ಮೈತ್ರಿ ಸಮಾವೇಶದಲ್ಲಿ ಡಿ,ಕೆ ಬ್ರದರ್ಸ್‌ ವಿರುದ್ದ ಮಾಜಿ|CM H.D ಕುಮಾರಸ್ವಾಮಿ ವಾಗ್ದಾಳಿ! NDA ಅಭ್ಯರ್ಥಿ ಪರ ಪತ್ನಿ ಅನುಸೂಯಮ್ಮ ಮತ ಯಾಚನೆ,

Spread the love

ಏನೇ ತಿಪ್ಪುರ್ಲಾಗ ಹಾಕಿದ್ರು ಗೆಲ್ಲೋಕೆ ಆಗಲ್ಲ ಅವರ ಪಾಪದ ಕೊಡ ತುಂಬಿದೆ ಮೈತ್ರಿ ಸಮಾವೇಶದಲ್ಲಿ ಡಿ,ಕೆ ಬ್ರದರ್ಸ್‌ ವಿರುದ್ದ ಮಾಜಿ ಸಿಎಂ ಹೆಚ್,ಡಿ ಕುಮಾರಸ್ವಾಮಿ ವಾಗ್ದಾಳಿ! ಎನ್‌,ಡಿ,ಎ ಅಭ್ಯರ್ಥಿ ಪರ ಪತ್ನಿ ಅನುಸೂಯಮ್ಮ ಮತ ಯಾಚನೆ,

ಕುಣಿಗಲ್ ಪಟ್ಟಣದ ಜಿಕೆಬಿಎಂಎಸ್‌ ಮೈದಾನದಲ್ಲಿ ಬುಧವಾರ ನಡೆದ ಮೈತ್ರಿ ಸಮಾವೇಶದಲ್ಲಿ ಮಾಜಿ ಸಿಎಂ ಹೆಚ್,ಡಿ ಕುಮಾರಸ್ವಾಮಿ ಕಾರ್ಯಕ್ರಮ ಉದ್ಗಾಟಿಸಿ ಮಾತನಾಡಿ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಎನ್ ಡಿ ಎ ಅಭ್ಯರ್ಥಿ ಡಾ ಸಿಎನ್ ಮಂಜುನಾಥ್ ಪರ ಮತಯಾಚನೆಗೆ ಬಂದಿದ್ದೇವೆ‌ ಕಾರ್ಯಕ್ರಮಕ್ಕೆ ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ ಬೆಳಗ್ಗೆ 6 ಗಂಟೆಯಿಂದ ನಿರಂತರವಾಗಿ ಪ್ರಚಾರ ನಡೆಸುತ್ತಿದ್ದೇನೆ ನಾವು ಸಣ್ಣ ಮಕ್ಕಳಿಂದ ಕುಣಿಗಲ್ ಅನ್ನ ಗಮನಿಸಿಕೊಂಡು ಬಂದಿದ್ದೇವೆ 1983 ರಿಂದ ಕುಣಿಗಲ್ ಗೆ ನಮ್ಮ ಬಾಂಧವ್ಯ ಇದೆ.ನಾಗರಾಜಯ್ಯ ಹಾಗೂ ಕೃಷ್ಣಕುಮಾರ್ ಇಬ್ಬರು ಒಟ್ಟಾಗಿ ಇದಿದ್ರೆ.ಬೇರೆಯವರು ಇಲ್ಲಿಗೆ ಬರೊಕೆ ಸಾಧ್ಯನೇ ಇರಲಿಲ್ಲ

