ಮೀಟರ್ ಬಡ್ಡಿ ಕಿರುಕುಳ ಬೇಸತ್ತು ಎಲ್,ಎಲ್,ಬಿ ವಿದ್ಯಾರ್ಥಿ ನೇಣಿಗೆ ಶರಣು!
ಕುಣಿಗಲ್ ತಾಲೂಕಿನ ಕೊತ್ತಗೆರೆ ಹೋಬಳಿ ವ್ಯಾಪ್ತಿಯ ಕೋಡಿಹಳ್ಳಿಪಾಳ್ಯ ಗ್ರಾಮದ ವಾಸಿ ಲಲಿತಮ್ಮ ಕೋಂ ಗೋಪಾಲಕೃಷ್ಣ ಎಂಬವರು ಮಗಳಾದ ಸುಮಾರು 20 ವರ್ಷ ವಯಸ್ಸಿನ ಎರಡನೇ ವರ್ಷದ ಎಲ್,ಎಲ್,ಬಿ ಮಾಡುತ್ತಿದ್ದ ಕೆ,ಜಿ ಚೈತ್ರ ನೇಣು ಬಿಗಿದುಕೊಂಡು ಸಾವನ್ನಪ್ಪಿರುವ ಯುವತಿ ತಾಲ್ಲೂಕಿನ ಕೋಡಿಹಳ್ಳಿಪಾಳ್ಯ ಗ್ರಾಮದ ಶಾಂತಮ್ಮ ಎಂಬುವವರಿಂದ ವಾರಕ್ಕೆ 20 ಪರ್ಸೆಂಟ್ ಬಡ್ಡಿಯಂತೆ ಸುಮಾರು 18000 ಕೈ ಸಾಲ ಪಡೆದಿದ್ದ ಲಲಿತಮ್ಮ ರವರು ಪ್ರತಿವಾರ 1800 ರೂಪಾಯಂತೆ ಕಂತಿನ ಮೂಲಕ ಸಾಲದ ಹಣ ಮರು ಪಾವತಿ ಮಾಡುತ್ತಿದ್ದರು ಕಳೆದ ವಾರ ಊರ ಹಬ್ಬದ ಇದ್ದ ಕಾರಣ ಒಂದು ವಾರ ಕಂತಿನ ಹಣ ಪಾವತಿಸುವುದು ತಡವಾದ ಹಿನ್ನೆಲೆಯಲ್ಲಿ ಸಮಯಕ್ಕೆ ಸರಿಯಾಗಿ ಬಡ್ಡಿ ಕೊಡಲಿಲ್ಲ ಎಂದು ಶನಿವಾರ ಬೆಳಗ್ಗೆ 11:00 ಸಮಯದಲ್ಲಿ ಲಲಿತಮ್ಮ ರವರ ಮನೆಯ ಬಳಿ ಬಂದು ಶಾಂತಮ್ಮ ರವರು ಗಲಾಟೆ ರಂಪಾಟ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಣ ಪಾವತಿ ಮಾಡುವಂತೆ ಒತ್ತಾಯಿಸಿದ್ದಾರೆ ಇದೆ ವೇಳೆ ಮಾತಿನ ಚಕಮಕಿ ನಡೆದಿದ್ದು ಈ ವೇಳೆ ಶಾಂತಮ್ಮ ನನಗೆ ಹಣ ಬೇಕು ಎಲ್ಲಿಯಾದರು ತಂದುಕೊಡಿ ಇಲ್ಲದಿದ್ದರೆ ನಿನ್ನ ಮಗಳನ್ನು ತಲೆ ಹಿಡಿದು ಹಣ ತಂದು ಕೊಡುವಂತೆ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ ಈ ವೇಳೆ ಅಕ್ಕ ಪಕ್ಕದ ಮನೆಯವರು ಬಂದು ಜಗಳ ಬಿಡಿಸಿ ಇನ್ನೆರಡು ದಿನಗಳಲ್ಲಿ ಬಡ್ಡಿ ಹಣ ಪಾವತಿ ಮಾಡುತ್ತಾರೆ ಎಂದು ಶಾಂತಮ್ಮನನ್ನು ಕಳುಹಿಸಿಕೊಟ್ಟಿದ್ದಾರೆ ಗಲಾಟೆ ವೇಳೆ ಮನೆಯಲ್ಲೇ ಇದ್ದ ಚೈತ್ರ ಮನೆಯ ಬಳಿ ನಡೆದ ಘಟನೆಗೆ ಮನನೊಂದು ಸ್ನಾನದ ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು
ಸ್ನಾನಕ್ಕೆ ಹೋದ ಮಗಳು ಗಂಟೆ ಕಳೆದರು ಬಾರದ ಕಾರಣ ಬಾಗಿಲು ಹೊಡೆದು ನೊಡಿದಾಗ ಮಗಳು ನೇಣಿಗೆ ಶರಣಾಗಿರುವುದು ಕಂಡುಬಂದಿದೆ ಈ ಸಂಬಂಧ ಮೃತ ಯುವತಿಯ ಪೋಷಕರು ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ,ಪೊಲೀಸರು ತನಿಖೆ ಕೈಗೊಂಡಿದ್ದಾರೆ ಇನ್ನೂ ತಾಲ್ಲೂಕಿನಾದ್ಯಂತ ನಡೆಯುತ್ತಿರುವ ಅಕ್ರಮ ಮೀಟರ್ ಬಡ್ಡಿ ದಂದೆಗೆ ಕಡಿವಾಣ ಯಾವಾಗ ಎಂಬುದು ನಾಗರೀಕರ ಪ್ರಶ್ನೆಯಾಗಿದೆ ಮೀಟರ್ ಬಡ್ಡಿ ದಂಧೆಕೋರರು ಬೀದಿ ಬದಿ ವ್ಯಾಪಾರಿಗಳು ಸೆರಿದಂತೆ ಬಡ ಜನರನ್ನು ಹಾಗೂ ಕೂಲಿ ಕಾರ್ಮಿಕರೆ ಇವರ ಗುರಿಯಾಗಿದೆ ಹಣ ನೀಡಿ ಬಳಿಕ ಶೋಷಣೆ ಮಾಡುವುದು ಇಲ್ಲದಿದ್ದರೆ ಮನೆ ಆಸ್ತಿಗಳನ್ನು ಜಪ್ತಿ ಮಾಡಿಕೊಳ್ಳುವುದು ಬೆದರಿಕೆ ಹಾಕುವುದು ಹಲ್ಲೆ ನಡೆಸುವುದು ಇಂದಿಗೂ ಗೃಹ ಸಚಿವರ ತವರು ಜಿಲ್ಲೆಯಲ್ಲಿ ಜೀವಂತವಾಗಿರುವುದು ವಿಪರ್ಯಾಸವೆ ಸರಿ ಇನ್ನಾದರು ಇಂತಹ ಘಟನೆಗಳು ಮರುಕಳಿಸದಂತೆ ತಡೆಯಬೇಕಿದೆ ಹಾಗೂ ಯುವತಿಯ ಸಾವಿಗೆ ಕಾರಣವಾದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದು ಪೋಷಕರ ಹಾಗೂ ಗ್ರಾಮಸ್ಥರ ಆಗ್ರಹವಾಗಿದೆ @publicnewskunigal