ದಲಿತರ ಕುಂದು ಕೊರತೆಗಳಿಗೆ ಸ್ಪಂದಿಸಲು ಪೊಲೀಸ್‌ ಇಲಾಖೆ ಸದಾ ಸಿದ್ದ ಸಿಪಿಐ ನವಿನ್‌ಗೌಡ!

Spread the love

ದಲಿತರ ಕುಂದು ಕೊರತೆಗಳಿಗೆ ಸ್ಪಂದಿಸಲು ಪೊಲೀಸ್‌ ಇಲಾಖೆ ಸದಾ ಸಿದ್ದ ಸಿ.ಪಿ.ಐ ನವಿನ್‌ಗೌಡ!

ಕುಣಿಗಲ್‌ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಶುಕ್ರವಾರ ಸಿಪಿಐ ನವಿನ್ ಗೌಡ ಅಧ್ಯಕ್ಷತೆಯಲ್ಲಿ ದಲಿತರ ಕುಂದು ಕೊರತೆಯ ಸಭೆಯನ್ನು ಕರೆಯಲಾಗಿತ್ತು ಕಾರ್ಯಕ್ರಮದಲ್ಲಿ ಮಾತನಾಡಿದ ಸಿಪಿಐ ಅವರು ಕುಣಿಗಲ್‌ ಪೊಲೀಸ್‌ ಠಾಣೆಯ ವ್ಯಾಪ್ತಿಗೆ 270 ಹಳ್ಳಿಗಳು ಒಳಪಡಲಿದ್ದು ಸಿಬ್ಬಂದಿ ಕೊರತೆಯ ನಡುವೆಯು ದಲಿತರಿಗೆ ಎಲ್ಲಾರೀತಿಯಾ ಸಮಸ್ಯೆಗಳಿಗೆ ಠಾಣೆಯ ವತಿಯಿಂದ ಸ್ಪಂದಿಸಲಾಗುತ್ತಿದೆ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರ ಕಾಲೊನಿಗಳಿಗೆ ನಮ್ಮ ಬೀಟ್‌ ಸಿಬ್ಬಂದಿಗಳು ಬೇಟಿನೀಡಿ ಅಲ್ಲಿನ ಕುಂದು ಕೊರತೆ ಬಗ್ಗೆ ವಿಚಾರಿಸಲಾಗಿದೆ

ದಲಿತರ ಯಾವುದೆ ರೀತಿಯ ಸಮಸ್ಯೆಗಳಿದ್ದರು ತಕ್ಷಣ ಸ್ಪಂದಿಸುವಂತೆ ನಮ್ಮ ಸಿಬ್ಬಂದಿಗಳಿಗೆ ಸೂಚಿಸಲಾಗಿದೆ ಇದಲ್ಲದೆ ದಲಿತರಿಗೆ ಯಾವುದೆ ರೀತಿಯ ಸಮಸ್ಯೆಯಾದರೆ  ನೆರವಾಗಿ ನನ್ನನ್ನು ಸಹ ಸಂಪರ್ಕಿಸಬಹುದು ಎಂದು ತಿಳಿಸಿದರು, ಇದೆ ವೇಳೆ ಮುಖಂಡರು ಮಾತನಾಡಿ ತಾಲ್ಲೂಕಿನ ಹಲವು ಕಡಡೆಗಳಲ್ಲಿ ದಲಿತರ ಕಾಲೊನಿಗಳ ಬಳಿ ಅಕ್ರಮ ಮಧ್ಯಮಾರಾಟ ಹೆಚ್ಚುತ್ತಿದ್ದು ಕ್ರಮಕ್ಕೆ ಒತ್ತಾಯಿಸಿದರು ಹಾಗೂ ಗ್ರಾಮ ಪಂಚಾಯ್ತಿಗಳಲ್ಲಿ ನಡೆಯುವ ಗ್ರಾಮ ಸಭೆಗಳಲ್ಲಿ ಬಿಟ್‌ ಪೊಲೀಸರು ಭಾಗವಹಿಸಿ ಕಾನೂನು ಅರಿವು ಮೂಡಿಸುವ ಕೆಲಸ ಮಾಡುವಂತೆ ಮನವಿ ಮಾಡಿದರು ತಾಲ್ಲೂಕಿನಲ್ಲಿ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಎಲ್ಲಾ ದೇವಾಲಯಗಳಲ್ಲಿ ಎಲ್ಲರಿಗೂ ಮುಕ್ತ ಪ್ರವೇಶ ಕಲ್ಪಿಸುವ ನಿಟ್ಟಿನಲ್ಲಿ ನಾಮ ಫಲಕ ಅಳವಡಿಸದಿರುವ ಬಗ್ಗೆ ಪರಿಶೀಲಸಿ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದದರು ಸಭೆಯಲ್ಲಿ ಮುಖಂಡರಾದ ವರದರಾಜು,ದಲಿತ್‌ ನಾರಾಯಣ್‌,ರಾಮಚಂದ್ರಯ್ಯ,ಶಿವಶಂಕರ್‌,ನರಸಿಂಹಪ್ರಸಾದ್‌,ರಾಜು,ಅಟ್ಟಿ ರಂಗಯ್ಯ,ಇಪ್ಪಾಡಿ ಶಿವಕುಮಾರ್‌,ದಾಸನಪುರ ವರದರಾಜು ಸೇರಿದಂತೆ ಹಲವರು ಸಭೆಯಲ್ಲಿ ಭಾಗಿಯಾಗಿದ್ದರು,@publicnewskunigal