ತುಮಕೂರು ಜಿಲ್ಲೆಗೆ ತೆಂಗಿನ ಫ್ಯಾಕ್ಟರಿ, ಹೇಮಾವತಿ ನೀರಾವರಿ ವಿಚಾರದಲ್ಲಿ.ದೇವೆಗೌಡರ ಜೊತೆ ವೈ ಕೆ ರಾಮಯ್ಯ ಅವರ ಒಡನಾಟ ಸಾಕಷ್ಟಿದೆ.ದೇವೆಗೌಡರು ಈ ಭಾಗದಲ್ಲಿ ನೀರಾವರಿಗಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ.ಕಾಂಗ್ರೆಸ್ ನವರು ಎತ್ತಿನಹೊಳೆ ನೀರಾವರಿಯನ್ನ ಚಿಕ್ಕಬಳ್ಳಾಪುರ, ಕೋಲಾರಕ್ಕೆ ತರ್ತಿನಿ ಅಂದ್ರು. ಇನ್ನು ಅದು ಸಕಲೇಶಪುರದಲ್ಲೇ ನಿಂತಿದೆ.13 ಸಾವಿರ ಕೋಟಿ ಖರ್ಚು ಮಾಡಿದ್ದಾರೆ.ಎತ್ತಿನಹೊಳೆ ಯೋಜನೆ ಕಾಂಗ್ರೆಸ್ ನವರಿಗೆ ಹಾಲು ಕೊಡುವ ಹಸು ಇದ್ದ ಹಾಗೇ.ಮಹಾನ್ ನಾಯಕರು ಹೇಳ್ತಾರೆ.ನನಗೊಂದು ಪೇಪರ್ ಕೊಡಿ ಅಂತ ಕೇಳಿದ್ರು, ಪಾಪ ನೀವು ಕೊಟ್ರಿ.ಅದ್ರೆ ಈ ಭಾಗದಲ್ಲಿ ಅವರು ಪೇಪರ್ ಪೆನ್ನು ತಗೊಂಡು ಏನ್ ಮಾಡಿದ್ದಾರೆ.

ಮೇಕೆ ದಾಟು ಎಲ್ಲಿ ಹೋಯ್ತು ನಮ್ಮ ನೀರು ನಮ್ಮ ಹಕ್ಕು ಅಂದ್ರು ಅದು ಎಲ್ಲಿ ಹೋಯ್ತು ಇವತ್ತು ನಿಮ್ಮ ತೆರಿಗೆ ಹಣದಲ್ಲಿ ಜಾಹಿರಾತು ಕೊಡ್ತಿದ್ದಾರೆ.ನೀವು ಬೆಳಗ್ಗೆ ಎದ್ದು ಇವರ ಮುಖ ನೋಡಿಕೊಳ್ಳಬೇಕು ಆ ಸ್ಥಿತಿ ನಿರ್ಮಾಣ ಆಗಿದೆ 38 ಸಾವಿರ ಕೋಟಿ ಹೆಕ್ಟೇರ್ ಪ್ರದೇಶದಲ್ಲಿ ಬೇಳೆ ಹಾನಿ ಆದರೆ ರೆತರಿಗೆ ಹೆಕ್ಟೇರ್ ಗೆ 2000 ರೂಪಾಯಿ ನಿಡುತ್ತಿದ್ದಾರೆ ತಮಿಳುನಾಡಿಗೆ ಕಾವೇರಿ ನೀರು ಹರಿಸಿ ನಮ್ಮ ರಾಜ್ಯದ ರೈತರಿಗೆ ಬತ್ತ ಬೆಳೆಯಲು ನೀರು ನೀಡಿಲ್ಲ ಕಬ್ಬ ಇತರೆ ಬೇಳೆಗಳು ಒಣಗುತ್ತಿವೆ ಆದರೆ ರೈತರಿಗೆ ಬರಗಾಲಕ್ಕೆ ಕೊಟ್ಟಿದ್ದು ಕೇವಲ 600 ಕೋಟಿ ಸಾಕಾ..?ಕೇಂದ್ರ ಸರ್ಕಾರದ ಅಕ್ಕಿಯನ್ನ ನಾವು ಕೊಡ್ತಿವಿ ಅಂತಾರೆ.ಗ್ಯಾರಂಟಿ ಹೆಸರಿನ ಕಾರ್ಯಕ್ರಮದಲ್ಲಿ ಹಳ್ಳಿಯ ಭಾಗದ ತಾಯಂದಿರ ಹೆಸರಲ್ಲಿ ದುರುಪಯೋಗ ಮಾಡಿಕೊಳ್ತಿದ್ದಾರೆ.25 ರೂಪಾಯಿ ಇದ್ದ ಮದ್ಯ ಇವತ್ತು 250 ರುಪಾಯಿ ಆಗಿದೆ.ಹೆಂಡತಿಗೆ ಕೊಟ್ಟು ಗಂಡನ ಬಳಿ ಲೂಟಿ ಮಾಡ್ತಿದ್ದಾರೆ. ಗ್ಯಾರಂಟಿ ಯೋಜನೆಯಿಂದ 1 ಲಕ್ಷದ 5 ಸಾವಿರ ಕೋಟಿ ಸಾಲ ಮಾಡಿದ್ದಾರೆ ಅದನ್ನ ತಿರಿಸೋರು ಯಾರು.ಸಿದ್ದರಾಮಯ್ಯ ಹೇಳ್ತಾರೆ ರಾಜಕೀಯ ನಿವೃತ್ತಿ ಹೊಂದುತ್ತಿನಿ ನಾನು ಅಂತ.

