾಜಕೀಯಾ ಮಾಡೊದಲ್ಲ ಸಾರ್ವಜನಿಕರ ಕೆಲಸ ಮಾಡಿ ಗ್ರಾಮ ಪಂಚಾಯ್ತಿಗೆ ಬರುವ ಸಾರ್ವಜನಿಕರರೊಂದಿಗೆ ಸೌಜನ್ಯದಿಂದ ವರ್ತಿಸಿ ಎಂದರು ಶೋಕಿಗೆ ಪಂಚಾಯ್ತಿಗೆ ಬಂದು ಹೊಗೊದಲ್ಲ ನಿಮಗೆ ಸಂಬಳ ತೆಗೆದುಕೊಳ್ಳುವುದು ಗೊತ್ತಿದೆ ಆದರೆ ಜನಸಾಮನ್ಯರ ಕೆಲಸ ಮಾಡೊದಕ್ಕೆ ನಿಮಗೆ ಸಮಸ್ಯೆ ಏನು ಎಂದು ಗ್ರಾಮ ಪಂಚಾಯಿತಿಯ ಬಿಲ್ ಕಲೆಕ್ಟರ್ ರಾಜೇಶ್ ಹಾಗೂ ಕಂಪ್ಯೂಟರ್ ಆಪರೇಟರ್ ಹೇಮರಾಜುಗೆ ತರಾಟೆಗೆ ತೆಗೆದುಕೊಂಡರು ಶಾಸಕರುಶಾಸಕರ ಮುಂದೆ ಸಮಸ್ಯೆಗಳ ಸುರಿಮಳೆ
ಗ್ರಾಮಸ್ಥರು ಮಾತನಾಡಿ ತಾವರೆಕೆರೆ ಗ್ರಾಮದಲ್ಲಿ ನರೇಗಾ ಯೋಜನೆಯಲ್ಲಿ ವೈಯಕ್ತಿಕ ಕಾಮಗಾರಿ ಮಾಡಿರುವ ಸುಮಾರು 63 ಮಂದಿ ರೈತರಿಗೆ ಇದುವರೆಗೆ ಸಾಮಗ್ರಿಯ ವೆಚ್ಚ (ಮೆಟಿರಿಯಲ್ ಬಿಲ್) ಬಂದಿಲ್ಲ ಈ ಹಿಂದೆ ಇದ್ದ ಪಿಡಿಒ ಶಶಿರೇಖಾ ರವರು ನರೇಗಾ ಯೋಜನೆಯಡಿಯಲ್ಲಿ ಯಾವುದೆ ಪ್ರಗತಿ ಸಾಧಿಸಿಲ್ಲ ಗ್ರಾಮ ಪಂಚಾಯಿತಿಗೆ ಇದುವರೆಗೆ ನರೇಗಾ ಇಂಜಿನಿಯರ್ ನೇಮಿಸಿಲ್ಲ ಇದರಿಂದ ಕೆಲಸ ಕಾರ್ಯಗಳು ವಿಳಂಬವಾಗುತಿವೆ ಎಂದರು ಇದಲ್ಲದೆ ಕಂಪ್ಯೂಟರ್ ಆಪರೇಟರ್ ಹೇಮಾರಾಜು ಸರಿಯಾಗಿ ಸ್ಪಂದಿಸುತ್ತಿಲ್ಲ ಮೂರುಬಾರಿ ಅರ್ಜಿಕೊಟ್ಟರು ಸಹ ದನದಕೋಟ್ಟಿಗೆಯ ಬಿಲ್ ನಿಡಿಲ್ಲ ಎಂದು ಹೋಸದೊಡ್ಡಿ ಗ್ರಾಮದ ರೈತ ಹನುಮಂತಯ್ಯ ಶಾಸಕರಿಗೆ ತಿಳಿಸಿದರು ಹಾಗೂ ಮೇದರದೊಡ್ಡಿ ಗ್ರಾಮದ ಗಿರಿಯಮ್ಮ ಮಾತನಾಡಿ ಹಣ ಪಡೆದು ನನಗೆ ದನದ ಕೋಟ್ಟಿಗೆ ಬಿಲ್ ಮಾಡಿಲ್ಲ ಎಂದರು ಕೂಡಲೆ ಶಾಸಕರು ಗ್ರಾಮ ಪಂಚಾಯಿತಿಯ ಕಂಪ್ಯೂಟರ್ ಆಪರೇಟರ್ ಹೇಮರಾಜುಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿ ಕ್ರಮ ಕೈಗೊಳ್ಳುವಂತೆ ಕಾರ್ಯನಿರ್ವಹಣ ಅಧಿಕಾರಿ ಜೊಸೇಫ್ ಗೆ ಸೂಚಿಸಿದರು
