ಕುಣಿಗಲ್ ತಾಲ್ಲೂಕು ತಹಶೀಲ್ದಾರ್ ರವರ ಆದೇಶಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ!
ಗ್ರಾಮ ಲೆಕ್ಕಾಧಿಕಾರಿಗಳನ್ನು ನಿಯೋಜನೆ ಮೇರೆಗೆ ವರ್ಗಾವಣೆ ಮಾಡಿ ಆದೇಶಿಸಿ ಬಳಿಕ ಯಾವುದೆ ರೀತಿಯ ವರ್ಗಾವಣೆ ಮಾಡಿಲ್ಲಾ ಎಂದು ವರದಿ ನೀಡಿರುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಮೊದಲು,ನಂತರ ಎಂಬ ಶೀರ್ಷಿಕೆಯಡಿ ಅಧಿಕಾರಿಗಳು ಮಾಡಿರುವ ಆದೇಶ ಪ್ರತಿಯನ್ನು ಹಾಕಿ ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಂಡಿರುವ ಘಟನೆ ನಡೆದಿದೆ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮ ಲೆಕ್ಕಾಧಿಕಾರಿಗಳು (ಗ್ರಾಮ ಆಡಳಿತ ಅಧಿಕಾರಿ) ಗಳನ್ನು
ತಹಶೀಲ್ದಾರ್ ರವರು ಮಾಡಿರು ಎರಡು ಆದೇಶ ಪ್ರತಿಗಳು!
ದಿನಾಂಕ 16/12/2023 ರಂದು ತಹಶೀಲ್ದಾರ್ ವಿಶ್ವನಾಥ್ ರವರು ವರ್ಗಾವಣೆ ಮಾಡಿ ಆದೇಶ ಮಾಡಿದ್ದು ವರ್ಗವಣೆಯಾದ ಅಧಿಕಾರಿಗ ವಿವರ;-ಮಹಮದ್ ಅಜರುದ್ದೀನ್,ಹಾಲಿ ಹುಲಿಯೂರುದುರ್ಗ ವೃತ್ತ ಹೆಚ್ಚುವರಿಯಾಗಿ ಹುಲಿಯೂರುದುರ್ಗ ಹೋಬಳಿಯ ಕೆಂಚನಹಳ್ಳಿ ವೃತ್ತ,ಎನ್,ಜಿ ಪುರುಷೋತ್ತಮ್,ಹಾಲಿ ಡಿ ಹೊಸಹಳ್ಳಿ ವೃತ್ತ ಹೆಚ್ಚುವರಿಯಾಗಿ ಹುಲಿಯೂರುದುರ್ಗ ಹೋಬಳಿಯ ತಾವರೆಕೆರೆ ವೃತ್ತ ವೆಂಕಟೇಶ್ ತಾವರೆಕೆರೆ ವೃತ್ತದಿಂದ ಯಡಿಯೂರು ಹೋಬಳಿಯ ಜಿಡ್ಡಿಗೆರೆ ವೃತ್ತಕ್ಕೆ ವರ್ಗಾವಣೆ ಮಾಡಿ ಆದೇಶ ಮಾಡಲಾಗಿದೆ ವರ್ಗಾವಣೆ ಮಾಡಿ ತಿಂಗಳು ಕಳೆದರು ಸಹ ಅಧಿಕಾರಿಗಳು ಹಾಯ ವೃತ್ತದಿಂದ ಬದಲಾವಣೆಯಾಗದ ಕಾರಣ ನರಸಿಂಹಮೂರ್ತಿ ಎಂಬುವವರು ಮಾಹಿತಿ ಹಕ್ಕು ಅಧಿನಿಯಮದಡಿ ದಿನಾಂಕ 01/12/2023 ರಿಂದ 31/01/2024 ವರೆಗೆ ಕುಣಿಗಲ್ ತಾಲ್ಲೂಕಿನಲ್ಲಿ ಗ್ರಾಮ ಲೆಕ್ಕಾಧಿಕಾರಿಗ ವರ್ಗಾವಣೆ ಮಾಡಿರುವ ಬಗ್ಗೆ ತಹಶೀಲ್ದಾರ್ ರವರಿಗೆ ಮಾಹಿತಿ ಕೇಳಿದ್ದಾರೆ ಆದರೆ ಗ್ರಾಮ ಲೆಕ್ಕಾಧಿಕಾರಿಗಳನ್ನು ಕುಣಿಗಲ್ ತಹಶೀಲ್ದಾರ್,ತುಮಕೂರು ಜಿಲ್ಲಾಧಿಕಾರಿಗಳು/ಉಪ ವಿಭಾಗಾಧಿಕಾರಿಗಳು ಯಾವುದೆ ವರ್ಗವಣೆ ಆದೇಶವನ್ನು ಮಾಡಿಲ್ಲಾ ಎಂದು ಮಾಹಿತಿ ನೀಡುವ ಮೂಲಕ ತಹಶೀಲ್ದಾರ್ ವಿಶ್ವನಾಥ್ ರವರು ತಾವು ಮಾಡಿರುವ ಆದೇಶವನ್ನೆ ಮರೆತು ಬಳಿಕ ಯಾವುದೆ ವರ್ಗಾವಣೆ ಆದೇಶ ಮಾಡಿಲ್ಲ ಎಂದು ವರದಿ ನೀಡಿ ಇಗ ಪೆಚಿಗೆ ಸಿಲುಕಿದ್ದಾರೆ! ಇನ್ನಾದರು ಇಂತಹ ಸೂಕ್ಷ್ಮ ವಿಷಯಗಳ ಬಗ್ಗೆ ಕೆಳ ಹಂತದ ಅಧಿಕಾರಿಗಳು ಮಾಡುವ ಯಡವಟ್ಟನ್ನು ಪರಿಶೀಲಿಸಿ ಆದೇಶ ಪತ್ರಗಳಿಗೆ ಸಹಿ ಮಾಡಲಿ ಹಾಗೂ ಆದೇಶದಂತೆ ಗ್ರಾಮ ಲೆಕ್ಕಾಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಿ ಎಂಬುದು ಸಾರ್ವಜನಿಕರ ಆಗ್ರಹವಾಗಿದೆ,@publicnewskunigal