ಹಾಗಾದ್ರೆ ಆ ಸಾಲದ ಹಣವನ್ನ ಯಾರು ಕಟ್ಟಬೇಕು.ರಾಹುಲ್ ಗಾಂಧಿ ಬೇರೆ ಒಂದು ಘೋಷಣೆ ಮಾಡಿದ್ದಾರೆ.ಕಾಂಗ್ರೆಸ್ ಸರ್ಕಾರ ಬಂದ್ರೆ ಖಾಲಿಯಿರುವ 31 ಲಕ್ಷ ಹುದ್ದೆಗಳನ್ನ ತುಂಬುತ್ತಿವೆ ಅಂತ ನಮ್ಮ ರಾಜ್ಯದಲ್ಲಿ 2 ವರೆ ಲಕ್ಷ ಹುದ್ದೆ ಖಾಲಿ ಇದೆ.ಮೊದಲು ಅದನ್ನ ಭರ್ತಿ ಮಾಡಿ ಜನ ನಿಮಗೆ ಅಧಿಕಾರ ಕೊಟ್ಟಿದ್ದಾರೆ.ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸಿ ಕಾಂಗ್ರೆಸ್ ಸರ್ಕಾರದಲ್ಲಿ ಒಂದೇ ಒಂದು ಹೊಸ ಯೋಜನೆ ಬರಲಿಲ್ಲ.ನೀರಾವರಿ ಯೋಜನೆ ಇಲ್ಲ ಇಂತಹ ಸರ್ಕಾರ ರಾಜ್ಯದಲ್ಲಿ ನಡಿತಿದೆ ಅಣ್ಣತಮ್ಮದಿಂರು ಹೇಳ್ತಾರೆ ಬೆಂಗಳೂರು ಗ್ರಾಮಾಂತರಕ್ಕೆ ನಾವು ಸಾಕಷ್ಟು ಅಭಿವೃದ್ಧಿ ಮಾಡಿದಿವಿ ಅಂತಾರೆ.ಏನ್ ಅಭಿವೃದ್ಧಿ ಮಾಡಿದ್ದಾರೆ.ಕಳೆದ 6 ತಿಂಗಳಿಂದ ಕುಕ್ಕರ್ ತವಾ ಹಂಚುತ್ತಿದ್ದಾರೆ.ಇದೇನಾ ನಿಮ್ಮ ಅಭಿವೃದ್ಧಿ ಎಲೆಕ್ಷನ್ ನಲ್ಲಿ ಕಾರ್ಡ್ ಕೊಟ್ಟು ಆಮಿಷವೊಡ್ಡಿ ಟೋಫಿ ಹಾಕಿದ ಗಿರಾಕಿಗಳು ನೀವು.

