ವಿವಿಧ ಬೇಡಿಕೆಗಳನ್ನು ಹಿಡೆರಿಸುವಂತೆ ಒತ್ತಾಯಿಸಿ ಸವಿತಾ ಸಮಾಜದ ಮುಖಂಡರು ಪಟ್ಟಣದ ತಾಲ್ಲೂಕು ಕಚೇರಿಯ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು ಸವಿತಾ ಸಮಾಜದವರನ್ನು ಇತ್ತಿಚೆಗೆ ಜಾತಿನಿಂದನೆ ಮಾಡುತ್ತಿರುವುದು ಹೆಚ್ಚುತ್ತಿದ್ದು ಆದ್ದರಿಂದ ಕ್ಷೌರಿಕ ವೃತ್ತಿ ನಿಂದನೆ ಮಾಡುವವರ ವಿರುದ್ದ ದೌರ್ಜನ್ಯ ಕಾಯ್ದೆಯಡಿ ಜಾತಿನಿಂದನೆ ಪ್ರಕರಣ ದಾಖಲಿಸಲು ಸರ್ಕಾರ ನಿಯಮ ರೂಪಿಸಬೇಕು ಸರ್ಕಾರ ನಡೆಸುತ್ತಿರುವ ವಸತಿ ನಿಲಯಗಳ ವಿದ್ಯಾರ್ಥಿಗಳಿಗೆ ಕ್ಷೌರ ಮಾಡಲು ಸವಿತಾ ಸಮಾಜದವರನ್ನು ನೇಮಿಸಿಕೊಳ್ಳುವಂತೆ ಹಾಗೂ ಉಚಿತ ಆರೋಗ್ಯ ವಿಮೆ ನಿಡುವಂತೆ ಸವಿತಾ ಮಹರ್ಶಿ ಜಯಂತಿಯಂದು ಸವಿತಾ ರತ್ನ ಪ್ರಶಸ್ತಿ ವಿತರಿಸಬೇಕು
ರಾಜ್ಯದ್ಯಂತ ಪ್ರತಿ ಗ್ರಾಮದಲ್ಲು ಕ್ಷೌರಿಕ ಕುಟೀರ ಪ್ರಾರಂಭಿಸಲು ಸ್ಥಳ ಗುರುತಿಸಬೇಕು ಸ್ವಾತಂತ್ರ್ಯ ಬಂದು 75 ವರ್ಷಕಳೆದರು ಸಹ ಸವಿತಾ ಸಮುದಾಯಕ್ಕೆ ಸರಿಯಾದ ಮಿಸಲಾತಿ ಸಿಕ್ಕಿಲ್ಲ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮತು ರಾಜಕೀಯವಾಗಿ ಹಾಗೂ ಜನಸಂಖ್ಯೆಗೆ ಅನುಗುಣವಾಗಿ ಮಿಸಲಾತಿ ಕಲ್ಪಿಸಬೇಕು ಎಂದು ಒತ್ತಾಯಿಸಿ ಪಟ್ಟಣದ ತಾಲ್ಲೂಕು ಕಚೇರಿಯ ಮುಂಬಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು ಕೂಡಲೆ ಸರ್ಕಾರ ಮಧ್ಯ ಪ್ರವೇಶಿಸಿ ನಮ್ಮ ಎಂಟು ಬೇಡಿಕೆಗಳನ್ನು ಹಿಡೆರಿಸಬೆಕೆಂದು ಸವಿತ ಸಮಾಜದ ತಾಲ್ಲೂಕು ಅಧ್ಯಕ್ಷ ಶಶಿಕುಮಾರ್ ಆಗ್ರಹಿಸಿದರು ಈ ವೇಳೆ ತಾಲ್ಲೂಕು ಉಪಾಧ್ಯಕ್ಷ ಚೇತನ್,ಕಾರ್ಯಧರ್ಶಿ ಪ್ರವಿಣ್ ಕುಮಾರ್,ಟೌನ್ ಅಧ್ಯಕ್ಷ ಚನ್ನಕೆಶವ ಸೆರಿದಂತೆ ಪದಾಧಿಕಾರಿಗಳು ಹಾಗೂ ಸಮುದಾಯದ ಮುಂಡರು ಉಪಸ್ಥಿತರಿದ್ದರು@publicnewskunigal