ಶ್ರಾವಣ ಮಾಸದ ಪ್ರಯುಕ್ತ ಅದ್ದೂರಿಯಾಗಿ ಜರುಗಿದ ಬೆಳ್ಳಿ ಬೆಟ್ಟದ ಶ್ರೀ ನರಸಿಂಹಸ್ವಾಮಿ ಉತ್ಸವ! ಹಲವರು ಭಾಗಿ
ಕುಣಿಗಲ್ ತಾಲ್ಲೂಕಿನ ಹುಲಿಯೂರುದುರ್ಗ ವ್ಯಾಪ್ತಿಯ ಮಾದುಗೋನಹಳ್ಳಿ ಗ್ರಾಮದಲ್ಲಿರುವ ಬೆಳ್ಳಿ ಬೆಟ್ಟದ ಶ್ರೀ ನರಸಿಂಹಸ್ವಾಮಿ ದೇವಾಲಯದಲ್ಲಿ ಭಾನುವಾರ ಶ್ರಾವಣ ಮಾಸದ ಪ್ರಯುಕ್ತ ದೇವರ ಉತ್ಸವವನ್ನು ಏರ್ಪಡಿಸಲಾಗಿತ್ತು ಕಾರ್ಯಕ್ರಮದಲ್ಲಿ ಶ್ರೀ ಹುಲಿಯೂರಮ್ಮ,ಶ್ರೀ ಭೈರವೇಶ್ವರ ಹಾಗೂ ಶ್ರೀ ಮಾರಮ್ಮ ದೇವರಗಳನ್ನು ಮೆರವಣಿಗೆಯ ಮೂಲಕ ಬೆಳ್ಳಿ ಬೆಟ್ಟಕ್ಕೆ ಕರೆದೊಯ್ದು ಕಲ್ಯಾಣಿಯ ಬಳಿ ಹೂ ಹೊಂಬಾಳೆಯೊಂದಿಗೆ ಎಲ್ಲಾ ಉತ್ಸವ ಮೂರ್ತಿಗಳಿಗೂ ಅಲಂಕರಿಸಿ ಪೂಜೆ ಸಲ್ಲಿಸಿ ಶ್ರೀ ನರಸಿಂಹಸ್ವಾಮಿ ದೇವಾಲಯದ ಸುತ್ತಲು ಪ್ರದಕ್ಷಣೆ ಮಾಡಲಾಯಿತು ಇದೆ ವೇಳೆ ಸುತ್ತಮುತ್ತಲ ಗ್ರಾಮದ ಮಹಿಳೆಯರು ತಂಬ್ಬಿಟ್ಟಿನ ಆರತಿ ಮಾಡಿ ಪೂಜೆ ಸಲ್ಲಿಸಿದರು
ಪ್ರತಿವರ್ಷ ಉತ್ತಮ ಮಳೆಯಾಗಿ ಬೇಳೆಯಾಗಿ ನಾಡು ಸಮೃದ್ಧಿಯಾಗಲಿ ಎಂದು ಊರಾಚೆ ಇರುವ ಬೆಳ್ಳಿ ಬೆಟ್ಟದ ಶ್ರೀ ನರಸಿಂಹ ಸ್ವಾಮಿಯ ದೇವಾಲಯದ ಬಳಿ ಸುತ್ತಮುತ್ತಲ ಗ್ರಾಮಸ್ಥರು ಸೇರಿ ಉತ್ಸವ ಏರ್ಪಡಿಸಿ ಗ್ರಾಮದಲ್ಲಿ ಪ್ರತಿ ಮನೆಯಲ್ಲು ಶೇಖರಿಸಿ ತಂದ ದವಸ ಧಾನ್ಯಗಳಲ್ಲಿ ಪ್ರಸಾದ ತಯಾರಿಸಿ ಉತ್ಸವಕ್ಕೆ ಬರುವ ಭಕ್ತರಿಗೆ ಉಣಬಡಿಸುವುದು ಇಲ್ಲಿ ವಾಡಿಕೆ ಇಲ್ಲಿ ದೇವರ ಉತ್ಸವ ನಡೆದ ಬಳಿಕ ಮಳೆಯಾಗಿ ಬೇಳೆಯಾಗುವುದು ಎಂದು ಗ್ರಾಮಸ್ಥರ ನಂಬಿಕೆಯಾಗಿದೆ ಇದಲ್ಲದೆ ಬಂಡೆ ಕಲ್ಲಿನ ಮೇಲೆ ಕುಳಿತು ಯಾವುದೆ ಎಲೆ ಇಲ್ಲದೆ ಕಲ್ಲಿನ ಮೇಲೆ ಅನ್ನ ಸಾರು ಬಡಿಸಿಕೊಂಡು ಪ್ರಸಾದ ಸೇವನೆ ಮಾಡುವುದು ಇಲ್ಲಿಯ ವಿಶೇಷ ಈ ರೀತಿಯಲ್ಲಿ ಪ್ರಸಾದ ಸೇವನೆ ಮಾಡಿದರೆ ಯಾವುದೆ ರೀತಿಯ ರೋಗ ಬಾದೆಗಳು ಬಾರದೆ ಒಳಿತಾಗುವುದು ಎಂಬ ನಂಬಿಕೆ ಇಲ್ಲಿನ ಭಕ್ತರದು @publicnewskunigal