ಬಾಗೇನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ನರೇಗಾ ಯೋಜನೆಯಡಿ ನಡೆದಿರುವ ಭ್ರಷ್ಟಚಾರದ ವಿರುದ್ದ ಕ್ರಮಕ್ಕೆ ಹೆಚ್,ಜಿ ರಮೇಶ್ ಆಗ್ರಹ!
ಕುಣಿಗಲ್ ತಾಲ್ಲೂಕಿನ ಬಾಗೇನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ಹಲವು ವರ್ಷಗಳಿಂದ ನರೇಗಾ ಯೋಜನೆಯಲ್ಲಿ ಕಾಮಗಾರಿ ನಡೆಸದೆ 35 ಲಕ್ಷ ರೂಪಾಯಿ ಬಿಲ್ ಪಡೆದು ಭ್ರಷ್ಟಾಚಾರ ಮಾಡಿರುವವರ ವಿರುದ್ದ ಕಾನುನೂ ಕ್ರಮ ಕೈಗೊಳ್ಳುವಂತೆ ಹಲವುಭಾರಿ ತಾಲ್ಲೂಕು ಪಂಚಾಯ್ತಿ ಮತ್ತು ಜಿಲ್ಲಾ ಪಂಚಾಯ್ತಿ ಅಧಿಕಾರಿಗಳಿಗೆ ಮನವಿ ಮಾಡಿದ್ದರು ಸಹ ಇದುವರೆಗೂ ಯಾವುದೆ ಕ್ರಮ ಕೈಗೋಳ್ಳದ ಹಿನ್ನೆಲೆಯಲ್ಲಿ ಪಟ್ಟಣದ ತಾಲ್ಲೂಕು ಪಂಚಾಯ್ತಿ ಕಚೇರಿಯ ಮುಂಭಾಗ ಬುಧವಾರ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಹೊರಾಟಗಾರರ ವೇದಿಕೆಯ ರಾಜ್ಯಧ್ಯಕ್ಷ ಹೆಚ್,ಜಿ ರಮೇಶ್ ನೆತೃತ್ವದಲ್ಲಿ ನ್ಯಾಯಕ್ಕಾಗಿ ಆಗ್ರಹಿಸಿ ಧರಣಿ ನಡೆಸಲಾಯಿತು
ಕರ್ತವ್ಯ ಲೋಪವೆಸಗಿರುವ ಪಿಡಿಒ ಮತ್ತು ಅಧಿಕಾರಿಗಳ ವಿರುದ್ದ ಈಗಾಗಲೆ ನರೇಗಾ ಯೊಜನೆಯ ಒಂಬುಡ್ಸ್ ಮನ್ ರವರ ನೇತೃತ್ವದಲ್ಲಿ ತನಿಖೆ ನಡೆಸಿ ಕ್ರಮಕ್ಕೆ ವರದಿ ಸಲ್ಲಿಸಿದರು ಸಹ ಇಲಾಖೆಯ ಹಿರಿಯ ಅಧಿಕಾರಿಗಳು ಯಾವುದೆ ಕ್ರಮ ಕೈಗೊಂಡಿಲ್ಲ ಆದ್ದರಿಂದ ಧರಣಿ ಸ್ಥಳಕ್ಕೆ ಅಧಿಕಾರಿಗಳು ಬಂದು ಕ್ರಮ ಕೈಗೊಳ್ಳುವ ವರೆಗೆ ಧರಣಿ ನಡೆಸಲಾಗೂವುದು ಎಂದು ಹೆಚ್,ಜಿ ರಮೇಶ್ ತಿಳಿಸಿದರು ಬಳಿಕ ಧರಣಿ ನಿರತ ಸ್ಥಳಕ್ಕಾಗಮಿಸಿದ ಕುಣಿಗಲ್ ಶಾಸಕ ಡಾ,ರಂಗನಾಥ್ ಸಮಸ್ಯೆ ಹಾಲಿಸಿ ಶಾಸಕರು ದೂರವಾಣಿಯ ಮೂಲಕ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಕ ಅಧಿಕಾರಿಗಳೊಂದಿಗೆ ಮಾತನಾಡಿ ತಾಲ್ಲೂಕಿನ ಬಾಗೇನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ನರೇಗಾ ಯೋಜನೆಯಡಿಯಲ್ಲಿ ಭ್ರಷ್ಟಾಚಾರ ಆರೊಪ ಹೊತ್ತಿರುವ ಅಧಿಕಾರಿಗಳ ವಿರುದ್ದ ತನಿಖೆ ನಡೆಸಿ ಕಾನುನೂ ಕ್ರಮ ಕೈಗೊಳ್ಳುವಂತೆ ಸೂಚಿಸಿದರು,
ಬಳಿಕ ಸ್ಥಳಕ್ಕಾಗಮಿಸಿದ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣ ಅಧಿಕಾರಿ ಜೋಸೆಫ್ ಮಾತನಾಡಿ ಗಾಮ ಪಂಚಾಯ್ತಿಯಲ್ಲಿ ನಡೆದಿರುವ ಅವ್ಯವಹಾರದಲ್ಲಿ ಭಾಗಿಯಾಗಿರುವ ಅಧಿಕಾರಿಗಳಿಗೆ ಈಗಾಗಲೆ ನೊಟಿಸ್ ಜಾರಿಮಾಡಲಾಗಿದೆ ಇನ್ನೂ ಮೂರು ದಿನಗಳ ಒಳಗಾಗಿ ಸಂಬಂಧ ಪಟ್ಟವರ ವಿರುದ್ದ ಕ್ರಮ ಕೈಗೊಳ್ಳುವ ಬರವಸೆ ನೀಡಿದ ಬಳಿಕ ಧರಣಿ ಕೈ ಬಿಡಲಾಯಿತು ಇದಾದ ಬಳಿಕ ಸುದ್ದಿಗಾರರಂದಿಗೆ ಮಾತನಾಡಿದ ರಾಜ್ಯ ಮಾಹಿತಿಹಕ್ಕು ಮತ್ತು ಸಾಮಾಜಿಕ ಹೊರಾಟಗಾರರ ವೇದಿಕೆಯ ರಾಜ್ಯಧ್ಯಕ್ಷ ರಮೇಶ್ ಮಾತನಾಡಿ ಮೂರು ದಿನಗಲ ಒಳಗಾಗಿ ಕ್ರಮ ಕೈಗೋಳ್ಳದಿದ್ದರೆ ತುಮಕೂರು ಜಿ,ಪಂ ಕಚೆರಿಯ ಮುಂಭಾಗ ದರಣಿ ನಡೆಸುವುದಾಗಿ ತಿಳಿಸಿದರು ಈ ವೇಳೆ ಧರಣಿಯಲ್ಲಿ ತಾಲ್ಲೂಕು ಅಧ್ಯಕ್ಷ ದೀಪಕ್,ಕಾರ್ಯದರ್ಶಿ ವಿಷ್ಣುವಿಜಯ್,ತುರುವೆಕೆರೆ ತಾಲ್ಲೂಕು ಅಧ್ಯಕ್ಷ ರುದ್ರೆಶ್, ಹಾಗೂ ಹೇಮಂತ್,ರಂಗನಾಥ್,ದೊರೆಸ್ವಾಮಿ ಉಪಸ್ಥಿತರಿದ್ದರು, @publicnewskunigal