ನಮ್ಮ ದೇಶದ ಪ್ರಧಾನಮಂತ್ರಿ ಹಾಗುವ ಅರ್ಹತೆ ಇರುವುದು ನರೇಂದ್ರ ಮೋದಿ ಅವರಿಗೆ ಮಾತ್ರ ಮಾಜಿ ಪ್ರಧಾನಿ ಹೆಚ್,ಡಿ ದೇವೇಗೌಡ ಹೇಳಿಕೆ!

Spread the love

ಕುಣಿಗಲ್ ಸುದ್ದಿ;-ನಮ್ಮ ಭಾರತ ದೇಶದ ಪ್ರಧಾನಮಂತ್ರಿ ಹಾಗುವ ಅರ್ಹತೆ ಇರುವುದು ನರೇಂದ್ರ ಮೋದಿ ಅವರಿಗೆ ಮಾತ್ರ ಮಾಜಿ ಪ್ರಧಾನಿ ಹೆಚ್,ಡಿ ದೇವೇಗೌಡ ಹೇಳಿಕೆ!

ಬೆಂಗಳೂರು ಗ್ರಾಮಾಂತರ ಲೋಕಸಭಾ ಅಭ್ಯರ್ಥಿ  ಡಾ,ಸಿ.ಎನ್ ಮಂಜುನಾಥ್ ಅವರ ಪರವಾಗಿ ಮತ ಯಾಚನೆ ಮಾಡುವ ಸಲುವಾಗಿ ಕುಣಿಗಲ್ ತಾಲ್ಲೂಕಿನ ಜೋಡಿಹೊಸಹಳ್ಳಿ ಗ್ರಾಮಕ್ಕೆ ಮಂಗಳವಾರ ಸಂಜೆ ಆಗಮಿಸಿದ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠಾ ಎಚ್,ಡಿ ದೇವೇಗೌಡರು ಗ್ರಾಮದ ಶ್ರೀ ಲಕ್ಷ್ಮಿ ದೇವಾಲಯಕ್ಕೆ ಬೇಟಿ ನೀಡಿ ಪೂಜೆ ಸಲ್ಲಿಸಿ ಬಳಿಕ ಕಾರ್ಯಕರ್ತರನ್ನು ಉದ್ದೇಶಿಸ ಮಾತನಾಡಿ ಅವರು ಬೆಂಗಳೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮತಯಾಚನೆ ಮಾಡಲು ಹೋದ ಎಲ್ಲಾ ಕಡೆಗಳಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಉತ್ತಮ ಅಭ್ಯರ್ಥಿಯನ್ನು ನಿಲ್ಲಿಸಿದ್ದೀರಿ ಇಂತಹ ಪ್ರಾಮಾಣಿಕ ವ್ಯಕ್ತಿಗೆ ನಾವು ಮತ ಹಾಕುತ್ತೇವೆ ಇವರನ್ನು ಲೋಕಸಭೆಗೆ ಕಳುಹಿಸುತ್ತೇವೆ ಎಂದು ಈ ಕ್ಷೇತ್ರದ ಮತದಾರರು ನನಗೆ ಹೇಳುತ್ತಿದ್ದಾರೆ ಎಂದರು

ನಾನು ಪ್ರಧಾನಮಂತ್ರಿಯಾಗಿದ್ದಾಗ ಒಂದು ವರ್ಷ 20 ದಿವಸ ಅಧಿಕಾರದಲ್ಲಿದ್ದೆ ಆಗ ನನ್ನನ್ನು ಕೆಳಗಿಳಿಸಿದ್ದು ಈ ಕೆಟ್ಟ ಕಾಂಗ್ರೆಸ್ ಪಕ್ಷ ನಂತರ ಅಟಲ್ ಬಿಹಾರಿ ವಾಜಪೇಯಿ ಅವರು ನಾವು ನಿಮಗೆ ಬೆಂಬಲ ನೀಡುತ್ತೇವೆ ಅಧಿಕಾರದಲ್ಲಿ ಮುಂದುವರೆಯಲಿ ಎಂದು ಆದರೂ ನಾನು ರಾಜೀನಾಮೆ ನೀಡಿದ್ದೇನೆ 2014ರಲ್ಲಿ ನರೇಂದ್ರ ಮೋದಿಯವರು ದೇಶದ ಚುಕ್ಕಾಣಿ ಹಿಡಿದಾಗ ದೇಶದ ಆರ್ಥಿಕ ಸ್ಥಿತಿ ಕೆಟ್ಟದಾಗಿತ್ತು

ನಂತರ ಉತ್ತಮ ಸರ್ಕಾರ ನಡೆಸಿ ದೇಶದ ಗೌರವದ ಜೊತೆ ಜನರ ಹಿತವನ್ನು ಕಾಪಾಡಿಕೊಂಡು ಹತ್ತು ವರ್ಷದಲ್ಲಿ ನರೇಂದ್ರ ಮೋದಿ ಸರ್ಕಾರ ಉತ್ತಮ ಆಡಳಿತ ನಡೆಸಿದೆ ಕಾಂಗ್ರೆಸ್ ಅವರಿಗೆ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡುವ ನೈತಿಕ ಹಕ್ಕು ಇಲ್ಲ ಕಾಂಗ್ರೆಸ್ ದೇಶದಲ್ಲಿ ಮೂರು ರಾಜ್ಯದಲ್ಲಿ ಮಾತ್ರ ಅಧಿಕಾರದಲ್ಲಿದೆ ಅದೇ ನರೇಂದ್ರ ಮೋದಿಯವರ ಸರ್ಕಾರ 18 ರಾಜ್ಯದಲ್ಲಿದೆ ಮೋದಿ ಅವರನ್ನು ಬಿಟ್ಟರೆ ದೇಶದಲ್ಲಿ ಮತ್ತೆ ಯಾರಿಗೂ ಪ್ರಧಾನಿ ಹಾಗುವ ಯಾವ ಅರ್ಹತೆ ಇಲ್ಲ ದೇಶ ಸಂಕಷ್ಟದಲ್ಲಿ ಇದ್ದ ಸಮಯದಲ್ಲಿ ಮೋದಿ ದೇಶದ ಅಧಿಕಾರ ಚುಕ್ಕಾಣಿ ಹಿಡಿದು ಪ್ರಪಂಚದಲ್ಲಿ ಆರ್ಥಿಕವಾಗಿ ಸದೃಢವಾಗಿರುವ 5ನೇ ದೇಶ ಮಾಡಿದ್ದಾರೆ ಮಾಜಿ ಪ್ರಧಾನಿ ಕಾಂಗ್ರೆಸ್ ನಾಯಕ ಮನಮೋಹನ್ ಸಿಂಗ್ ಅವರು ಜವಹರಲಾಲ್ ನೆಹರು ಇಂದಿರಾಗಾಂಧಿ ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷತೆಯ ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಕಾಂಗ್ರೆಸ್ ಪಕ್ಷ ದೇಶದ ಜನರ ಹಿತ ಕಾಪಾಡುವಲ್ಲಿ 60 ವರ್ಷ ಆಡಳಿತ ನಡೆಸಿದರು

ವಿಫಲವಾಗಿದೆ ಎಂದಿದ್ದಾರೆ ಈ ಕ್ಷೇತ್ರದ ಜನ ದುಡ್ಡು ಮತ್ತು ಯಾವುದೇ ಆಮಿಷಗಳಿಗೆ ಒಳಗಾಾಗದೆ ಎನ್,ಡಿ,ಎ ಅಭ್ಯರ್ಥಿ ಡಾ,ಸಿ.ಎನ್ ಮಂಜುನಾಥ್ ರವರಿಗೆ ಮತ ನೀಡಿ ನಿಮ್ಮ ಸೇವೆ ಮಾಡುವ ಅವಕಾಶ ನೀಡಿ ಎಂದರು ಬಳಿಕ ಮಾತನಾಡಿದ ಬಿ,ಜೆ,ಪಿ ಮುುುಖಂಡ ಡಿ,ಕೃಷ್ಣಕುಮಾರ್ ಅವರು ಮಾತನಾಡಿ ಕಾಂಗ್ರೆಸ್ ಪಕ್ಷದವರು ನನ್ನನ್ನು ಎಂಎಲ್ಸಿ ಮಾಡುತ್ತೇನೆ ಎಂದು ಅಪಪ್ರಚಾರ ಮಾಡಿ ನಾನು ಕಾಂಗ್ರೆಸ್ ಸೇರ್ಪಡೆಗೊಳ್ಳುತ್ತೇನೆ ಎಂದು ಹೇಳಿರುತ್ತಾರೆ ಯಾವುದೇ ಕಾರಣಕ್ಕೂ ನಾನು ಹಾಕೋ ಚಪ್ಪಲಿಯೂ ಸಹ ಅವರ ಮನೆ ಭಾಗಿಲಿಗೆ ಹೋಗುವುದಿಲ್ಲ ನನ್ನ ಕ್ಷೇತ್ರದ ಕಾರ್ಯಕರ್ತರಿಗೆ ನಾನು ಮೋಸ ಮಾಡುವುದಿಲ್ಲ ಎಂದರು ಹುಲಿಯೂರುದುರ್ಗ, ಅಮೃತೂರು ಸೆರಿದಂತೆ ತಾಲ್ಲೂಕಿನ ಹಲವು ಕಡೆಗಳಲ್ಲಿ ಪ್ರಚಾರ ನಡೆಸಿದರು ಈ ವೇಳೆ ಕಾರ್ಯಕ್ರದಲ್ಲಿ ಡಾ,ರವಿಬಾಬು,ವೈಎಚ್,ಹುಚ್ಚಯ್ಯ, ತರೀಕೆರೆ ಪ್ರಕಾಶ್, ಕೆ.ಎಲ್ ಹರೀಶ್, ಶಿವಣ್ಣ, ಧನಂಜಯ ಸೆರಿದಂತೆ ಹಲವರು ಉಪಸ್ಥಿತರಿದ್ಧರು@publicnewskunigal