ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ ಆಕಸ್ಮಿಕವಾಗಿ ಕೊಳವೆ ಬಾವಿಗೆ ಬಿದ್ದಿದ್ದ ಎರಡು ವರ್ಷದ ಬಾಲಕ ಸಾತ್ವಿಕ್‌ನ ರಕ್ಷಣೆ ಕಾರ್ಯಾಚರಣೆ ಯಶಸ್ವಿ ಗಣ್ಯರ ಪ್ರಶಂಸೆ!
ಆಕಸ್ಮಿಕವಾಗಿ ಕೊಳವೆಬಾವಿಗೆ ಬಿದ್ದಿದ್ದ ಎರಡು ವರ್ಷದ ಬಾಲಕನ ರಕ್ಷಣಾ ಕಾರ್ಯಾಚರಣೆ ಯಶಸ್ವಿಯಾಗಿದ್ದು ಕೊಳಬಾಗಿ ಬಿದ್ದು 18 ಗಂಟೆ ಕಳೆದ ನಂತರ ಎರಡು ವರ್ಷದ ಮಗುವನ್ನು ಜೀವಂತ ರಕ್ಷಣೆ ಮಾಡುವಲ್ಲಿ ಎನ್,ಡಿ,ಆರ್,ಎಫ್ ಹಾಗೂ ಎಸ್,ಡಿ,ಆರ್,ಎಫ್ ಸಿಬ್ಬಂದಿ ಯಶಸ್ವಿಯಾಗಿದ್ದು ಇಡಿ ಗ್ರಾಮ ಸಂಭ್ರಮದಲ್ಲಿ ಮುಳುಗಿದೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಲಾಂಚಾಣ ಗ್ರಾಮದಲ್ಲಿ ಬುಧವಾರ ಕೊಳಬಾಗಿ ಬಿದ್ದಿದ್ದ ಎರಡು ವರ್ಷದ ಮಗು ಸಾತ್ವಿಕ್ ನನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಸತತ 18 ಗಂಟೆಗಳ ಸುದೀರ್ಘ ಕಾರ್ಯಾಚರಣೆ ಬಳಿಕ ಎನ್,ಡಿ,ಆರ್,ಎಫ್ ಹಾಗೂ ಎಸ್,ಡಿ ಆರ್,ಎಫ್ ತಂಡವು ಮಗುವನ್ನು ಜೀವಂತವಾಗಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದೆ
ಬುಧವಾರ ಸಂಜೆ 6 ಗಂಟೆಗೆ ಕೊಳೆಯ ಬಾವಿಗೆ ಬಿದ್ದಿದ್ದ ಮಗು 18 ಗಂಟೆಗಳಿಂದ ಜಿವನ್ಮಾರಣ ಹೋರಾಟ ನಡೆಸುತ್ತಿತ್ತು ಮಗುವನ್ನು ಹೊರೆ ತೆಗೆದ ತಕ್ಷಣ ಸ್ಥಳದಲ್ಲಿ ಇದ್ದ ವೈದ್ಯರ ತಂಡ ಪ್ರಥಮ ಚಿಕಿತ್ಸೆಯನ್ನು ನೀಡಿ ಬಳಿಕ ಆಂಬುಲೆನ್ಸ್ ನಲ್ಲಿ ಮಗುವನ್ನು ಇಂಡಿ ತಾಲ್ಲೂಕು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ದಾಖಲಿಸಿದೆ ಸ್ಥಳದಲ್ಲಿ ಜಮಾಹಿಸಿದ ಸಾವಿರಾರು ಮಂದಿ ಪ್ರಾರ್ಥನೆ ಕೊನೆಗೂ ಫಲಿಸಿದ್ದು ಮಗು ಜೀವಂತವಾಗಿ ಹೊರ ಬಂದಿದೆ ನಂತರ ಇಡಿ ಗ್ರಾಮದಲ್ಲಿ ಹರ್ಷ ಮನೆ ಮಾಡಿದ್ದು ಸಂಭ್ರಮ ಮುಗಿಲುಮುಟ್ಟಿತ್ತು,
ನೀರು ಬಾರದೆ ಅಥವಾ ಬತ್ತಿದ ಕೊಳವೆ ಬಾವಿಗಳನ್ನು ಮುಚ್ಚದಿದ್ದರೆ ಯಾರದೋ ಅಮಾಯಕ ಜೀವ ಬಲಿಯಾಗುತ್ತದೆ ಇಂತಹ ಘಟನೆಗಳು ರಾಜ್ಯದಲ್ಲಿ ಮರುಕಳಿಸದಿರಲಿ ಮಗುವಿನ ರಕ್ಷಣೆಗಾಗಿ ಹಗಲಿರುಳೆನ್ನದೆ ಶ್ರಮಿಸಿ ಯಶಸ್ವಿ ಕಾರ್ಯಾಚರಣೆ ನಡೆಸಿ ಮಗುವನ್ನು ಒರೆತಗಿದ ಎನ್,ಡಿ,ಆರ್, ಎಫ್ ಹಾಗೂ ಎಸ್,ಡಿ,ಆರ್,ಎಫ್ ಅಗ್ನಿಶಾಮಕ ದಳದ ಸಿಬ್ಬಂದಿಗಳಿಗೆ ಹಾಗೂ ಸಾರ್ವಜನಿಕರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ @publicnewskunigal