ಪಟ್ಟಣದಲ್ಲಿ ಅಕ್ರಮವಾಗಿ ಪುಟ್ಬಾತ್ ಒತ್ತುವರಿ ಮಾಡಿ ಶೇಡ್ ನಿರ್ಮಾಣ ಕ್ರಮ ಕೈಗೊಳ್ಳದ ಅಧಿಕಾರಿಗಳು!

Spread the love

ಪಟ್ಟಣದ ತುಮಕೂರು ರಸ್ತೆಯ ಚರ್ಚ್ ಬಳಿ ಯಾವುದೆ ಅನುಮತಿಯಿಲ್ಲದೆ ಅಕ್ರಮವಾಗಿ ಪುಟ್ಬಾತ್ ಮೇಲೆ ಶೇಡ್ ನಿರ್ಮಾಣ ಮಾಡುತ್ತಿರುವುದು!

ಕುಣಿಗಲ್;-ಪಟ್ಟಣದ ಪುರಸಭೆಯ ಅಧಿಕಾರಿಗಳ ನಿರ್ಲಕ್ಷ್ಯ ಕಾರಣದಿಂದಾಗಿ ಪಟ್ಟಣದಲ್ಲಿ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿ ಎಲ್ಲೆಂದರಲ್ಲಿ ಅಕ್ರಮವಾಗಿ ಕಟ್ಟಡ ಹಾಗೂ ಪೆಟ್ಟಿ ಅಂಗಡಿಗಳನ್ನು ನಿರ್ಮಾಣ ಮಾಡಲಾಗುತ್ತಿದ್ದೆ ಇಷ್ಟೆಲ್ಲ ಘಟನೆ ನಡೆದರು ಸಹ ಪುರಸಭೆಯ ಅಧಿಕಾರಿಗಳು ಯಾವುದೆ ರೀತಿಯ ಕ್ರಮ ಕೈಗೊಂಡಿಲ್ಲ ಹಲವು ಭಾರಿ ಸಾರ್ವಜನಿಕರಿಂದ ದೂರುಗಳು ಬಂದರು ಸಹ ಅಧಿಕಾರಿಗಳು ಮಾತ್ರ ಸಮಸ್ಯೆಗಳತ್ತ ಕಣ್ಣೆತ್ತಿಯು ಸಹ ನೊಡುತ್ತಿಲ್ಲ

ಶಾಲಾ ಕಾಲೆಜುಗಳು ಪ್ರಾರಂಭವಾಗಿ ಎರಡು ತಿಂಗಳು ಕಳೆದಿದೆ ಆದರೆ ಪುಟ್ಬಾತ್ ಒತ್ತುವರಿ ತೆರವು ಮಾಡುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಕಳೆದ ಎರಡು ವರ್ಷಗಳಿಂದ ಪುಟ್ಬಾತ್ ಒತ್ತುವರಿ ಸಂಬಂಧ ಹಲವು ಭಾರಿ ಪುರಸಭೆ ಅಧಿಕಾರಿಗಳು,ಪೊಲೀಸರು,ತಹಶೀಲ್ದಾರ ಸೆರಿದಂತೆಉಪ ವಿಭಾಗಧಿಕಾರಿಗಳ ಸಮ್ಮುಖದಲ್ಲಿ(meeting) ಸಭೆ ನಡೆಸಿದ್ದರು ಸಹ ಇದುವರೆಗೂ ಕಾರ್ಯರೂಪಕ್ಕೆ ಬಂದಿಲ್ಲ ಈ ಬಗ್ಗೆ ಸಾಮಾಜಿಕ ಕಳಕಳಿಯುಳ್ಳ ಕೆಲವು ನಾಗರೀಕರು ನ್ಯಾಯಲಯದ ಮೆಟ್ಟಿಲೆರಿದ್ದರೆ ಇನ್ನೂ ಕೆಲವರು ಲೋಕಯುಕ್ತದಲ್ಲು ಸಹ ದೂರು ದಾಖಲಿಸಿದ್ದಾರೆ ಇನ್ನೂ ವಿಚಾರಣೆ ವೇಳೆ ನ್ಯಾಯಧೀಶರು ಹಾಗೂ ಲೋಕಯುಕ್ತ ಅಧಿಕಾರಿಗಳು ಪುರಸಭೆಯ ಅಧಿಕಾರಿಗಳನ್ನು ಕರೆದು ಚೀಮಾರಿ ಹಾಕಿದ್ದರು ಸಹ ಮಾನಗೇಡಿ ಅಧಿಕಾರಿಗಳು ಮಾತ್ರ ಎಲ್ಲವನ್ನು ಮಾರಿಕೊಂಡಂತೆ ಕಾಣುತ್ತಿದೆ,

ಪಟ್ಟಣದಲ್ಲಿ ಒಡಾಡಲು ಸಾರ್ವಜನಿಕರಿಗೆ ಪುಟ್ಬಾತ್ ರಸ್ತೆ ಇಲ್ಲದಂತಾಗಿದ್ದು ನಾಗರೀಕರು ವಿದ್ಯಾರ್ಥಿಗಳು ಪುರಸಭೆ ಹಾಗೂ ತಾಲ್ಲೂಕು ಆಡಳಿತಕ್ಕೆ ಹಿಡಿಶಾಪ ಹಾಕುತ್ತಿದ್ದರು ಸಹ ದಪ್ಪ ಚರ್ಮದ ಅಧಿಕಾರಿಗಳು ಮಾತ್ರ ಸಾರ್ವಜನಿಕರ ಸಮಸ್ಯೆ ಬಗ್ಗೆ ಗಮನ ಹರಿಸುವ ಬದಲು ಕಚೇರಿಗೆ ಸೀಮಿತವಾಗಿ ಕಾಲ ಕಳೆಯುತ್ತಿದ್ದಾರೆ ಇನ್ನದರು ಸಂಬಂಧ ಪಟ್ಟ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ಇತ್ತ ಗಮನ ಹರಿಸಿ ಪಟ್ಟಣದ ಪಾದಚಾರಿ ಮಾರ್ಗಗಳ ಹಾಗೂ ಟ್ರಾಫಿಕ್ ಸಮಸ್ಯೆ ಬಗ್ಗೆ ಗಮನ ಹರಿಸಬೆಕೆಂಬುದು ಸಾರ್ವಜನಿಕರ ಒತ್ತಯವಾಗಿದೆ @publicnewskunigal