ಕುಣಿಗಲ್ ಸುದ್ದಿ;-ಜೆಡಿಎಸ್,ಕಾರ್ಯಕರ್ತರ ಮೇಲಿನ ಹಲ್ಲೆ ಖಂಡಿಸಿ ಚುನಾವಣೆ ಅಧಿಕಾರಿಗಳಿಗೆ ಮಾಜಿ DCM Dr.ಅಶ್ವತ್ಥನಾರಾಯಣ್|ನೆತೃತ್ವದಲ್ಲಿ ಜೆಡಿಎಸ್,ಹಾಗೂ ಬಿಜೆಪಿ ಮುಖಂಡರು ಮನವಿ ಸಲ್ಲಿಸಲಿದರು
ಕುಣಿಗಲ್ ಪಟ್ಟಣದ ಪೊಲೀಸ್ ಠಾಣೆಯ ಡಿವೈಎಸ್ಪಿ ಕಚೇರಿಗೆ ಶುಕ್ರವಾರ ಬಳಗ್ಗೆ ಮಾಜಿ ಉಪ ಮುಖ್ಯ ಮಂತ್ರಿ ಹಾಗೂ ಬೆಂಗಳೂರು ಗ್ರಾಮಾಂತರ ಲೊಕಸಭಾ ಕ್ಷೇತ್ರದ ಚುನಾವಣಾ ಉಸ್ತುವಾರಿಯಾಗಿರುವ ಡಾ,ಅಶ್ವತ್ಥನಾರಾಯಣ್ ಡಿವೈಎಸ್ಪಿ (DYSP) ಓಂ,ಪ್ರಕಾಶ್ ರವರನ್ನು ಬೇಟಿ ಮಾಡಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವವರ ಮೇಲೆ ಕಾನೂನು ಕ್ರಮ ಕೈಗೊಂಡು ಅವರನ್ನು ಕೂಡಲೆ ಬಂದಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ (DYSP) ಮೂಲಕ ಮನವಿ ಪತ್ರ ಸಲ್ಲಿಸಿದರು ಈ ವೇಳೆ ನೂರಾರು ಮಂದಿ ಕಾರ್ಯಕರ್ತರು ಪೊಲೀಸ್ ಠಾಣೆ ಎದುರು ಜಮಾಯಿಸಿದ್ದರು ಬಳಿಕ ತಾಲ್ಲೂಕು ಕಚೇರಿಗೆ ಬೇಟಿನೀಡಿ ಚುನಾವಣಾ ಅಧಿಕಾರಿಗಳಿಗೆ ತಹಶೀಲ್ದಾರ್ ಮೂಲಕ ಮನವಿ ಪತ್ರ ಸಲ್ಲಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಉಪ ಮುಖ್ಯ ಮಂತ್ರಿ ಡಾ,ಅಶ್ವತ್ಥನಾರಾಯಣ್ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ಡಾ,ಸಿ,ಎನ್ ಮಂಜುನಾಥ್ ಪರವಾಗಿ ಚುನಾವಣೆ ಮಾಡದಂತೆ ಇತ್ತಿಚೇಗೆ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮೇಲೆ ಕಾಂಗ್ರೆಸ್ ಅಭ್ಯರ್ಥಿ ಡಿ,ಕೆ ಸುರೇಶ್ ಬೆಂಬಲಿಗರಿಂದ ಮಾರಣಾಂತಿಕ ಹಲ್ಲೆಗಳು ನಡೆಯುತ್ತಿದ್ದರು ಚುನಾವಣಾ ಅಧಿಕಾರಿಗಳು ಮಾತ್ರ ಯಾವುದೆ ರೀತಿಯ ಕ್ರಮ ಕೈಗೊಂಡಿಲ್ಲ ಹಲ್ಲೆಗೆ ಒಳಗಾಗಿರುವವರು ಪೊಲೀಸರಿಗೆ ದೂರು ನೀಡಿದರೆ ಸಣ್ಣ ಪುಟ್ಟ ಸೆಕ್ಷನ್ ಗಳನ್ನು ಹಾಕಿ ಪೊಲೀಸರು ಏನೂ ಹಾಗಿಲ್ಲ ಎಂಬಂತೆ ಕೈ ತೋಳೆದುಕೊಳ್ಳುತ್ತಿದ್ದಾರೆ
