ಸಂತೆಮಾವತ್ತೂರು ಗ್ರಾಮದ ಕೆರೆಯಿಂದ ಅಕ್ರಮವಾಗಿ ಮುಣ್ಣು ತುಂಬಿ ಸಾಗಿಸುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಟ್ರಾಕ್ಟರ್!

Spread the love

ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಸಂತೆಮಾವತ್ತೂರು ಗ್ರಾಮದಲ್ಲಿ ಬುಧವಾರ ಗ್ರಾಮದ ಕೆರೆಯಿಂದ ಅಕ್ರಮವಾಗಿ ಮಣ್ಣನ್ನು ತುಂಬಿ ಸಾಗಿಸುತ್ತಿದ್ದ ವೇಳೆ ಟ್ರಾಕ್ಟರ್ ಚಾಲಕನ ಅಜಾಗರುಕತೆಯ ಕಾರಣದಿಂದ ರಸ್ತೆ ಬದಿಯಲ್ಲಿ ನಿಂತಿದ್ದ ಟಾಟಾ ಎಸ್ ವಾಹನಕ್ಕೆ ಗುದ್ದಿದೆ ಬಳಿಕ ಗ್ರಾಮದ ಕೃಷ್ಣಪ್ಪ ಎಂಬುವವರ ಮನೆಗೆ ಗುದ್ದಿದ ರಬಸಕ್ಕೆ ಮನೆಯ ಗೊಡೆ ಸಂಪೂರ್ಣ ಜಕಂಗೊಡಿದೆ ಮನೆಯಲ್ಲಿ ಇದ್ದವರು ಗಾಬರಿಗೊಂಡು ಇಚೆ ಬಂದು ನೋಡಿದ ವೇಳೆ ಟ್ರಾಕ್ಟರ್ ಮನೆಗೆ ಗುದ್ದಿರುವುದು ಕಂಡುಬಂದಿದೆ ಘಟನೆ ಸಂಭವಿಸುತ್ತಿದ್ದಂತೆ ಟ್ರಾಕ್ಟರ್ ಚಾಲಕನ ಸ್ಥಳದಿಂದ ಕಾಲ್ಕಿತ್ತಿದ್ದಾನೆ ಇದರಿಂದ ಸಿಟ್ಟಿಗೆದ್ದ ಗ್ರಾಮಸ್ಥರು ಸಂತೆಮಾವತ್ತೂರು ಗ್ರಾಮ ಪಂಚಾಯಿತಿಯ ಬಳಿ ಜಮಾಯಿಸಿ ಗ್ರಾಮ ಪಂಚಾಯ್ತಿ ಪಿಡಿಒ ವತ್ಸಲ ರವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ


ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುವಂತೆ ಒತ್ತಾಯಿಸಿದರು ಬಳಿಕ ಪಿಡಿಒ ಮಾತನಾಡಿ ಕೆರೆಯಿಂದ ಅಕ್ರಮವಾಗಿ ಮಣ್ಣನ್ನು ಸಾಗಿಸುತ್ತಿರುವ ಬಗ್ಗೆ ಗ್ರಾಮಪಂಚಾಯ್ತಿ ವತಿಯಿಂದ ಈಗಾಗಲೆ ಪೊಲೀಸ್ ಠಾಣೆ,ತಹಸೀಲ್ದಾರ್, ಸೆರಿದಂತೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಇದುವರೆಗೆ ಯಾವೊಬ್ಬ ಅಧಿಕಾರಿಗಳು ಇತ್ತ ಗಮನ ಹರಿಸಿಲ್ಲ ಕೆರೆ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಒಳಪಡುವುದಿಲ್ಲ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಗೆ ಬರುತ್ತದೆ ಎಂದರು ಬಳಿಕ ಸ್ಥಳದಲ್ಲಿದ್ದ ಗ್ರಾಮಸ್ಥರು ಮಾತನಾಡಿ

