ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ಖಂಡಿಸಿ ಕಾರ್ಯ ನಿರತ ಪತ್ರಕರ್ತರ ಸಂಘದ ವತಿಯಿಂದ ಪ್ರತಿಭಟನೆ ಕ್ರಮಕ್ಕೆ ಆಗ್ರಹ!
ಕುಣಿಗಲ್ ಪಟ್ಟಣದ ತಾಲ್ಲೂಕು ಕಚೇರಿಯ ಮುಂಭಾಗ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಘಟಕದ ವತಿಯಿಂದ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆ ಖಂಡಿಸಿ ಗುರುವಾರ ತಾಲ್ಲೂಕು ಅಧ್ಯಕ್ಷ ಕೆ,ಆರ್ ರಂಗನಾಥ್ ನೆತೃತ್ವದಲ್ಲಿ ಪ್ರತಿಭಟನೆ ನಡೆಸಿ ಕ್ರಮಕ್ಕೆ ಆಗ್ರಹಿಸಿ ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು ಈ ವೇಳೆ ಹಿರಿಯ ಪತ್ರಕರ್ತ ರಾಮಚಂದ್ರಯ್ಯ ಮಾತನಾಡಿ ಸಮಾಜದ ನಾಲ್ಕನೆಯ ಅಂಗದಲ್ಲಿ ಕಾರ್ಯ ನಿರ್ವಹಿಸುವ ಮಾಧ್ಯಮದವರನ್ನು ಕಾರ್ಯಕ್ರಮ ಒಂದರಲ್ಲಿ ಸಂಸದ ಅನಂತಕುಮಾರ್ ಹೆಗಡೆ ಕೀಳು ಮಟ್ಟದ ಪದ ಬಳಕೆ ಮಾಡಿ ಆನೆ ಹೋಗುವಾಗ ನಾಯಿಗಳು ಬೊಗಳುವುದು ಸಾಮಾನ್ಯ ಎಂದು ಸಂಭೋದಿಸಿ
ಪತ್ರಕರ್ತರನ್ನು ನಾಯಿಗೆ ಹೊಲಿಸಿ ಕೀಳು ಮಟ್ಟದ ಪದಬಳಕೆ ಮಾಡಿರುವ ಸಂಸದನನ್ನು ಈ ಕೂಡಲೆ ಅಮಾನತ್ತು ಮಾಡಿ ಬಂಧಿಸಬೇಕೆಂದು ಒತ್ತಾಯಿಸಲಾಯಿತು ಸಂಸದನ ಈ ಹೇಳಿಕೆ ಇಡಿ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರಿಗೆ ಮಾಡಿದ ಅಪಮಾನ ಮಾಡಿದಂತಾಗಿದೆ ಈ ಕೂಡಲೆ ಅವರನ್ನು ಬಂಧಿಸಿ ಜೈಲಿಗಟ್ಟಬೇಕು ಎಂದು ಆಗ್ರಹಿಸಿ ತಹಶೀಲ್ದಾರ್ ವಿಶ್ವನಾಥ್ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು ಈ ವೇಳೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷರಾದ ರಂಗನಾಥ್.ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಪ್ರತಿನಿಧಿ ಸಿದ್ದಲಿಂಗ ಸ್ವಾಮಿ, ರಾಮಚಂದ್ರಯ್ಯ,ಗುರುಚರಣ್ ಸಿಂಗ್,ಆನಂದ್ ಸಿಂಗ್,ಲೋಕೆಶ್,ರವೀಂದ್ರ,ಕೃಷ್ಣ,ದಲಿತ್ ನಾರಾಯಣ್,ಮಹದೇವ್ ಸ್ವಾಮಿ,ನರಸಿಂಹ ಪ್ರಸಾದ್, ಷರೀಫ್,ಅಶೋಕ್,ಅರುಣ್,ಐ ರೇಣುಕಾಪ್ರಸಾದ್,ಮೋಹನ್ ಸೇರಿದಂತೆ ಹಲವರು ಉಪಸ್ಥಿತರಿದ್ಧರು @publicnewskunigal