ಗ್ರಾಮದಲ್ಲಿ ರಾಜಕೀಯ ಪ್ರತಿಷ್ಟೆ ವಿರೋಧದನಡುವೆ ರಸ್ತೆ ಬದಿಯಲ್ಲಿರುವ ಮರಕ್ಕೆ ಕೊಡಲಿ ಹಾಕಲು ಸಜ್ಜಾದ ಅರಣ್ಯ ಇಲಾಖೆ!

Spread the love

ಕುಣಿಗಲ್‌ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಹಿತ್ತಲಪುರ ಗ್ರಾಮದಲ್ಲಿ ರಾಜಕೀಯ ಒಣ ಪ್ರತಿಷ್ಟೆಗಾಗಿ ಹಲವು ವರ್ಷಗಳಿಂದ ಹಕ್ಕಿ ಪಕ್ಷಿಗಳಿಗೆ ಆದರವಾಗಿದ್ದ ಹಾಗೂ ಹಲವರಿಗೆ ನೆರಳಾಗಿದ್ದ ರಸ್ತೆಯ ಪಕ್ಕದಲ್ಲಿರುವ ಹತ್ತಿಯ ಮರವನ್ನು ಕಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಮುಂದಾಗಿರುವುದು ಗ್ರಾಮದ ಪರಿಸರ ಪ್ರೇಮಿಗಳ ಕೆಂಗಣ್ಣಿಗೆ ಗುರಿಯಾಗಿದೆ ಮರದ ನೆರಳಿನಲ್ಲಿ ಗ್ರಾಮದ ಕೆಲವು ಮಂದಿ ಕುಳಿತು ಕಾಲ ಕಳೆಯುತ್ತಾರೆ ಎಂಬ ಒಂದೆ  ಕಾರಣಕ್ಕಾಗಿ ಊರಿನ ಕೆಲ ರಾಜಕೀಯ ವ್ಯಕ್ತಿಗಳು ತಮ್ಮ ಪ್ರಭಾವ ಬಳಸಿ ಯಾರಿಗೂ ತೊಂದರೆಯಾಗದ ರೀತಿಯಲ್ಲಿ ರಸ್ತೆ ಬದಿಯಲ್ಲಿ ಇರುವ ಮರವನ್ನು ತೇರವು ಮಾಡುವಂತೆ ಲೋಕೊಪಯೊಗಿ ಇಲಾಖೆಯ ಅಧಿಕಾರಿಗಳಿಗೆ ಗ್ರಾಮದ ಕೆಲ ರಾಜಕೀಯ ಮುಖಂಡರು ಅರ್ಜಿ ಸಲ್ಲಿಸಿದ್ದಾರೆ ಬಳಿಕ ಅರ್ಜಿಯನ್ನು ಲೋಕೊಪಯೊಗಿ ಇಲಾಖೆಯ ಅಧಿಕಾರಿಗಳು ಪರಿಶಿಲಿಸಿ ಕ್ರಮ ವಹಿಸುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕಳುಹಿಸಿದ್ದಾರೆ

ಈ ಹಿಂದೆ ಮರದ ಕೆಳಗೆ ಹಾಕಲಾಗಿದ್ದ ಕಲ್ಲಿನ ಆಸನಗಳು

ವಿರೋಧದ ನಡುವೆಯೂ ಇಗ ಅರಣ್ಯಾಧಿಕಾರಿಗಳು ಮರ ತೆರವಿಗೆ ಮುಂದಾಗಿದ್ದಾರೆ ಆದರೆ ರಸ್ತೆಗೆ ಯಾವುದೆ‌ ಸಮಸ್ಯೆಯಾಗದ ಅತ್ತಿಮರವು ಕೆರೆಯ ಪಕ್ಕದಲ್ಲಿರುವ ಕಾರಣ ಗ್ರಾಮದ ಹಿರಿಯರು ಕುಳಿತು ವಿಶ್ರಾಂತಿ ಪಡೆಯಲೆಂದು ಈ ಹಿಂದೆ ಗ್ರಾಮದ ಯುವಕರು ಕುಳಿತುಕೋಳ್ಳಲು ಆಸನದ ವ್ಯವಸ್ಥೆ ಮಾಡಿದ್ದರು ಆದರೆ ಪಕ್ಕದಲ್ಲಿರುವ ರಸ್ತೆ ಅಭಿವೃದ್ದಿ ಸಂಬಂಧ ಇತ್ತಿಚೆಗೆ ಆಸನಗಳನ್ನು ಎತ್ತಿ ಇಡಲಾಗಿದೆ ಈ ನಡುವೆ ಅರಣ್ಯ ಇಲಾಖೆಯ ಅಧಿಕಾರಿಗಳು ಗ್ರಾಮದ ಕೆಲವರ ವಿರೋಧದ ನಡುವೆಯೂ ಮರವನ್ನು ತೇರವು ಮಾಡುವ ಸಂಬಂಧ ಟೆಂಡರ್‌ ಕರೆಯಲಾಗಿದ್ದು ಇದಕ್ಕೆ ಗಾಮಸ್ಥರು ವಿರೋಧ ವ್ಯಕ್ತ ಪಡಿಸಿದ್ದು ಮರ ಕಡಿಯದಂತೆ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮನವಿ ಮಾಡಿರುವ ಗ್ರಾಮಸ್ಥರು ರಸ್ತೆ ಅಭಿವೃದ್ದಿಯ ನೆಪದಿಂದ ರಸ್ತೆಗೆ ಯಾವುದೆ ಸಮಸ್ಯೆಯಾಗದ ಮರವನ್ನು ರಾಜಕೀಯ ದುರುದ್ದೇಶದಿಂದ ಕಡಿಯಲು ಮುಂದಾಗಿದ್ದಾರೆ ಯಾವುದೆ ಕಾರಣಕ್ಕೂ ಗ್ರಾಮದಲ್ಲಿ ನೇರಳಗಿರುವ ಮರವನ್ನು ಕಡಿಯಬಾರದು ಎಂದು ಗ್ರಾಮದ ರಂಗರಾಜು,ತಿರುಮಲಯ್ಯ,ಗವಿರಾಜ್‌,ನಿಂಗಮ್ಮ,ಪ್ರಸನ್ನಕುಮಾರ್‌,ಗಂಗರಾಜು,ಕೀರ್ತಿ,ಸತ್ಯವತಿ ಒತ್ತಾಯಿಸಿದ್ದಾರೆ@publicnewskunigal