ಗ್ರಾಮದಲ್ಲಿ ಆಶ್ರಯ ಯೋಜನೆಗೆ ಸರ್ವೆ ನಂ 56 ರಲ್ಲಿ ಒಂದು ಎಕರೆ ಜಾಗ ಗುರುತಿಸಲಾಗಿದೆ ಆದರೆ 50 ರಿಂದ 60 ಮಂದಿಗೆ ಈ ಹಿಂದೆ ಆಶ್ರಯ ಯೋಜನೆಯಡಿ ವೈ,ಕೆ ರಾಮಯ್ಯನವರು ಹಕ್ಕು ಪತ್ರ ವಿತರಿಸಿದರು ಆದರೆ ಇದುವರೆಗೆ ಯಾವುದೆ ದಾಖಲೆಯಾಗಿಲ್ಲ ಎಂದರು ತಹಶೀಲ್ದಾರ್ ವಿಶ್ವನಾಥ್ ರವರಿಗೆ ಕೂಡಲೆ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು ವಾರದಲ್ಲಿ ಎರಡು ಬಾರಿ ಗ್ರಾಮಕ್ಕೆ ಗ್ರಾಮ ಲೆಕ್ಕಾಧಿಕಾರಿಗಳು ಬರುವಂತೆ ತಿಳಿಸಲು ಶಾಸಕರಿಗೆ ಗ್ರಾಮಸ್ಥರು ಮನವಿ ಮಾಡಿದರು ಕೂಡಲೆ ಶಾಸಕರು ಅಧಿಕಾರಿಗಳಿಗೆ ವಾರದಲ್ಲಿ ಎರಡು ಅಥವಾ ಮೂರುದಿನ ಸಾರ್ವಜನಿಕರಿಗೆ ಬೇಟಿ ಮಾಡಿ ಸಮಸ್ಯೆ ಆಲಿಸುವಂತೆ ತಿಳಿಸಿದರು ಬಳಿಕ ಮಾತನಾಡಿದ ಶಾಸಕರು 65 ಕೋಟಿ ವೆಚ್ಚದಲ್ಲಿ ಇನ್ಪೋಸಿಸ್ ಸಹಯೊಗದೊಂದಿಗೆ ತಾಲ್ಲೂಕಿನಲ್ಲಿ ೧೦೦ ಹಾಸಿಗೆ ಸಾಮರ್ಥ್ಯದ ತಾಯಿ ಮಕ್ಕಳ ಆಸ್ಪತ್ರೆ ನಿರ್ಮಾಣಕ್ಕೆ ಸರ್ಕಾರದಿಂದ ಅನುಮೊದನೆ ಸಿಕ್ಕಿರುವುದಾಗಿ ತಿಳಿಸಿದರುಕಾರ್ಯಕ್ರಮದಲ್ಲಿ ತಹಶೀಲ್ದಾರ್ ವಿಶ್ವನಾಥ್,ತಾಲ್,ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣ ಅಧಿಕಾರಿ ಜೊಸೇಫ್,ತಾಲ್ಲೂಕು ಆಡಳಿತ ವೈದ್ಯಾಧಿಕಾರಿ ಡಾ,ಮರಿಯಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷ ರುದ್ರೆಗೌಡ ಉಪಾಧ್ಯಕ್ಷೆ ಗೌರಮ್ಮ ಆರ್, ಬ್ಯಾಡರಹಳ್ಳಿ ಗ್ರಾಮದ ಸದಸ್ಯ ನಾಗರಾಜು, ಗ್ರಾಮ ಪಂಚಾಯಿತಿಯ ಪಿಡಿಒ ಕೃಷ್ಣಯ್ಯ, ಆರ್,ಐ ಹರಿಶ್ ಕುಮಾರ್, ಗ್ರಾಮ ಲೆಕ್ಕಾಧಿಕಾರಿ ವೆಂಕಟೇಶ್,ಕಂದಾಯ ಇಲಾಖೆಯ ಹಲವು ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಸ್ಥಳಿಯ ಮುಖಂಡರು ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು,@publicnewskunigal