ಕಾಣೆಯಾಗಿದ್ದ ವ್ಯಕ್ತಿಯನ್ನು ಪತ್ತೆ ಹಚ್ಚಿದ ಪೊಲೀಸರ ಕಾರ್ಯಕ್ಕೆ ನಾಗರೀಕರ ಪ್ರಶಂಸೆ 2017 ರಲ್ಲಿ ಸೋಬಗಾನಹಳ್ಳಿ ಗ್ರಾಮದಿಂದ ಕೆಲಸಕೆಂದು ಹೊಗಿ ನಾಪತ್ತೆಯಾಗಿದ್ದ ವ್ಯಕ್ತಿಯನ್ನು ಪತ್ತೆ ಮಾಡುವಲ್ಲಿ ಪಟ್ಟಣದ ಪೊಲೀಸರು ಯಶಸ್ವಿಯಾಗಿದ್ದಾರೆ
ಕುಣಿಗಲ್ ತಾಲ್ಲೂಕಿನ ಸೋಬಗಾನಹಳ್ಳಿ ಗ್ರಾಮದಿಂದ ಆಂಧ್ರಪ್ರದೇಶದ ತಿರುಪತಿಗೆ ಕೆಲಸಕ್ಕೆಂದು ಗ್ರಾಮದ ಕೆಂಪನಾಯ್ಕ ಎಂಬುವವರ ಮಗ (35) ವರ್ಷದ ಬಾಲಕೃಷ್ಣ ತೆರಳಿದ್ದರು ಆದರೆ ಆರು ವರ್ಷ ಕಳೆದರು ಗ್ರಾಮಕ್ಕೆ ಮಗ ವಾಪಸ್ಸು ಬಾರದ ಹಿನ್ನೆಲೆ ಕಂಗಾಲಾದ ತಾಯಿ ಭಾಗ್ಯಮ್ಮ ಕುಣಿಗಲ್ ಪಟ್ಟಣದಲ್ಲಿ ಇತ್ನಿಚೇಗೆ ನಡೆದ ಜಿಲ್ಲಾಧಿಕಾರಿಗಳ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮಗ ಕಾಣೆಯಾಗಿರುವ ಬಗ್ಗೆ ದೂರು ಸಲ್ಲಿಸಿ ಮಗನ ಪತ್ತೆಗೆ ಮನವಿ ಮಾಡಿದ್ದರು ಕೂಡಲೆ ಪ್ರಕರಣ ದಾಖಲಿಸಿಕೊಂಡ ಕುಣಿಗಲ್ ಪೊಲೀಸರು ಡಿವೈಎಸ್ಪಿ ಲಕ್ಷ್ಮಿಕಾಂತ್ ಹಾಗು ಸಿಪಿಐ ನವೀನ್ ಗೌಡ, ಮಾರ್ಗದರ್ಶನದಲ್ಲಿ ಪೊಲೀಸ್ ಸಿಬ್ಬಂದಿಗಳಾದ ರವಿ ಮತ್ತು ನಟರಾಜು ಎಂಬುವವರು ಸೋಬಗಾನಹಳ್ಳಿ ಗ್ರಾಮದಿಂದ ನಾಪತ್ತೆಯಾಗಿದ್ದ ಬಾಲಕೃಷ್ಣನನ್ನು ತೆಲಂಗಾಣ ರಾಜ್ಯದ ಮೆಡಚಲ್ ಪಟ್ಟಣದಲ್ಲಿ ದಿನಾಂಕ 06/11/2023ರ ಸೋಮವಾರದಂದು ಪತ್ತೆಹಚ್ಚಿ ತಾಯಿ ಭಾಗ್ಯಮ್ಮ ವಶಕ್ಕೆ ಒಪ್ಪಿಸಿದ್ದಾರೆ ಇನ್ನು ಕುಣಿಗಲ್ ಪಟ್ಟಣದ ಪೊಲೀಸರ ಈ ಕಾರ್ಯಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳು ಅಭಿನಂದಿಸಿದ್ದಾರೆ ಆರು ವರ್ಷಗಳ ಬಳಿಕ ಮಗನನ್ನು ಪತ್ತೆಮಾಡಿ ತಾಯಿ ಮಡಿಲಿಗೆ ಸೇರಿಸಿರುವ ಪೊಲೀಸರ ಈ ಕಾರ್ಯಕ್ಕೆ ನಾಗರಿಕರು ಸಹ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ @publicnewskunigal