ಅರೆಪಾಳ್ಯ ಹಾಗೂ ಸಂತೆಮಾವತ್ತೂರು ಗ್ರಾಮದ ಎರಡು ಕೆರೆಗಳಲ್ಲಿ ಫಲವತ್ತಾದ ಕೆಂಪು ಮಣ್ಣನ್ನು ಸ್ಥಳೀಯ ಪ್ರಭಾವಿಗಳು ಪಕ್ಕದ ತಾಲ್ಲೂಕುಗಳಿಗೆ ಹಾಗೂ ಇಟ್ಟಿಗೆ ಕಾರ್ಖಾನೆಗಳಿಗೆ ಮಾರಾಟ ಮಾಡುತ್ತಿದ್ದಾರೆ ಆದರೆ ಸ್ಥಳಿಯ ರೈತರು ತೋಟಗಳಿಗೆ ಮಣ್ಣನ್ನ ತೆಗೆಯಲು ಹೊದರೆ ಕಂದಾಯ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳು ತೊಂದರೆ ಮಾಡುತ್ತಾರೆ ಆದರೆ ಪ್ರಭಾವಿಗಳಿಗೆ ಕೆರೆಯ ಮಣ್ಣು ತೆಗೆಯಲು ಸಹಕರಿಸುತ್ತಾರೆ ಇದರಿಂದ ಕೆರೆಯಲ್ಲಿ ಫಲವತ್ತಾದ ಮಣ್ಣು ತೆಗೆಯುವುದರ ಜೋತೆಗೆ ಕೆರೆಯಲ್ಲಿದ್ದ ಮರ ಗಿಡಗಳನ್ನು ಬುಡ ಸಹಿತ ಕಿತ್ತು ಹಾಕಲಾಗಿದೆ ಕೆರೆಯಲ್ಲಿರುವ ವಿದ್ಯುತ್ ಕಂಬಗಳು ಬಿಳುವ ಸ್ಥಿತಿಯಲ್ಲಿವೆ ಜೆಸಿಬಿ ಟ್ರಾಕ್ಟರ್ ಬಳಸಿ ವಾಣಿಜ್ಯ ಬಳಕೆಗೆ ಮಣ್ಣು ತುಂಬುತ್ತಿರುವ ಬಗ್ಗೆ ಕಳೆದ ನಾಲ್ಕೈದು ತಿಂಗಳಿಂದ ಕಂದಾಯ ಇಲಾಖೆ,ಸಣ್ಣ ನೀರಾವರಿ ಇಲಾಖೆ,ಬೆಸ್ಕಾಂ, ಅರಣ್ಯ ಇಲಾಖೆ,ಹಾಗೂ ಪೊಲೀಸ್ ಠಾಣೆಗೆ ದೂರು ನೀಡಿದರು ಅಧಿಕಾರಿಗಳು ಮಾತ್ರ ಇದುವರೆಗೆ ಯಾವುದೆ ರೀತಿಯ ಕ್ರಮ ಕೈಗೊಂಡಿಲ್ಲ ಇದರಿಂದ ಕೆರೆಯಲ್ಲಿದ್ದ ಫಲವತ್ತಾದ ಮಣ್ಣು ಮರ ಗಿಡಗಳು ನಾಶವಾಗಿವೆ ಯಾವುದೆ ಅನುಮತಿ ಇಲ್ಲದೆ ಕೆರೆಯ ಮಣ್ಣನ್ನು ಮಾರಾಟ ಮಾಡುತ್ತಿದ್ದಾರೆ ಈ ಬಗ್ಗೆ ಜಿಲ್ಲಾಧಿಕಾರಿಗಳು ಗಮನಹರಿಸಬೇಕ ಎಂದು ಗ್ರಾಮಸ್ಥರು ಒತ್ತಾಯಿಸಿದರು ಬಳಿಕ ಸ್ಥಳಕ್ಕೆ ಹುಲಿಯೂರುದುರ್ಗ ಪಿಎಸ್ಐ ಬಾಲಕುಮಾರ್ ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ಯಾವುದೆ ಪ್ರಕರಣ ದಾಖಲಾಗದೆ ರಾಜಿ ಸಂಧಾನದ ಮೂಲಕ ಸಮಸ್ಯೆ ಇತ್ಯರ್ಥ ಪಡಿಸಿಕೊಂಡಿರುವ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ @publicnewskunigal