ಉಲ್ಲಾಳಬೆಟ್ಟ ಅರಣ್ಯ ಪ್ರದೇಶದಲ್ಲಿ ವ್ಯಕ್ತಿಯ ಶವ ಪತ್ತೆ ಪ್ರಕರಣ ಕೊಲೆ ಆರೋಪಿಗಳ ಬಂಧನ!
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಲಕ್ಷ್ಮಿಪುರ ಬಳಿ ಇರುವ ಉಲ್ಲಾಳಬೆಟ್ಟ ಅರಣ್ಯ ಪ್ರದೇಶದಲ್ಲಿ ಬುಧವಾರ ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿಯೊರ್ವನ ಮೃತ ದೇಹ ಪತ್ತೆಯಾಗಿತ್ತು ಪ್ರಕರಣದ ಬೆನ್ನು ಹತ್ತಿದ ಹುಲಿಯೂರುದುರ್ಗ ಪೊಲೀಸರು 24 ಗಂಟೆ ಒಳಗೆ ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ತಾಲ್ಲೂಕಿನ ಲಕ್ಷ್ಮಿಪುರ ಗ್ರಾಮದ ಶಂಕರ (30) ಹಾಗೂ ಬುದಾನಹಳ್ಳಿ ಗ್ರಾಮದ ನಾಗೇಶ್ (32) ಬಂಧಿತ ಆರೋಪಿಗಳು ಕ್ಷುಲ್ಲಕ ಕಾರಣಕ್ಕಾಗಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ
ಕೊಲೆಯಾದ ಪ್ರದೀಪ್ ಮತ್ತು ಕೊಲೆ ಮಾಡಿದ ಶಂಕರ ಮತ್ತು ನಾಗೇಶ್ ಸ್ನೇಹಿತರು ಎಲ್ಲರು ಒಟ್ಟಿಗೆ ಸೇರಿ ಮಧ್ಯ ಸೇವನೆ ಮಾಡಿದ ನಂತರ ಕೊಲೆಯಾದ ಪ್ರದೀಪ್ ಸ್ನೇಹಿತರಿಬ್ಬರನ್ನು ಮಧ್ಯಸೇವನೆ ಬಳಿಕ ದುರ್ವರ್ತನೆ ತೊರಿ ಮನಬಂದಂತೆ ನಡೆಸಿಕೊಳ್ಳುತಿದ್ದ ಎಂಬ ಕಾರಣಕ್ಕೆ ಕೋಪಗೊಂಡ ಶಂಕರ ಮತ್ತು ನಾಗೇಶ್ ಮೇ 27 ಸೋಮವಾರ ಪ್ರದೀಪ್ ನನ್ನು ಕರೆದುಕೊಂಡು ಹುಲಿಯೂರುದುರ್ಗ ಪಟ್ಟಣದ ಕೊಡವತ್ತಿ ರಸ್ತೆಯಲ್ಲಿರುವ ದರ್ಶಿತ್ ಬಾರ್ ನಲ್ಲಿ ಮಧ್ಯವನ್ನು ತೆಗೆದುಕೊಂಡು ಉಲ್ಲಾಳಬೆಟ್ಟ ಅರಣ್ಯ ಪ್ರದೇಶಕ್ಕೆ ತೆರಳಿ ಪ್ರದೀಪ್ ನೀಗೆ ಕಂಠ ಪೂರ್ತಿ ಕುಡಿಸಿ ನಂತರ ಅವನ ಕುತ್ತಿಗೆಯಲ್ಲಿದ್ದ ಟವೆಲ್ ನಿಂದ ಕುತ್ತಿಗೆ ಬೀಗಿದು ಕೆಳಗೆ ಕುಸಿದು ಬಿದ್ದ ನಂತರ ಅವನ ತಲೆಯ ಮೇಲೆ ಕಲ್ಲನ್ನು ಎತ್ತಿಹಾಕಿ ಕೊಲೆ ಮಾಡಿ ಬಳಿಕ ಗ್ರಾಮಕ್ಕೆ ಬಂದು ಏನು ಕಾಣದವರಂತೆ ಇದ್ದರು ಇತ್ತ ಕೊಲೆ ಪ್ರಕರಣ ದಾಖಲಿಸಿಕೊಂಡ ಹುಲಿಯೂರುದುರ್ಗ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾರ್ಗದರ್ಶನದಲ್ಲಿ ಅಮೃತೂರು ಸಿ,ಪಿ,ಐ ಮಾಧ್ಯನಾಯಕ್ ನೆತೃತ್ವದ ಪೊಲೀಸರ ತಂಡ ಅರಣ್ಯ ಪ್ರದೇಶದಲ್ಲಿ ಮೃತ ದೇಹ ಪತ್ತೆಯಾದ 24 ಗಂಟೆಯ ಒಳಗೆ ಪ್ರಕರಣವನ್ನು ಬೇದಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ @publicnewskunigal