ದಲಿತ ಸಮುದಾಯದವರು ಒಡಾಡುವ ರಸ್ತೆಗೆ ಸವರ್ಣಿಯರಿಂದ ಅಡ್ಡಿಪಡಿಸಿರುವ ಬಗ್ಗೆ ದೂರು ನೀಡಿದರು ಕ್ರಮ ಕೈಗೋಳ್ಳದ ಅಧಿಕಾರಿಗಳು!
ಕುಣಿಗಲ್ ತಾಲ್ಲೂಕಿನ ಕಸಬಾ ಹೊಬಳಿಯ ಸಂತೆಮಾವತ್ತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಹೆಗ್ಗಡತಿಹಳ್ಳಿ ಗ್ರಾಮದಲ್ಲಿ ಸುಮಾರು 40 ವರ್ಷಗಳಿಂದ ವಾಸಿಸುತ್ತಿರುವಗ ದಲಿತರಿಗೆ ಒಡಾಡಲು ರಸ್ತೆ ಬಿಡದಂತೆ ಸವರ್ಣಿಯರು ಅಡ್ಡಿಪಡಿಸಿರುವ ಅಮಾನವಿಯ ಘಟನೆ ನಡೆದಿದ್ದು ಈ ಬಗ್ಗೆ ಗ್ರಾಮದ ದಲಿತರು ಸ್ಥಳಿಯ ಗ್ರಾಮ ಪಂಚಾಯ್ತಿ ಹಾಗೂ ತಹಶೀಲ್ದಾರ್,ತಾಲ್ಲೂಕುಪಂಚಾಯ್ತಿ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ದೂರು ನೀಡಿ ಮೂರು ತಿಂಗಳುಗಳು ಕಳೆದರು ಸಹ ಅಧಿಕಾರಿಗಳು ಮಾತ್ರ ಇದುವರೆಗೂ ಯಾವುದೆ ಕ್ರಮ ಕೈಗೊಂಡಿಲ್ಲ ಗ್ರಾಮದಲ್ಲಿ ಸವರ್ಣಿಯರ ನಡುವೆ ಒಂದೆ ದಲಿತ ಕುಟುಂಬ ವಾಸಿಸುತ್ತಿರುವ ಕಾರಣಕ್ಕೆ ಒಡಾಡುವ ರಸ್ತೆಗೆ ಅಡ್ಡಿಪಡಿಸುತಿರುವ ಬಗ್ಗೆ ಆರೋಪ ಕೇಳಿಬಂದಿದೆ
ಇತ್ತಿಚೆಗೆ ಗ್ರಾಮ ಪಂಚಾಯ್ತಿ ವತಿಯಿಂದ ಹೆಗ್ಗಡತಿಹಳ್ಳಿ ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಿಸಲಾಗಿದೆ ಆದರೆ ಗ್ರಾಮದ ಜಯರಾಮಯ್ಯ ಎಂಬುವವರು ಸಾರ್ವಜನಿಕರು ಒಡಾಡುವ ಮನೆಯ ಮುಂದಿನ ರಸ್ತೆಯಲ್ಲಿ ನೀರಿನ ಸಂಪ್ ನಿರ್ಮಿಸಿ ಮನೆಯ ಮೇಲ್ಛಾವಣಿಗೆ ಸೇರಿಸಿ ರಸ್ತೆಗೆ ಹೊಂದಿಕೊಂಡಂತೆ ಕಬ್ಬಿಣದ ಪೈಪ್ ನಿಲ್ಲಿಸಿ ಸೀಟ್ ಅಳವಡಿಸಿ ರಸ್ತೆಯಲ್ಲಿ ಕಲ್ಲುಗಳನ್ನು ಇರಿಸಿ ದಲಿತ ಕುಟುಂಬದವರಿಗೆ ಒಡಾಡಲು ಅಡ್ಡಿಪಡಿಸಿದ್ದು ಈ ಬಗ್ಗೆ ಪ್ರಶ್ನಿಸಲು ಹೊದರೆ ಇಲ್ಲಿ ನಿವುಗಳು ಒಡಾಡಬೇಡಿ ಎಂದು ಪ್ರತಿನಿತ್ಯ ತೊಂದರೆ ನಿಡುತ್ತಿದ್ದಾರೆ ಎಂದು ದಲಿತ ಸಮುದಾಯದಕ್ಕೆ ಸೇರಿದ ಸೀಳ್ಳೆಕ್ಯಾತ ಜನಾಂಗದ ಲಕ್ಷ್ಮಿನರಸಿಂಹಯ್ಯ ತಿಳಿಸಿದ್ದಾರೆ ಈ ಬಗ್ಗೆ ಹಲವು ಭಾರಿ ಗ್ರಾಮ ಪಂಚಾಯ್ತಿ ಅಭಿವೃದ್ದಿ ಅಧಿಕಾರಿಗಳಿಗೆ ಮೂರುಭಾರಿ ದೂರು ನೀಡಿದರು ಇದುವರೆಗೆ ಸ್ಥಳಕ್ಕೆ ಬೇಟಿನಿಡಿ ಪರಿಶೀಲನೆ ನಡೆಸಿಲ್ಲ ಇತ್ತ ರಸ್ತೆ ಇಲ್ಲದೆ ಒಡಾಡಲು ಸಮಸ್ಯೆಯಾಗಿದೆ ಕುಡಲೆ ಸಂಬಂಧ ಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಸಮಸ್ಯೆ ಬಗೆ ಹರಿಸುವಂತೆ ಗ್ರಾಮದ ದಲಿತ ಕುಟುಂಬ ಒತ್ತಾಯಿಸಿದೆ, @publicnewskunigal