ಸ್ಪೋಟಕ ತಿರುವು ಪಡೆದ ಬ್ಲಾಕ್ ಮೇಲ್ ಪ್ರಕರಣ: ತಡರಾತ್ರಿ ವಿದ್ಯಾಚೌಡೇಶ್ವರಿ ಮಠದ ಸ್ವಾಮೀಜಿ ಬಂಧನ
ಕುಣಿಗಲ್: ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಅಂಗರಹಳ್ಳಿ ಶ್ರೀ ವಿದ್ಯಾಚೌಡೇಶ್ವರಿ ಮಠದ ಬಾಲ ಮಂಜುನಾಥ ಸ್ವಾಮಿ ಅವರನ್ನು ಪೋಕ್ಸೊ ಪ್ರಕರಣದಡಿ ಗುರುವಾರ ತಡರಾತ್ರಿ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಏನಿದು ಪ್ರಕರಣ?:
ಚರ್ಮ ರೋಗಕ್ಕೆ ಚಿಕಿತ್ಸೆ ಕೊಡುವ ನೆಪದಲ್ಲಿ ನನ್ನ ಬೆತ್ತಲೆ ವಿಡಿಯೋ ಮಾಡಿಕೊಂಡು, ನನ್ನನ್ನು ಬೆದರಿಸಿ ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದಾರೆಂದು ಸ್ವಾಮೀಜಿ ಅವರು ತನ್ನ ಆಪ್ತ ಸಹಾಯಕ ಅಭಿಲಾಷ್ ಎಂಬಾತನ ಮೂಲಕ ದೂರು ಕಳೆದ ಫೆಬ್ರುವರಿ 10ರಂದು ತುಮಕೂರು ಸೈಬರ್ ಪೊಲೀಸ್ ಠಾಣೆಯಲ್ಲಿ ಆರು ಮಂದಿ ವಿರುದ್ಧ ಎಫ್ಐಆರ್ ದಾಖಲಿಸಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರಕರಣ ಬೇರೆ ತಿರುವು ಪಡೆದುಕೊಂಡಿದೆ. ಮಠದಲ್ಲೇ ಅಪ್ರಾಪ್ತ ಬಾಲಕಿಗೆ ಸ್ವಾಮೀಜಿ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಅಭಿಷೇಕ್ ಎಂಬಾತ ಕೊಟ್ಟ ಮಾಹಿತಿ ಮೇರೆಗೆ ಗುರುವಾರ ರಾತ್ರಿ ಮಠಕ್ಕೆ ತೆರಳಿ ಪರಿಶೀಲನೆ ನಡೆಸಿದ ಪೊಲೀಸರು ಬಾಲಮಂಜುನಾಥ ಸ್ವಾಮೀಜಿ ಹಾಗೂ ಅವರ ಆಪ್ತ ಸಹಾಯಕ ಅಭಿಲಾಷ್ ವಿರುದ್ಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಿಸಿದ್ದಾರೆ. ತಡರಾತ್ರಿ ಇಬ್ಬರನ್ನೂ ಮಠದಲ್ಲೇ ಬಂಧಿಸಿ ಪೊಲೀಸರು ಕರೆದೊಯ್ದಿದ್ದಾರೆ.
ಸ್ವಾಮೀಜಿಯನ್ನ ಲಾಕ್ ಮಾಡಲು ಎಸ್.ಪಿ. ಮಾಸ್ಟರ್ ಪ್ಲಾನ್:
ಎಸ್ .ಪಿ. ಇನೋವಾ ಕಾರು ಬಿಟ್ಟು ಗೌಪ್ಯವಾಗಿ ಹೆರಿಟಿಗಾ ಕಾರಿನಲ್ಲಿ ಮಠಕ್ಕೆ ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ. ಅವರು ತೆರಳಿದ್ದರು. ಪೊಲೀಸರು ಬರುವ ಬಗ್ಗೆ ಸುಳಿವು ಸಿಕ್ರೆ ಸ್ವಾಮೀಜಿ ಎಸ್ಕೇಪ್ ಆಗುವ ಸಾಧ್ಯತೆ ಹಿನ್ನೆಲೆ ಆರಂಭದಲ್ಲಿ ಸ್ಥಳೀಯ ಪೊಲೀಸರಿಗುಯ ಮಾಹಿತಿ ಕೊಟ್ಟಿರಲಿಲ್ಲ.
ಕುಣಿಗಲ್ ಡಿವೈಎಸ್ ಪಿ ಜೊತೆ ಹೆರಿಟಿಗಾ ಕಾರಿನಲ್ಲಿ ಹಂಗರಹಳ್ಳಿ ವಿದ್ಯಾಚೌಡೇಶ್ವರಿ ಮಠಕ್ಕೆ ಸಂಜೆ 7ರ ಬೇಳೆಗೆ ದಿಢೀರ್ ಎಂಟ್ರಿ ಕೊಟ್ಟಿದ್ದರು.
ಬಳಿಕ ಮಠಕ್ಕೆ ಸ್ಥಳೀಯ ಪೊಲೀಸರನ್ನ ಕರೆಸಿಕೊಂಡಿದ್ದರು.
ಸುಮಾರು ಐದು ಗಂಟೆಗಳ ಕಾಲ ಮಠದಲ್ಲೇ ವಿಚಾರಣೆ ನಡೆಸಿದ ಪೊಲೀಸರು ಬಾಲಮಂಜುನಾಥ ಸ್ವಾಮೀಜಿ ಹಾಗೂ ಇವರ ಆಪ್ತ ಸಹಾಯಕ ಅಭಿಲಾಷ್ ವಿರುದ್ಧ ಪೋಕ್ಸೋ ಕೇಸ್ ದಾಖಲಿಸಿಕೊಂಡು ತಡರಾತ್ರಿ ಆರೋಪಿಗಳನ್ನ ಬಂಧಿಸಿದ್ದಾರೆ.@publicnewskunigal