ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಉಜ್ಜನಿ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಮಧ್ಯಾನ್ನ ಕಲ್ಲು ತುಂಬಿಕೊಂಡು ಹೊಗುತ್ತಿದ್ದ ಟ್ರಾಕ್ಟರ್ ಚಾಲಕನ ನಿಯತ್ರಣ ತಪ್ಪಿ ಪಲ್ಟಿಯಾಗಿದ್ದು ಕೆಳಗೆ ಬಿದ್ದು ಗಾಯಗೊಂಡಿದ್ದ ಟ್ರಾಕ್ಟರ್ ಚಾಲಕನನ್ನು ಅದೆ ರಸ್ತೆಯಲ್ಲಿ ಹೊಗುತ್ತಿದ್ದ ಸಾರ್ವಜನಿಕರು ಗಮನಿಸಿ ಆಸ್ಪತ್ರೆಗೆ ದಾಖಲಿಸುವ ಸಲುವಾಗಿ 108 ಆಂಬುಲೆನ್ಸ್ ಸೇವೆಗೆ ಕರೆ ಮಾಡಿದ್ದಾರೆ ಅದರೆ ಆಂಬುಲೆನ್ಸ್ ಲಭ್ಯವಿಲ್ಲದಿರುವ ಬಗ್ಗೆ ಮಾಹಿತಿ ತಿಳಿಸಲಾಗಿದೆ ಬಳಿಕ ಸ್ಥಳಿಯರ ನೆರವಿನೊಂದಿಗೆ ಟ್ರಾಕ್ಟರ್ ನಿಂದ ಬಿದ್ದು ಗಾಯಗೊಂಡಿದ್ದ ಲಕ್ಮ್ಷಿಪುರ ಗ್ರಾಮದ ಮಂಜು ಎಂಬಾತನನ್ನು ಒಂದು ಗಂಟೆಯ ಬಳಿಕ ಆಟೊದಲ್ಲಿ ಸ್ಥಳಿಯ ಆಸ್ಪತ್ರೆಗೆ ಕರೆದೋಯ್ದು ಚಿಕಿತ್ಸೆ ಕೊಡಿಸಲಾಗಿದೆ
ಕುಣಿಗಲ್ ತಾಲ್ಲೂಕಿನಲ್ಲಿ ಒಟ್ಟು ನಾಲ್ಕು ಆಂಬುಲೆನ್ಸ್ ಗಳು ಕಾರ್ಯನಿರ್ವಹಿಸುತ್ತಿದ್ದು ಅದರಲ್ಲಿ ಹುಲಿಯೂರುದುರ್ಗ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನಿಡಲಾಗಿರುವ ಅಂಬುಲೆನ್ಸ್ ಕೆಟ್ಟು ನಿಂತು ಒಂದು ತಿಂಗಳು ಕಳೆದಿದೆ ಒಂದು ತಿಂಗಳಿನಿಂದ ಆಂಬುಲೆನ್ಸ್ ಗ್ಯಾರೆಜ್ ನಲ್ಲಿದೆ ಎಂದು ಸ್ವತಃ ವೈದ್ಯಾಧಿಕಾರಿಗಳೆ ಖಚಿತ ಪಡಿಸಿದ್ದಾರೆ ಸಕಾಲದಲ್ಲಿ ಅಂಬುಲೆನ್ಸ್ ಸೇವೆ ಸಿಗದೆ ಅಪಘಾತದಲ್ಲಿ ಗಾಯಗೊಂಡಿರುವ ಅಥಾವ ಆಸ್ಪತ್ರೆಗೆ ಬರುವ ರೋಗಿಗಳು ಸಾವನ್ನಪ್ಪುವ ಮುನ್ನಾ
ಸಂಬಂಧ ಪಟ್ಟ ಜನಪ್ರತಿನಿಧಿಗಳು ಹಾಗೂ ಅರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಇತ್ತ ಗಮನ ಹರಿಸಿ ಒಂದು ತಿಂಗಳಿನಿಂದ ಕೆಟ್ಟು ನಿಂತಿರುವ ಆಂಬುಲೆನ್ಸ್ ದುರಸ್ಥಿ ಮಾಡಿಸಿ ಸಾರ್ವಜನಿಕ ಬಳಕೆಗೆ ದೊರೆಯುವಂತೆ ಮಾಡಬೇಕೆಂದು ಸಾರ್ವಜನಿಕರ ಒತ್ತಾಯವಾಗಿದೆ, ಇನ್ನೂ ವೈದ್ಯ ಶಾಸಕರ ತವರು ಕ್ಷೇತ್ರದಲ್ಲಿ ಈಗಾದರೆ ಜನ ಸಾಮಾನ್ಯರ ಪಾಡೆನು..? ಇನ್ನಾದರೂ ತಾಲ್ಲೂಕಿನಲ್ಲಿ ಜಡ್ಡುಗಟ್ಟಿರುವ ಆರೋಗ್ಯ ಇಲಾಖೆಗೆ ಶಾಸಕರು ಚುರುಕು ಮುಟ್ಟಿಸುವರೆ ಕಾದು ನೋಡಬೇಕಿದೆ, @publicnewskunigal