ಕಾರಿನಿಂದ ಬೈಕ್‌ಗೆ ಗುದ್ದಿ ಯುವಕನನ್ನು ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಲು ಹೊರಟಿದ್ದವರ ಬಂಧನ!
ಕುಣಿಗಲ್ ತಾಲ್ಲೂಕಿನ ಕೊತ್ತಗೆರೆ ಹೋಬಳಿ ಬಾಗೇನಹಳ್ಳಿ ಗ್ರಾಮದ ರಾಮಚಂದ್ರ (27) ಅಪಘಾತ ಪ್ರಕರಣವನ್ನು ಕುಣಿಗಲ್ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದು ಆರೋಪಿಗಳನ್ನು ಬಂಧಿಸಿ ಕೊಲೆ ಪ್ರಕರಣಕ್ಕೆ ದಾಖಲಿಸಿರುವ ಘಟನೆ ನಡೆದಿದೆ ತಾಲ್ಲೂಕಿನ ಕೊತ್ತಗೆರೆ ಪಾಳ್ಯದ ಸೀನಾ ಅಲಿಯಾಸ್ ಶ್ರೀನಿವಾಸ್ (34)ಉಮೇಶ (32) ಚನ್ನಪ್ಪಗೌಡನಪಾಳ್ಯದ ಗುರುರಾಜ್ (40) ಬಿದನಗೆರೆ ಗ್ರಾಮದ ಶಿವರಾಮ್ (38) ಸೊಬಗಾನಹಳ್ಳಿ ಗ್ರಾಮದ ಲಕ್ಷ್ಮಣ (36) ಬಂಧಿತ ಆರೋಪಿಗಳು
ಹತ್ಯೆಗೀಡಾಗಿದ್ದ ಬಾಗೇನಹಳ್ಳಿ ಗ್ರಾಮದ ರಾಮಚಂದ್ರ ಜೂನ್ 10 ಸೋಮವಾರ ಕೆಲಸದ ನಿಮಿತ್ತ ಕುಣಿಗಲ್ ಪಟ್ಟಣಕ್ಕೆ ಬಂದು ಬಳಿಕ ತನ್ನ ಗ್ರಾಮಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ರಾಜ್ಯ ಹೆದ್ದಾರಿ 33ರ ತುಮಕೂರು ರಸ್ತೆಯ ಬಾಗೇನಹಳ್ಳಿ ಗೇಟ್ ಬಳಿ 4-30ರ ಸಮಯದಲ್ಲಿ ಶ್ರೀನಿವಾಸ್ ಹಾಗೂ ಆತನ ಸಹಚರರು ಕಾರಿನಲ್ಲಿ ಬಂದು ರಾಮಚಂದ್ರ ತೆರಳುತ್ತಿದ್ದ ಬೈಕ್ ನ ಹಿಂಬದಿಗೆ ಡಿಕ್ಕಿ ಹೊಡೆದು ಕೆಳಗೆ ಬಿದ್ದ ರಾಮಚಂದ್ರನ ಮೇಲೆ ಕಾರು ಹತ್ತಿಸಿ ಕೊಲೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದರು ಕಳೆದ ಎರಡು ವರ್ಷಗಳ ಹಿಂದೆ ಶ್ರೀನಿವಾಸನಿಗೆ ರಾಮಚಂದ್ರ ಚಾಕುವಿನಿಂದ ಹಲ್ಲೆ ಮಾಡಿದ್ದ, ಈ ಸಂಬಂಧ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಇದಾದ ಬಳಿಕ ಹಲವು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಕಾರಣ ರಾಮಚಂದ್ರ ನ ಮೇಲೆ ಕುಣಿಗಲ್ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ತೆರೆಯಲಾಗಿತ್ತು ನಂತರ ರಾಮಚಂದ್ರ ಹಾಗೂ ಶ್ರೀನಿವಾಸನು ಇಬ್ಬರು ಯಾವುದೇ ಗಲಾಟೆಗೆ ಹೋಗದೆ ಗ್ರಾಮದಲ್ಲಿ ವಾಸಿಸುತ್ತಿದ್ದರು ಈ ಮಧ್ಯೆ ರಾಮಚಂದ್ರ ಮತ್ತೆ ಶ್ರೀನಿವಾಸನನ್ನು ಕೊಲೆ ಮಾಡುವುದಾಗಿ ಸ್ನೇಹಿತರು ಬಳಿ ಹೇಳಿಕೊಂಡು ಹೊಡಾಡುತ್ತಿದ್ದ ಎನ್ನಲಾಗಿದೆವಿಚಾರ ತಿಳಿದ ಶ್ರೀನಿವಾಸನು ರಾಮಚಂದ್ರನನ್ನು ಮುಗಿಸಲೇ ಬೇಕೆಂದು ಸಂಚು ರೂಪಿಸಿ ನಾಲ್ಕು ಮಂದಿ ಸ್ನೇಹಿತರನ್ನು ಸೇರಿಕೊಂಡು ಯಾರಿಗೂ ಅನುಮಾನ ಭಾರದ ರೀತಿಯಲ್ಲಿ ರಸ್ತೆ ಅಪಘಾತ ಎಂಬಂತೆ ಬಿಂಬಿತವಾಗುವ ರೀತಿಯಲ್ಲಿ ಕೊಲೆ ಮಾಡಿದ್ದರು ಎಂದು ತಿಳಿದು ಬಂದಿದೆ ಈ ಸಂಬಂಧ
ಕುಣಿಗಲ್ ಪೊಲೀಸ್ ಠಾಣೆಯಲ್ಲಿ ಅಪರಿಚಿತ ಕಾರು ಬೈಕ್ ಗೆ ಡಿಕ್ಕಿ ಹೊಡೆದು, ರಾಮಚಂದ್ರ ಅವರು ಸಾವನಪ್ಪಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು ಬಳಿಕ ಕುಟುಂಬಸ್ಥರು ತನಿಖೆ ವೇಳೆ ಸಂಶಯ ವ್ಯಕ್ತಪಡಿಸಿದರು ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ,ವಿ ಅಶೋಕ್,ಎಎಸ್ಪಿ ಮರಿಯಪ್ಪ,ಡಿವೈಎಸ್‌ಪಿ ಓಂಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ನವೀನ್‌ಗೌಡ ನೇತೃತ್ವದ ಪೊಲೀಸರ ತಂಡ ಪ್ರಕರಣವನ್ನು ಭೇದಿಸಿದಾಗ ಹಳೇಯ ದ್ವೇಷದ ಕಾರಣದಿಂದ ರಾಮಚಂದ್ರನ್ನು ಕಾರಿನಿಂದ ಗುದ್ದಿ ಕೊಲೆ ಮಾಡಲಾಗಿದೆ ಎಂದು ಬೆಳಕಿಗೆ ಬಂದಿದ್ದು ಐವರು ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ,@publicnewskunigal