ಹೋರಾಟಕ್ಕೆ ಮಣಿದ ಜಿಲ್ಲಾಡಳಿತ ಕೊನೆಗೂ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ ವರ್ಗವಣೆ ಮಾಡಿ ಆದೇಶಿಸಿದೆ,
ತುಮಕೂರು;-ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಹಲವು ವರ್ಷಗಳಿಂದ ಒಂದೆ ಕಡೆಯಲ್ಲಿ ಬೇರು ಬಿಟ್ಟಿದ್ದ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ ಹೇರಂಭಾ ವರ್ಗವಣೆಗೆ ಆಗ್ರಹಿಸಿ ರಾಜ್ಯ ಮಾಹಿತಿಹಕ್ಕು ಮತ್ತು ಸಾಮಾಜಿಕ ಹೊರಾಟಗಾರರ ವೇದಿಕೆಯ ರಾಜ್ಯಧ್ಯಕ್ಷ ಹೆಚ್,ಜಿ ರಮೇಶ್ ನೆತೃತ್ವದಲ್ಲಿ ಕಳೆದವಾರ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಆಪ್ತ ಸಹಾಯಕನನ್ನು ವರ್ಗವಣೆ ಮಾಡುವಂತೆ ಒತ್ತಾಯಿಸಿ ಮನವಿ ಸಲ್ಲಿಸಲಾಗಿತ್ತು ಆದರೆ ಮನವಿ ಆಲಿಸಿದ ಜಿಲ್ಲಾಧಿಕಾರಿಗಳು ಆಪ್ತಸಹಾಯಕ ಹೇರಂಭಾ ನನ್ನು ವರ್ಗವಣೆ ಮಾಡುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ರಾಜ್ಯ ಮಾಹಿತಿ ಹಕ್ಕು ಸಾಮಾಜಿಕ ಹೋರಾಟಗಾರರ ವೇದಿಕೆಯ ರಾಜ್ಯಾಧ್ಯಕ್ಷ ಹೆಚ್,ಜಿ ರಮೇಶ್ ನೇತೃತ್ವದಲ್ಲಿ ಫೆಬ್ರವರಿ 27 ರಂದು ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ಹೇರಂಭಾ ವರ್ಗವಣೆಗೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಅಮ್ಮಿಕೋಳ್ಳಲಾಗಿತ್ತು ರಾಜ್ಯದ ಹಲವು ಜಿಲ್ಲೆಗಳಿಂದ ರಾಜ್ಯ ಘಟಕದ ಹಾಗೂ ತಾಲ್ಲೂಕು ಘಟಕದ ಪದಾಧಿಕಾರಿಗಳು ಉಪವಾಸ ಸತ್ಯಾಗ್ರಹದಲ್ಲಿ ಭಾಗಿಯಾಗಿ ಹೇರಂಭಾ ವರ್ಗವಣೆಗೆ ಆಗ್ರಹಿಸಿದ್ದರು
ಗುರುವಾರ ಉಪವಾಸ ಸತ್ಯಾಗ್ರಹ ಮೂರನೆದಿನಕ್ಕೆ ಕಾಲಿಟ್ಟಿ ಹಿನ್ನೆಲೆ ಕೊನೆಗೂ ಹೊರಾಟಗಾರರಿಗೆ ಮಣಿದ ಜಿಲ್ಲಾಢಳಿತ ರಾಜಕೀಯ ಪ್ರಭಾವ ಬಳಸಿ ಹಲವು ವರ್ಷಗಳಿಂದ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಒಂದೆ ಕಡೆಯಲ್ಲಿ ಕುಳಿತಿದ್ದ ಹೇರಂಭಾ ನನ್ನು ಗುಬ್ಬಿ ತಾಲ್ಲೂಕಿಗೆ ವರ್ಗವಣೆ ಮಾಡಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಆದೇಶಿಸಿದ್ದಾರೆ
ಬಳಿಕ ರಾಜ್ಯಾಧ್ಯಕ್ಷ ಹೆಚ್,ಜಿ ರಮೇಶ್ ಮಾತನಾಡಿ ಸಂವಿಧಾನ ಬದ್ಧವಾಗಿ ಕರ್ತವ್ಯ ನಿರ್ವಹಿಬೇಕಿದ್ದ ತುಮಕೂರು ಜಿಲ್ಲಾಧಿಕಾರಿಗಳು ಸರ್ಕಾರಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಒಬ್ಬ ಪ್ರಥಮ ದರ್ಜೆ ಸಹಾಯಕನನ್ನು ವರ್ಗವಣೆ ಮಾಡಲು ಮೀನಾ ಮೇಷ ಎಣಿಸಿ ಬಳಿಕ ಉಪವಾಸ ಸತ್ಯಾಗ್ರಹಕ್ಕೆ ಕುಳಿತ ಬಳಿಕ ಆಪ್ತ ಸಹಾಯಕನನ್ನು ವರ್ಗವಣೆ ಮಾಡಿದ್ದಾರೆ ಆದರೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇನ್ನೂ ಹಲವು ಅಧಿಕಾರಿಗಳು 10 –15 ವರ್ಷಗಳಿಂದ ಬೇರೂರಿದ್ದಾರೆ ಲೊಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಮೂರು ವರ್ಷಗಳ ಮೇಲ್ಪಟ್ಟ ಒಂದೆ ಸ್ಥಳದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳನ್ನು ವರ್ಗವಣೆ ಮಾಡುವಂತೆ ಆದೇಶವಿದ್ದರು ಸಹ ಅದು ತುಮಕೂರು ಜಿಲ್ಲೆಯಲ್ಲಿ ಮಾತ್ರ ಕಾರ್ಯರೂಪಕ್ಕೆ ಬಂದಂತೆ ಕಾಣುತ್ತಿಲ್ಲ ಇದೆ ರೀತಿಯಲ್ಲಿ ಆಡಳಿತ ವ್ಯವಸ್ಥೆ ಮುಂದುವರಿದಲ್ಲಿ ಹೋರಾಟ ಅನಿವಾರ್ಯ ಎಂದರು @publicnewskunigal