ಕಾವೇರಿ ಹೋರಾಟ ಬೆಂಬಲಿಸಿ ಸೆಪ್ಟೆಂಬರ್ 29ರಂದು ಕುಣಿಗಲ್ ಬಂದ್ ಗೆ ಕರೆ ನೀಡಿದ ಸಂಘಟನೆಗಳು!

Spread the love

ಕುಣಿಗಲ್;- ಕಾವೇರಿ ಹೋರಾಟ ಬೆಂಬಲಿಸಿ ಸೆಪ್ಟೆಂಬರ್ 29ರಂದು ಕುಣಿಗಲ್ ಸಂಪೂರ್ಣ ಬಂದ್ ಮಾಡಲಾಗುವುದು ಎಂದು ತಾಲೂಕು ಕನ್ನಡಪರ ಸಂಘಟನೆಗಳ ಒಕ್ಕೂಟವು ತೀರ್ಮಾನ ಕೈಗೊಂಡಿದೆ ಎಂದು ಒಕ್ಕೂಟದ ಅಧ್ಯಕ್ಷ ಮಾಜಿ ಪುರಸಭಾ ಅಧ್ಯಕ್ಷ ರಂಗಸ್ವಾಮಿ ತಿಳಿಸಿದ್ದಾರೆ,

ಕುಣಿಗಲ್ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಸಂಘಟನೆಯ ಮುಖಂಡರು ತಾಲೂಕಿನ ಎಲ್ಲಾ ಕನ್ನಡಪರ ಸಂಘಟನೆಗಳು ವರ್ತಕರು ಸಂಘ. ದಲಿತ ಸಂಘಟನೆಗಳು ಕಾರ್ಮಿಕ ಸಂಘಗಳು ಟೈಲರ್ ಸಂಘ ಚಲನಚಿತ್ರ ಅಭಿಮಾನಿ ಸಂಘಗಳು ಬಜರಂಗದಳ ಕರ್ನಾಟಕ ರಕ್ಷಣಾ ವೇದಿಕೆ ಕನ್ನಡ ಸೇನೆ .ಶಿವರಾಜ್ ಕುಮಾರ್ ಅಭಿಮಾನಿಗಳ ಬಳಗ. ಪುನೀತ್ ರಾಜಕುಮಾರ್. ಕಸಪ ಸೇರಿದಂತೆ ಎಲ್ಲಾ ಕನ್ನಡಪರ ಒಕ್ಕೂಟಗಳು ತೀರ್ಮಾನದಂತೆ ರಾಜ್ಯದಲ್ಲಿ ನೆಲ ಜಲ ಭಾಷೆ ಯಾವುದೇ ಧಕ್ಕೆ ಬಂದರೆ ರೈತರ ಪರವಾಗಿ ನಿಲ್ಲುವ ಕನ್ನಡಪರ ಸಂಘಟನೆಗಳು ಬರುವ 29ರ ಶುಕ್ರವಾರ ನಡೆಯುವ ಕಾವೇರಿ ನೀರಿನ ಹೋರಾಟಕ್ಕೆ

ರಾಜ್ಯಾದ್ಯಂತ ಕನ್ನಡಪರ ಸಂಘಟನೆಗಳು ಬಂದ್ ಕರೆ ನೀಡಿದ್ದು ತಾಲೂಕಿನ ಎಲ್ಲಾ ಪರ ಕನ್ನಡ ಸಂಘಟನೆಗಳು ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಾ ರಾಜ್ಯದಲ್ಲಿ ಮಳೆ ಇಲ್ಲದೆ ಬರಿದಾಗಿತ್ತು ರೈತರ ಸಂಕಷ್ಟ ಅರಿತು ಎಲ್ಲಾ ರಾಜಕೀಯ ಪಕ್ಷಗಳು ಸಂಘಟನೆಗಳು ಪಕ್ಷಾತೀತವಾಗಿ ಈ ಹೋರಾಟಕ್ಕೆ ಬೆಂಬಲಿಸಬೇಕು ಹೋಟೆಲ್ ಗಳು ವರ್ತಕರು ವಿದ್ಯಾ ಸಂಸ್ಥೆಗಳು ಸೇರಿದಂತೆ ಎಲ್ಲರೂ ಈ ಬಂದ್ ಬೆಂಬಲ ವ್ಯಕ್ತಪಡಿಸಿದ್ದು ಸಾರ್ವಜನಿಕರು ಸಹಕರಿಸುವ ಮೂಲಕ ಬಂದ್ ಯಶಸ್ವಿ ಮಾಡಿ ಕಾವೇರಿ ನೀರನ್ನು ತಮಿಳುನಾಡಿಗೆ ಬಿಡಬಾರದೆಂದು ತಹಸಿಲ್ದಾರ್ರಿಗೆ ಮನವಿ ಸಲ್ಲಿಸಲಾಗುವುದು ಹಾಲು ಆಸ್ಪತ್ರೆ ಸೇರಿದಂತೆ ಹಲವು ಅಗತ್ಯ ಸೇವೆಗಳು ವಿನಾಯಿತಿ ಇದ್ದು ಬಂದ್ ಯಶಸ್ವಿಗೊಳಿಸಿ ಕೊಡಬೇಕೆಂದು ಮನವಿ ಮಾಡಿದರೋ ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ಸಂತೋಷ್. ಕರವೇ ಅಧ್ಯಕ್ಷ ಮಂಜುನಾಥ್. ಕನ್ನಡ ಸೇನೆಯ ಶ್ರೀನಿವಾಸ್. ಕಾರ್ಮಿಕ ಘಟಕದ ಅಧ್ಯಕ್ಷ ಕೃಷ್ಣರಾಜ. ಕಶಪ ಅಧ್ಯಕ್ಷ ರಮೇಶ್ .ಅಂಬರೀಶ್ ಅಭಿಮಾನಿಗಳ ಸಂಘದ ಅಧ್ಯಕ್ಷ ನಾಗಣ್ಣ. ಪುನೀತ್ ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಕೋಟಿ ಮಹೇಶ್. ಶಿವರಾಜ್ ಕುಮಾರ್ ಸಂಘದ ಅಧ್ಯಕ್ಷ ಶಿವಣ್ಣ. ಭಜರಂಗದಳದ ಅಧ್ಯಕ್ಷ ಗಿರೀಶ್. ಕಲಾ ಸ್ನೇಹ ಮಂಡಳಿಯ ಅಧ್ಯಕ್ಷ ದಿನೇಶ್ ಕುಮಾರ್ .ಸೇರಿದಂತೆ ಅನೇಕ ಸಂಘಟನೆಗಳು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಿದ್ದರು@publicnewskunigal