ದೊಡ್ಡಮಾವತ್ತೂರು ಗ್ರಾಮದ ಬಳಿ ಭೀಕರ ರಸ್ತೆ ದುರಂತ ಸ್ಥಳದಲ್ಲಿ ಗರ್ಭಿಣಿ ಮಹಿಳೆ ಸಾವು ಒರ್ವನಿಗೆ ಗಂಭೀರ ಗಾಯ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ರಾಜ್ಯ ಹೆದ್ದಾರಿ 33ರ ದೊಡ್ಡಮಾವತ್ತೂರು ಗ್ರಾಮದ ಬಳಿ ಬುಧವಾರ 12-30 ರ ಸಮಯದಲ್ಲಿ ಬಸ್ ಹತ್ತಲು ರಸ್ತೆ ಬದಿಯಲ್ಲಿ ನಿಂತಿದ್ದ ಗರ್ಭಿಣಿ ಮಹಿಳೆಯ ಮೇಲೆ ಸಿಮೆಂಟ್ ಲಾರಿ ಹರಿದ ಪರಿಣಾಮ ದೊಡ್ಡಮಾವತ್ತೂರು ಗ್ರಾಮದ ವಿನುತ (20) ಸ್ಥಳದಲ್ಲಿ ಸಾವನ್ನಪ್ಪಿದ್ದು ರಸ್ತೆ ಬದಿಯಲ್ಲಿ ನಡೆದು ಹೋಗುತ್ತಿದ್ದ ದೊಡ್ಡಮಾವತ್ತೂರು ಗ್ರಾಮದ ಮೋಹನ್ ಕುಮಾರ್(32) ಎಂಬುವವರಿಗೆ ಗಂಭೀರ ಗಾಯಗಳಾಗಿದ್ದು ಚಿಕಿತ್ಸೆಗಾಗಿ ಕುಣಿಗಲ್ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ
ಘಟನೆ ವಿವರ;-ಆಂದ್ರಪ್ರದೇಶದ ಸಿಮೆಂಟ್ ತುಂಬಿದ್ದ ಲಾರಿ ರಾಮನಗರದ ಹರಳಪುರಕ್ಕೆ ತೆರಳಿ ವಾಪಸ್ ರಾಜ್ಯ ಹೆದ್ದಾರಿ 33ರಲ್ಲಿ ಹುಲಿಯೂರುದುರ್ಗದ ಕಡೆಯಿಂದ ಕುಣಿಗಲ್ ಕಡೆಗೆ ಹೊಗುತ್ತಿದ್ದ ವೇಳೆ ಸಿಮೆಂಟ್ ಲಾರಿ ಚಾಲಕನ ಅಜಾಗರುಕತೆಯ ಕಾರಣದಿಂದಾಗಿ ರಸ್ತೆಯ ಎಡ ಬದಿಯಿಂದ ಬಲಬದಿಗೆ ಬಂದು ಬಸ್ಸಿಗಾಗಿ ಕಾದು ಕುಳಿತಿದ್ದ ವಿನುತಳಿಗೆ ಗುದ್ದಿದೆ ನಂತರ ದೊಡ್ಡಮಾವತ್ತೂರು ಗ್ರಾಮದ ರಾಮಣ್ಣ ರವರ ಮನೆಯ ಕಾಂಪೌಂಡ್ ಹೊಡೆದುಕೊಂಡು ಬಳಿಕ ರಸ್ತೆಬದಿಯಲ್ಲಿ ನಡೆದು ಹೊಗುತ್ತಿದ್ದ ವ್ಯಕ್ತಿಗುದ್ದಿದೆ
ಲಾರಿ ಗುದ್ದಿದ ರಬಸಕ್ಕೆ ಕಾಂಪೌಂಡ್ ಸಹಿತ ವಿನುತಳ ದೇಹ ಚಿದ್ರ ಚಿದ್ರ ವಾಗಿ ಸುಮಾರು ಮೂವತ್ತು ಮೀಟರ್ ವರೆಗೆ ಲಾರಿಯ ಕೆಳಭಾಗ ಸಿಲುಕಿ ದೇಹ ಸಂಪೂರ್ಣ ಮಾಂಸದ ಮುದ್ದೆಯಾಗಿತ್ತು ಅಫಘಾತ ಭೀಕರತೆ ನೊಡುಗರನ್ನು ಬೆಚ್ಚಿ ಬಿಳಿಸಿತ್ತು ಕಳೆದ ಒಂದು ವರ್ಷಗಳ ಹಿಂದೆ ಹುಲಿಯೂರುದುರ್ಗ ಪಟ್ಟಣದ ವಿನುತಳನ್ನು ದೊಡ್ಡಮಾವತ್ತೂರು ಗ್ರಾಮದ ನಂದೀಶ್ ಎಂಬುವವರಿಗೆ ಮಧುವೆ ಮಾಡಿಕೊಡಲಾಗಿತ್ತು ಬುಧವಾರ ಬೆಳಗ್ಗೆ ಅತ್ತೆ ಮನೆಯಿಂದ ತಾಯಿಯ ಮನೆಗೆ ತೆರಳುವ ವೇಳೆ ಬಸ್ಸಿಗಾಗಿ ಕಾದು ಕುಳಿತಿದ್ದ ವೇಳೆ ಅವಘಡ ಸಂಭವಿಸಿದೆ ಚಿದ್ರ ಚಿದ್ರ ವಾಗಿದ್ದ ವಿನುತಳ ಮೃತ ದೇಹವನ್ನು ಹುಲಿಯೂರುದುರ್ಗ ಪೊಲೀಸರು ಎತ್ತಿ ಚೀಲದಲ್ಲಿ ತುಂಬುವ ದೃಶ್ಯ ಮನಕಲಕುವಂತಿತ್ತು ಇನ್ನೂ ರಾಜ್ಯ ಹೆದ್ದಾರಿ 33 ರಲ್ಲಿ ಕೆಶೀಫ್ ನ ಅಧಿಕಾರಿಗಳು ರಸ್ತೆ ಬದಿಯಲ್ಲಿ ಸುರಕ್ಷತ ಫಲಕಗಳನ್ನು ಅಳವಡಿಸಿಲ್ಲಿ ಅಪಘಾತ ವಲಯಗಳನ್ನು ಗುರುತಿಸಿ ಅಪಘಾತ ತಡೆಗೆ ಯಾವುದೆ ಮುಂಜಾಗ್ರತ ಕ್ರಮ ಕೈಗೊಂಡಿಲ್ಲ
ದೊಡ್ಡಮಾವತ್ತೂರು ಗ್ರಾಮದ ಮಧ್ಯಭಾಗದಲ್ಲಿ ರಸ್ತೆ ಹಾದುಹೊಗಿದ್ದು ಗ್ರಾಮಕ್ಕೆ ಹೊಂದಿಕೊಂಡತೆ ಇರುವ ರಸ್ತೆಯ ಎರಡು ಬದಿಯಲ್ಲಿ ಬ್ಯಾರಿಕೆಟ್ ಅಥವಾ ತಡೆಗೊಡೆ ನಿರ್ಮಿಸಿಲ್ಲ ಪ್ರತಿನಿತ್ಯ ಸುತ್ತಮುತ್ತಲ ಗ್ರಾಮಗಳ ನೂರಾರು ಮಂದಿ ಶಾಲಾ ಕಾಲೇಜಿಗೆ ತೆರಳಲು ವಿದ್ಯಾರ್ಥಿಗಳು ಬಸ್ ಹತ್ತಲು ಪ್ರತಿನಿತ್ಯ ಇದೆ ಸ್ಥಳದಲ್ಲಿ ನಿಲ್ಲುತ್ತಾರೆ ಆದರೆ ಕೆಶೀಫ್ ಅಧಿಕಾರಿಗಳ ನಿರ್ಲಕ್ಷ್ಯ ಕಾರಣದಿಂದ ದೊಡ್ಡಮಾವತೂರು ಗ್ರಾಮದ ಬಳಿ ಪದೆ ಪದೆ ಅಪಘಾತಗಳು ಸಂಭವಿಸುತಿದ್ದು ಇಗಾಗಲೆ ನಾಲ್ಕೈದು ಮಂದಿ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ
ಹಲವುಭಾರಿ ಕೆಶೀಫ್ ಅಧಿಕಾರಿಗಳಿಗೆ ಮತ್ತು ಪೊಲೀಸ್ ಇಲಾಖೆಗೆ ಮನವಿ ಮಾಡಿದರು ಯಾವುದೆ ಕ್ರಮ ಕೈಗೊಂಡಿಲ್ಲ ಎಂದು ಸ್ಥಳದಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು, ಸ್ಥಳಕ್ಕೆ ಆಗಮಿಸಿದ ಹುಲಿಯೂರುದುರ್ಗ ಪಿಎಸ್ಐ ಸುನಿಲ್ ಕುಮಾರ್ ಗ್ರಾಮಸ್ಥರ ಮನವೊಲಿಸಿ ಲಾರಿಯನ್ನು ತೆರವು ಮಾಡಿ ವಾಹನ ಸಂಚಾರಕ್ಕೆ ಅನುವುಮಾಡಿಕೊಟ್ಟರು ಪಟ್ಟು ಬಿಡದ ಗ್ರಾಮಸ್ಥರು ಇನ್ನೊಂದು ತಿಂಗಳ ಒಳಗಾಗಿ ಪದೆ ಪದೆ ಅಪಘಾತ ಸಂಬವಿಸುತ್ತಿರುವ ಈ ಸ್ಥಳದಲ್ಲಿ ಸಾರ್ವಜನಿಕರ ಹಿತದೃಷ್ಟಿಯಿಂದ ಸುರಕ್ಷತ ಕ್ರಮ ಕೈಗೊಳ್ಳದಿದ್ದರೆ ರಸ್ತೆ ತಡೆದು ಹೊರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು @publicnewskunigal