ಕೊಯ್ಲುಮಾಡಿ ಬಣವೆಗೆ ಹಾಕಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ರಾಗಿಮೆದೆ ಬೆಂಕಿ ಇಟ್ಟ ಕಿಡಿಗೇಡಿಗಳು!
ಕುಣಿಗಲ್ ತಾಲ್ಲೂಕಿನ ಹಂಗರಹಳ್ಳಿ ಗ್ರಾಮದಲ್ಲಿ ಸುಮಾರು ನಾಲ್ಕು ಎಕರೆ ಭೂಮಿಯಲ್ಲಿ ಬೆಳೆದಿದ್ದ ರಾಗಿ ಬೆಳೆ ಕೈಗೆ ಬಂದಿರುವುದು ಈಗ ಬಾಯಿಗೆ ಸಿಗದಂತಾಗಿದೆ ಗ್ರಾಮದ ರೈತ ವೆಂಕಟರಾಮು ಎಂಬುವವರಿಗೆ ಸೇರಿದ್ದ ರಾಗಿ ಬಣವೆಗೆ ಕಿಡಿಗೇಡಿಗಳು ಬೆಂಕಿ ಇಟ್ಟ ಪರಿಣಾಮ ಸಂಪೂರ್ಣವಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ರಾಗಿ ಬಣವೆ ಸಂಪೂರ್ಣವಾಗಿ ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ
ಭಾನುವಾರ ಮುಂಜಾನೆ ರಾಗಿ ಬಣವೆಗೆ ಬೆಂಕಿ ಬಿದ್ದಿರುವುದನ್ನು ಕಂಡ ಸ್ಥಳಿಯರು ರೈತ ವೆಂಕಟರಾಮು ರವರಿಗೆ ಮಾಹಿತಿ ನಿಡಿದ್ದಾರೆ ಸ್ಥಳಕ್ಕೆ ಬಂದು ನೊಡುವಷ್ಟರಲ್ಲಿ ಶೇಕಡ 60% ರಷ್ಟು ಸುಟ್ಟು ಕರಕಲಾಗಿದೆ ಬಳಿಕ ಅಗ್ನಿಶಾಮಕ ಸ್ಥಳಕ್ಕೆ ಬರುವ ವೇಳೆಗೆ ರಾಗಿ ಬಣವೆ ಸಂಪೂರ್ಣ ಸುಟ್ಟು ಕರಕಲಾಗಿದೆ ಘಟನೆ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಕೊಯ್ಲು ಮಾಡಿದ್ದ ರಾಗಿ ಬೇಳೆಯನ್ನು ಕಳೆದ ಮೂರು ದಿನಗಳ ಹಿಂದಷ್ಟೆ ಬಣವೆಗೆ ಹಾಕಲಾಗಿತ್ತು ಮಳೆ ಕೊರತೆಯಲ್ಲು ಕಷ್ಟಪಟ್ಟು ಹಗಲು ರಾತ್ರಿ ಎನ್ನದೆ ಹಳ್ಳ ಕೊಳ್ಳದಲ್ಲಿ ಇದ್ದ ನಿರನ್ನು ಬಳಸಿಕೊಂಡು ಉತ್ತಮ ಇಳುವರಿ ನಿರೀಕ್ಷೆಯಲ್ಲಿ ಇದ್ದ ರೈತನಿಗೆ ಅಂದುಕೊಂಡಂತೆ ಈ ಬಾರಿ ಉತ್ತಮ ರೀತಿಯಲ್ಲಿ ಪಸಲು ಕೈಗೆ ಸಿಕ್ಕಿತ್ತು ಸೈಕ್ಲೊನ್ ಕಾರಣದಿಂದ ಮಳೆ ಬರುವುದು ಎಂದು ತರಾತುರಿಯಲ್ಲಿ ಕೋಯ್ಲು ಮಾಡಿದ್ದ ರಾಗಿ ಫಸಲನ್ನು ಕಳೆದ ಮೂರು ದಿನಗಳ ಹಿಂದಷ್ಟೆ ಬಣವೆಗೆ ಹಾಕಲಗಿತ್ತು ಕೀಡಿಗೆಡಿಗಳ ಕೃತ್ಯಕ್ಕೆ ಇಗ ರಾಗಿ ಬಣವೆ ಸಂಪೂರ್ಣ ಸುಟ್ಟು ಕರಕಲಾಗಿದ್ದು ಮನೆಯಲ್ಲಿ ಇರುವ ಜಾನುವಾರುಗಳ ಮೇವಿಗೆ ಹಾಗೂ ತಿನ್ನುವ ಅನ್ನಕ್ಕೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತ ವೆಂಕಟರಾಮು ತಮ್ಮ ಅಳಲನ್ನು ತೋಡಿಕೊಂಡರು @publicnewskunigal