ರಂಜಾನ್ ಆಚರಣೆ ವೇಳೆ ಹೆಜ್ಜೇನು ದಾಳಿ ಹಲವರಿಗೆ ಗಾಯ!

Spread the love

ಬಸವಮತ್ತಿಕೆರೆ ಗ್ರಾಮದಲ್ಲಿ ರಂಜಾನ್ ಆಚರಣೆ ವೇಳೆ ಹೆಜ್ಜೇನು ದಾಳಿ ಹಲವರಿಗೆ ಗಾಯ ಆಸ್ಪತ್ರೆಗೆ ದಾಖಲು!

ಕುಣಿಗಲ್ ತಾಲ್ಲೂಕಿನ ಯಡಿಯೂರು ಹೋಬಳಿ ವ್ಯಾಪ್ತಿಯ ಬಸವಮತ್ತಿಕೆರೆ ಗ್ರಾಮದ ಮಸೀದಿಯ ಬಳಿ ಗುರುವಾರ ಬೆಳಗ್ಗೆ 11-30ರ ಸಮಯದಲ್ಲಿ ರಂಜಾನ್ ಆಚರಣೆ ವೇಳೆ ಏಕಾ ಏಕಿ ಹೆಜ್ಜೇನು ದಾಳಿ ನಡೆಸಿದ ಕಾರಣ ಹಲವರಿಗೆ ಗಾಯಗಳಾಗಿದ್ದು ಕುಣಿಗಲ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಅಬ್ದುಲ್ ಜಾಮಾಲಾದಿನ್,ಸಿಲೆಮಾನ್ ಸಾಬ್,ಹುಸೇನ್,ಅಲಿ,ಅಸ್ಲಾಂಬಾಷ,ಮೋಹಬುಬ್,ಮೋಹಮದ್ ಘಾಜಿ,ಸೇರಿದಂತೆ ಹಲವರಿಗೆ ಹೆಜ್ಜೆನು ಹುಳುಗಳು ಕಚ್ಚಿದ್ದು ರಂಜಾನ್ ಆಚರಣೆಯಲ್ಲಿ ತೊಡಗಿದ್ದವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ

ಇನ್ನೂ ಪವಿತ್ರ ರಂಜಾನ್ ಆಚರಣೆ ಸಲುವಾಗಿ ಗ್ರಾಮದ ಮಸೀದಿಯ ಬಳಿ 50 ಕ್ಕೂ ಹೆಚ್ಚಿನ ಮಂದಿ ಪ್ರಾರ್ಥನೆ ಸಲ್ಲಿಸುವ ವೇಳೆ ಗಂಧದ ಕಡ್ಡಿ ಹಚ್ಚಿದ್ದಾರೆ ಈ ವೇಳೆ ಸಮಿಪದ ಆಲದ ಮರದಲ್ಲಿ ಇದ್ದ ಹೆಜ್ಜೇನು ಹುಳುಗಳು ಗಂಧದ ಕಡ್ಡಿಯಿಂದ ಬಂದ ಹೊಗೆಯ ಕಾರಣದಿಂದ ದಾಳಿ ನಡೆಸಿವೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದು ಘಟನೆಯಲ್ಲಿ ಯಾವುದೆ ಪ್ರಾಣಾಪಾಯ ಸಂಭವಿಸಿಲ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದ ಹಲವರು ನಂತರ ಮನೆಗೆ ತೆರಳಿದ್ದಾರೆ @publicnewskunigal