ಇತ್ತಿಚೆಗೆ ಮುಖ್ಯಮಂತ್ರಿ ಪದಕ ಪಡೆದಿದ್ದ ಅರಣ್ಯ ರಕ್ಷಕನ ದುರಂತ ಸಾವು!

Spread the love

ಕುಣಿಗಲ್ ತಾಲ್ಲೂಕಿನ ಬಾಗೇನಹಳ್ಳಿ ಗ್ರಾಮದಲ್ಲಿ ಶನಿವಾರ ಬೆಳಗ್ಗೆ ಟ್ರಾಕ್ಟರ್ ಪಲ್ಟಿಯಾಗಿ ಅರಣ್ಯ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮೋಹನ್ ಕುಮಾರ್, ಎಂಬುವವರು ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ,

ಮೋಹನ್ ಕುಮಾರ್ ಕೆ,ಜಿ ರವರು ವನ್ಯಜೀವಿ ಸಂರಕ್ಷಣೆ ಹಾಗೂ ಅರಣ್ಯ ಇಲಾಖೆಯಲ್ಲಿ ಅರಣ್ಯ ರಕ್ಷಕನಾಗಿ ಗಣನೀಯ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಅವರನ್ನು 2020 ನೇ ಸಾಲಿನ ಮುಖ್ಯಮಂತ್ರಿ ಪದಕಕ್ಕೆ ಭಾಜನರಾಗಿದ್ದರು ಕರೋನಾ ಇದ್ದ ಕಾರಣ ಕಳೆದ ಎರಡು ತಿಂಗಳ ಹಿಂದಷ್ಟೇ ಇವರಿಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅರಣ್ಯ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದಕ್ಕಾಗಿ ಪದಕ ನೀಡಿ ಗೌರವಿಸಿದ್ದರು

ಶನಿವಾರ ರಜಾ ಇದ್ದ ಕಾರಣ ಬೆಳಗ್ಗೆ ತಮ್ಮ ಸ್ವಗ್ರಾಮ ಬಾಗೇನಹಳ್ಳಿಯಲ್ಲಿ ತಮ್ಮ ತೋಟದಲ್ಲಿ ಟ್ರಾಕ್ಟರ್ ಚಲಯಿಸುತ್ತಿದ್ದ ವೇಳೆ ಆಯತಪ್ಪಿ ಟ್ರಾಕ್ಟರ್ ಪಲ್ಟಿಯಾಗಿದೆ ಟ್ರಾಕ್ಟರ್ ಕೆಳಗೆ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಮೋಹನ್ ಕುಮಾರ್ ರವರನ್ನು ತಕ್ಷಣ ಸ್ಥಳಿಯರ ನೆರವಿನೊಂದಿಗೆ ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಸಾವನ್ನಪ್ಪಿರು ಘಟನೆ ನಡೆದಿದೆ ಮೃತರಿಗೆ ಎರಡು ವರ್ಷದ ಮಗಳು ಹಾಗೂ ಪತ್ನಿ ತಂದೆ ತಾಯಿ ಇದ್ದಾರೆ

ಮೋಹನ್ ಸಾವಿಗೆ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿವರ್ಗ ಹಾಗೂ ಸ್ನೇಹಿತರು ಕಂಬನಿ ಮಿಡಿದಿದ್ದಾರೆ ಶನಿವಾರ ಮಧ್ಯಾಹ್ನ ಬಾಗೇನಹಳ್ಳಿ ಗ್ರಾಮದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ ಈ ವೇಳೆ ತುಮಕೂರು ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ,ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್ ವಿ ಮಾಲಗತ್ತಿ, ವಲಯ ಅರಣ್ಯಧಿಕಾರಿ ಜಗದೀಶ್ ಪಿ,ಬನ್ನೇರುಘಟ್ಟ ವನ್ಯಜೀವಿ ವಿಭಾಗದ ಅರಣ್ಯಧಿಕಾರಿ ಮೊಹಮ್ಮದ್ ಮನ್ಸೂರ್,ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂಧಿವರ್ಗ ಭಾಗಿಯಾಗಿದ್ದರು,@publicnewskunigal