ಮಧುವೆಗೆ ನಿರಾಕರಿಸಿದ ಮಂಗಳಮುಖಿಗೆ ಚಾಕು ಇರಿದ ಆರೋಪಿ ಪೊಲೀಸರ ವಶಕ್ಕೆ!

Spread the love

ಮದುವೆಯಾಗಲು ನಿರಾಕರಿಸಿದ ಮಂಗಳಮುಖಿಗೆ ಪಟ್ಟಣದ ಗ್ರಾಮದೇವತೆ ಸರ್ಕಲ್ ಬಳಿ ಚಾಕು ಇರಿದ ಆರೋಪಿ ಪೊಲೀಸರ ವಶಕ್ಕೆ!

KUNIGAL- ಮದುವೆಯಾಗಲು ನಿರಾಕರಿಸಿದ ಕಾರಣ ಮಂಗಳಮುಖಿಗೆ ಪ್ರೇಮಿಯೋರ್ವ ಚಾಕುವಿನಿಂದ ಇರಿದು ಕೊಲೆಗೆ ಯತ್ನಿಸಿರುವ ಘಟನೆ ಕುಣಿಗಲ್ ಪಟ್ಟಣದಲ್ಲಿ ಬುಧವಾರ ಸಂಜೆ 8 ಗಂಟೆ ಸಮಯದಲ್ಲಿ ನಡೆದಿದೆ ಪಟ್ಟಣದ ಕೋಟೆ ಪ್ರದೇಶದ ಮಹಮದ್ ಆಲೀಸಾ ಖಾದ್ರಿ ಅಲಿಯಾಸ್ ಹನೀಶಾ (21) ಪ್ರಿಯಕರನಿಂದ ಚಾಕು ಇರಿತಕ್ಕೆ ಒಳಗಾದ ಮಂಗಳಮುಖಿ (ಪ್ರೇಯಸಿ) ಮಂಡ್ಯ ಮೂಲದ ಆದೀಲ್ (23) ಚಾಕುವಿನಿಂದ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿರುವ ಆರೋಪಿ ಇಗ ಪೊಲೀಸರ ಅತಿಥಿಯಾಗಿದ್ದಾನೆ,

ಕುಣಿಗಲ್ ಪಟ್ಟಣದಲ್ಲಿ ಚಾಕು ಇರಿತಕ್ಕೆ ಒಳಗಾದ ಮಂಗಳಮುಖಿ ಹನೀಶಾ!

ಫೇಸ್‌ಬುಕ್ ಸ್ನೇಹ (Facebook Friend) ಕಳೆದೊಂದು ವರ್ಷದಿಂದ ಹನೀಶಾ ಹಾಗೂ ಆದೀಲ್ ಇಬ್ಬರು ಸಾಮಾಜಿಕ ಜಾಲತಾಣ ಫೇಸ್ ಬುಕ್‌ನಲ್ಲಿ ಪರಿಚಯವಾಗಿ ಸ್ನೇಹ ಬೆಳೆದು ಬಳಿಕ ಆದೀಲ್ ಹನೀಶಾ ಅವರ ಮನೆ ಕುಣಿಗಲ್‌ ಗೆ ಬಂದು ನನಗೆ ತಂದೆ ತಾಯಿ ಯಾರು ಇಲ್ಲ, ನಾನು ಒಬ್ಬ ಅನಾಥ ಎಂದು ಹೇಳಿಕೊಂಡು ಹನೀಶಾ ಅವರ ಮನೆಯಲ್ಲಿ ಕಳೆದ ನಾಲ್ಕು ಐದು ತಿಂಗಳಿನಿಂದ ವಾಸವಾಗಿದ್ದ ಆದೀಲ್ ಹನೀಶಾ ಮನೆಯ ಕುಟುಂಬ ನಿರ್ವಹಣೆಯನ್ನು ಆತನೆ ಮಾಡುತ್ತಿದ್ದ ಎನ್ನಲಾಗಿದೆ ಈ ನಡುವೆ ಹನೀಶಾ ಹಾಗೂ ಆದೀಲ್ ಇಬ್ಬರು ಒಬ್ಬರನ್ನೋಬ್ಬರು ಪ್ರೀತಿಸಿ ಮದುವೆಯಾಗಲು ತಿರ್ಮಾನಿಸಿದ್ದು ಆದರೆ ಕೆಲ ವಿಚಾರವಾಗಿ ಹನೀಶಾ ಹಾಗೂ ಆದೀಲ್ ನಡುವೆ ಇತ್ತಿಚೆಗೆ ವೈಮನಸ್ಸು ಉಂಟಾಗಿ ಆಗಾಗ ಗಲಾಟೆಯಾಗಿ ಬಳಿಕ ಆದೀಲ್ ಹನೀಶಾಳನ್ನು ಎಲ್ಲೂ ಕೆಲಸಕ್ಕೆ ಹೋಗಬಾರದೆಂದು ಎಚ್ಚರಿಕೆ ನಿಡಿದ್ದನು

ಈ ವಿಷಯವಾಗಿ ಹನೀಶಾ ಮೇಲೆ ಆದೀಲ್ ಹಲ್ಲೆ ಸಹ ನನಡೆಸಿದ್ದ ಎನ್ನಲಾಗಿದೆ ಬಳಿಕ ಆದೀಲ್ ತನ್ನ ಊರಿಗೆ (ಮಂಡ್ಯಗೆ) ಹೋಗಿ ಬರುವುದಾಗಿ ತಿಳಿಸಿ ಹೋಗಿದ್ದು ಬಳಿಕ ಆಗಸ್ಟ್ (28) ಬುಧವಾರ ಕುಣಿಗಲ್‌ಗೆ ಬಂದ ಆದೀಲ್ ದೂರವಾಣಿ ಮೂಲಕ ಹನೀಶಾಳಿಗೆ ಕರೆ ಮಾಡಿ ಮಾತನಾಡೋಣ ಬಾ ಎಂದು ಪಟ್ಟಣದ ಗ್ರಾಮ ದೇವತೆ ಸರ್ಕಲ್ ಬಳಿ ಮಂಗಳಮುಖಿ ಹನೀಶಾಳನ್ನು ಕರೆಸಿಕೊಂಡಿದ್ದಾನೆ ಈ ವೇಳೆ ಹನೀಶಾ ಬಳಿ ಪೋನ್ ಕೊಡು ಎಂದು ಕೇಳಿದ್ದಾನೆ ಪೋನ್ ಏಕೆ ಕೊಡಬೇಕು ಎಂದು ಹನೀಶಾ ಹೇಳಿದಾಗ ಕುಪಿತಗೊಂಡ ಆದೀಲ್ ತನ್ನ ಬಳಿಯಿದ್ದ ಚಾಕುವಿನಿಂದ ಹನೀಶಾಳ ಹೊಟ್ಟೆಗೆ ಇರಿದಿದ್ದಾನೆ ಈ ವೇಳೆ ಆಕೆ ಕಿರುಚಿಕೊಂಡು ಸ್ವಲ್ಪದೂರ ಒಡಿಹೋಗಿದ್ದಾಳೆ ಇದರಿಂದ ಗಾಬರಿಗೊಂಡ ಆದೀಲ್ ಅಲ್ಲಿಂದ ಪರಾರಿಯಾಗಲು ಯತ್ನಿಸಿದಾಗ ಆತನನ್ನು ಸ್ಥಳಿಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಹಲ್ಲೆಗೆ ಒಳಗಾದ ಮಂಗಳಮುಖಿ ಹನೀಶಾಳಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು ಕುಣಿಗಲ್ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ @publicnewskunigal