ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕೊಲೆಗೈದ ಪತಿಗೆ ಜೀವಾವಧಿ ಶಿಕ್ಷೆ!

Spread the love

ಕ್ಷುಲ್ಲಕ ಕಾರಣಕ್ಕೆ ಪತ್ನಿಯ ಕೊಲೆ ಪತಿಗೆ ಜೀವಾವಧಿ ಶಿಕ್ಷೆ!

ಕುಣಿಗಲ್‌ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ರಾಜೇಂದ್ರಪುರ ಗ್ರಾಮದ ಹಿರುಳಿಗರಪಾಳ್ಯದಲ್ಲಿ ಹನುಮಂತಯ್ಯ ಎಂಬಾತ ಕ್ಷುಲ್ಲಕ ಕಾರಣಕ್ಕೆ ಪತ್ನಿಯೊಂದಿಗೆ ಗಲಾಟೆ ಮಾಡಿಕೊಂಡು 05/07/2021 ರಂದು ಪತ್ನಿ ಲಕ್ಷ್ಮಮ್ಮನನ್ನು ತಲೆಯನ್ನು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದ ಘಟನೆ ಸಂಬಂಧ ಹುಲಿಯೂರುದುರ್ಗ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಅಮೃತೂರು ವೃತ್ತನೀರಿಕ್ಷಕ ವಿ,ಎಮ್‌ ಗುರುಪ್ರಸಾದ್ ರವರು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಕರಣದ ತನಿಖೆ ನಡೆಸಿ ನ್ಯಾಯಲಯಕ್ಕೆ ದೋಷರೊಪ ಪಟ್ಟಿ ಸಲ್ಲಿಸಿದ್ದರು

ತುಮಕೂರು 6ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಲಯದಲ್ಲಿ ದೀರ್ಘವಾಗಿ ವಿಚಾರಣೆ ನಡೆಸಿದ ನ್ಯಾಯಧೀಶರಾದ ಎ,ನಾಗಿರೆಡ್ಡಿಯವರು ನವಂಬರ್‌ 9ರಂದು ಆರೋಪ ಸಾಬೀತು ಆದ ಹಿನ್ನೆಲೆಯಲ್ಲಿ ಆರೋಪಿ ಹನುಮಂತಯ್ಯನಿಗೆ ಐಪಿಸಿ ಸೆಕ್ಷನ್‌ 302 ಪ್ರಕಾರ ಕಠಿಣ ಸಜೆಯೊಂದಿಗೆ ಜೀವಾವಧಿ ಶಿಕ್ಷೆ ಮತ್ತು ಐದು ಸಾವಿರ ರೂಪಾಯಿ ದಂಡವಿಧಿಸಿ ದಂಡ ಕಟ್ಟಲು ಸಾಧ್ಯವಾಗದಿದ್ದಲ್ಲಿ ಇನ್ನೂ ಒಂದು ವರ್ಷ ಕಠಿಣ ಶಿಕ್ಷೆಯನ್ನು ವಿಧಿಸಿ ಆದೇಶಿಸಿದ್ದಾರೆ ಈ ಪ್ರಕರಣದಲ್ಲಿ ಸರ್ಕಾರಿ ಅಭಿಯೋಜಕರಾದ ಆರ್‌,ಟಿ ಅರುಣ ರವರು ವಾದ ಮಂಡಿಸಿದ್ದರು,@publicnewskunigal