ಕಾಂಗ್ರೆಸ್ ಅಭ್ಯರ್ಥಿ ಡಿ,ಕೆ ಸುರೇಶ್ ಸೋಲುವ ಭೀತಿಯಿಂದ ಕಾರ್ಯಕರ್ತರನ್ನು ಎತ್ತಿಕಟ್ಟಿ ಎನ್,ಡಿ,ಎ ಅಭ್ಯರ್ಥಿ ಡಾ,ಸಿ,ಎನ್,ಮಂಜುನಾಥ್ ಪರ ಚುನಾವಣೆ ಮಾಡುತ್ತಿರುವ ಜೆ,ಡಿ,ಎಸ್, ಹಾಗೂ ಬಿ,ಜೆ,ಪಿ ಮೈತ್ರಿ ಕಾರ್ಯಕರ್ತರನ್ನು ಟಾರ್ಗೆಟ್ ಮಾಡಿ ಹಲ್ಲೆ ನಡೆಸುತ್ತಿದ್ದಾರೆ ಕುಣಿಗಲ್ ತಾಲ್ಲೂಕಿನಲ್ಲಿ ಪೊಲೀಸರು ಹಾಗೂ ಅಧಿಕಾರಿಗಳು ಶಾಸಕರ ಹಾಗೂ ಸಂಸದರು ಕೈ ಗೊಂಬೆಗಳ ರೀತಿ ವರ್ತಿಸುತ್ತಿದ್ದಾರೆ ಚುನಾವಣೆ ಅಧಿಕಾರಿಗಳು ಪಾರದರ್ಶಕ ಚುನಾವಣೆ ಮಾಡುವ ನಿಟ್ಟಿನಲ್ಲಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿರುವವರನ್ನು ಕೂಡಲೆ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು
ಬಳಿಕ ಜೆಡಿಎಸ್ ಮುಖಂಡ ಡಿ,ರವಿಬಾಬು ಮಾತನಾಡಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಸಂಸದರು ಶಾಸಕರು ಸೋಲಿನ ಭೀತಿಯಿಂದ ಜೆಡಿಎಸ್ ಮತ್ತು ಬಿಜೆಪಿ ಮುಖಂಡರಿಗೆ ಭಯ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ ಕುಣಿಗಲ್ ನಲ್ಲಿ ಕನಕಪುರದ ಸಂಸ್ಕೃತಿಯನ್ನು ಹುಟ್ಟು ಹಾಕಲು ಹೊರಟಿದ್ದಾರೆ ಇವರ ಗೊಡ್ಡು ಬೆದರಿಕೆಗಳಿಗೆ ಕುಣಿಗಲ್ ತಾಲ್ಲೂಕಿನ ನಿಷ್ಟಾವಂತ ಕಾರ್ಯಕರ್ತರು ಹೆದರುವುದಿಲ್ಲ ಇದೆ ರೀತಿ ಮುಂದುವರಿದರೆ ಶಾಸರ ಶರ್ಟಿಗೆ ಕೈ ಹಾಕಬೇಕಾಗುತ್ತದೆ ಎಂದರು ಬಳಿಕ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಲ್ಲೆಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ಕೋತ್ತಗೆರೆ ಗ್ರಾಮದ ಜೆಡಿಎಸ್ ಕಾರ್ಯಕರ್ತ ಚಂದ್ರಯ್ಯ ನನ್ನು ಬೇಟಿ ಮಾಡಿ ಆರೋಗ್ಯ ವಿಚಾರಿಸಿ ಕುಟುಂಬದವರಿಗೆ ಸಾಂತ್ವನ ಹೇಳಿದರು ಈ ವೇಳೆ ಬಿಜೆಪಿ ಮುಖಂಡ ಡಿ,ಕೃಷ್ಣಕುಮಾರ್,ಜೆಡಿಎಸ್ ಮುಖಂಡ ಡಾ,ರವಿಬಾಬು,ಬಿ,ಎನ್ ಜಗದೀಶ್ ತರೀಕೆರೆ ಪ್ರಕಾಶ್,ಕೆ,ಎಲ್,ಹರೀಶ್ ಸೇರಿದಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು@publicnewskunigal