ಜನ ನೀವು ತಿರ್ಮಾನ ಮಾಡಿ.ಅವರು ಬಂದಾಗ ಮುಖಕ್ಕೆ ಉಗಿದು ಕೇಳಿ ಡಾಕ್ಟರ್ ಮಂಜುನಾಥ್ ಬಗ್ಗೆ ಲಘುವಾಗಿ ಮಾತನಾಡೋದು‌.ಮಂಜುನಾಥ್ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಹಾವಭಾವಗಳನ್ನ ತಿಳಿದುಕೊಳ್ಳೋವತ್ತಿಗೆ ಅವರ ಆಯುಷ್ ಮುಗಿಯುತ್ತೆ ಅಂತ ಹೇಳಿದ ಮಹಾನುಭಾವ ಮಾಗಡಿ ಶಾಸಕ.ಬಡವರಿಗೆ ಉಚಿತ ಚಿಕಿತ್ಸೆ ಮಾಡಿದ್ದಾರೆ.ಮೋದಿ ಅವರ ಮಾರ್ಗದರ್ಶನದಲ್ಲಿ ಅವರನ್ನ ಕಳುಹಿಸಿಕೊಡಿ ಇಡೀ ದೇಶಕ್ಕೆ ಉಪಯೋಗ ಆಗುತ್ತೆ.ಈಗ ನಿಮಗೆ ಒಳ್ಳೆಯ ಅಭ್ಯರ್ಥಿ ಕೊಟ್ಟಿದಿವಿ ಅವರು ಏನೇ ತಿಪ್ಪುರ್ಲಾಗ ಹಾಕಿದ್ರು ಗೆಲ್ಲೋಕೆ ಆಗಲ್ಲ ಹೊಸ ಶಕೆ ಇಲ್ಲಿ ಆರಂಭ ಆಗುತ್ತೆ.ಅವರ ಪಾಪದ ಕೊಡ ತುಂಬಿದೆ ನಿವೆಲ್ಲ ನಮಗೆ ನಮ್ಮ ಮನೆಯ ಮಕ್ಕಳು ಬಂದಿದ್ದಾರೆ ಅಂತ ಪ್ರೀತಿ ಕೊಟ್ಟು ಗೌರವಿಸಿದ್ದಿರಾ ನಾವು ಕೆಲ ತಪ್ಪು ಮಾಡಿಕೊಂಡಿದ್ದೀವಿ.ಅದನ್ನ ಸರಿಪಡಿಸಿಕೊಳ್ತಿವಿ‌

ಮಂಜುನಾಥ್ ಅವರ ಗುರುತು ಒಂದು.ಕಮಲದ ಗುರುತಿಗೆ ಮತ ನೀಡಿ.ಉತ್ತಮವಾದ ವ್ಯಕ್ತಿಯನ್ನ ಗೆಲ್ಲಿಸಿ ನಿಮ್ಮ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದರು ಬಳಿಕ ಡಾ,ಸಿ,ಎನ್ ಮಂಜುನಾಥ್‌ ಪತ್ನಿ ಅನುಸೂಯಮ್ಮ ಮಾತಾನಾಡಿ ಮಂಜುನಾಥ್ ಅವರಿಗೆ ಕಾಕತಾಳಿಯಂತೆ ರಾಜಕೀಯ ಬಂದು ಒದಗಿದೆ.ಇಲ್ಲಿ ಪಕ್ಷಾತೀತವಾಗಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಬೇಕು ಎರಡು ನದಿಗಳು ಒಟ್ಟಾಗಿ ಸಂಗಮವಾಗಿ ಹರಿಯುವ ಹಾಗೆ ಇರಲಿ ಮಂಜುನಾಥ್ ಅವರನ್ನ ಬಹುಮತಗಳ ಅಂತದರದಲ್ಲಿ ಗೆಲ್ಲಿಸಿ ದಯವಿಟ್ಟು ಮಂಜುನಾಥ್ ಅವರು ನಿರ್ದೇಶಕರಾಗಿ ಮಾಡಿದ ಸೇವೆಯನ್ನ ನಿಮ್ಮ ಮುಂದಿಟ್ಟುಕೊಂಡು ಬಂದಿದ್ದೇವೆ ಅವರಿಗೆ ಮತ ಕೊಡಿ ಎಂದರು ಕಾರ್ಯಕ್ರಮದಲ್ಲಿ ಮಾಜಿ ಡಿಸಿಎಂ ಅಶ್ವಥ್ಥನಾರಾಯಣ್‌,ಮಾಜಿ ಸಚಿವ ಡಿ,ನಾಗರಾಜಯ್ಯ,ಡಾ,ಸಿ,ಎನ್‌ ಮಂಜುನಾಥ್‌ ಪತ್ನಿ ಅನುಸೂಯ,ನೀಖಿಲ್‌ ಕುಮಾರ್‌ ಸ್ವಾಮಿ,ಮುಖಂಡ ಡಿ,ಕೃಷ್ಣಕುಮಾರ್‌,ಮಾಜಿ ಶಾಸಕ ಹೆಚ್‌ ನಿಂಗಪ್ಪ,ಡಾ,ರವಿಬಾಬು,ಜಗದೀಶ್‌,ಸೇರಿದಂತೆ ಹಲವು ಮುಖಂಡರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು @publicnewskunigal